[t4b-ticker]

ಕರ್ನಾಟಕ ಆರೋಗ್ಯ ಇಲಾಖೆ ಟೆನ್ಷನ್ ಹೆಚ್ಚಿಸಿದ ಈ ಕಾಯಿಲೆ.. ಸಿಲಿಕಾನ್ ಸಿಟಿ ಜನರೇ ಆರೋಗ್ಯದ ಬಗ್ಗೆ ಕೊಂಚ ಎಚ್ಚರ

1 min read
Share it

 

ಬೆಂಗಳೂರು: ಈ  ವರ್ಷ ಬೇಸಿಗೆಯ ಬಿರುಬಿಸಿಲು ರಾಜಧಾನಿ ಸೇರಿದಂತೆ ರಾಜ್ಯದ ಜನರನ್ನು ಬಿಡದೆ ಕಾಡುತ್ತಿದೆ. ಈ ನಡುವೆ ಕೆಲವು ದಿನಗಳಿಂದ ತಾಪಮಾನ ಏರಿಕೆಯಿಂದಾಗಿ ನಾನಾ ಆರೋಗ್ಯ ಸಮಸ್ಯೆ ಶುರುವಾಗಿದೆ.  ಅದರಲ್ಲೂ  ಬೆಂಗಳೂರು ಜನರನ್ನು  ಬಿಟ್ಟು ಬಿಡದೇ ಅದೊಂದು ಕಾಯಿಲೆ ಕಾಡುತ್ತಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ಕಾಯಿಲೆ ಪ್ರಕರಣಗಳು ಅಧಿಕವಾಗಿದೆ.

 

ಬೆಂಗಳೂರಿನ ಜನರೇ ಆರೋಗ್ಯದ ಬಗ್ಗೆ  ಎಚ್ಚರವಾಗಿರಬೇಕು.  ಅತಿಯಾದ ತಾಪಮಾನ ಜನರನ್ನು ಅತಿಸಾರ ರೋಗದತ್ತ ವಾಲಿಸುತ್ತಿದೆ. ಸೆಕೆ ಬಾಯರಿಕೆ ಅಂತ ಸಿಕ್ಕ ಸಿಕ್ಕ ಕಡೆ ನೀರಿನ ನೈರ್ಮಲ್ಯ ನೋಡದೇ ಕುಡಿಯುವುದರಿಂದ ಕೂಡ ಅತಿಸಾರದ ಮೂಲಕ ಅಪಾಯಕ್ಕೆ ಆಹ್ವಾನ ಕೊಟ್ಟಿದೆ. ನಿಮಗೆ  ಜ್ವರ,  ಹೊಟ್ಟೆ ನೋವು, ಕರುಳು ಬೇನೆ, ವೈರಲ್‌ ,ಟೈಫಾಯಿಡ್‌, ಹೆಪಟೈಟಿಸ್‌ ನೋವಿನಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಯಾಕಂದ್ರೆ ರಾಜ್ಯದಲ್ಲಿ ಕಳೆದೊಂದು ತಿಂಗಳಿನಿಂದ ಅಕ್ಯುಟ್‌ ಡಯಾರಿಯಲ್‌ ಡಿಸೀಸ್  ಏರಿಕೆಯಾಗುತ್ತಿದ್ದು, ಅದರ ಅಂಕಿ ಅಂಶಗಳೇ ಆರೋಗ್ಯ ಇಲಾಖೆಯ ಟೆನ್ಷನ್ ಹೆಚ್ಚಿಸಿದೆ.

 

 

ಈ ಬಾರಿ ಬೇಸಿಗೆಯಲ್ಲಿನ ಬಿರು ಬಿಸಿಲು ಸಿಲಿಕಾನ್ ಸಿಟಿ ಬೆಂಗಳೂರು ಸೇರಿದ್ದಂತೆ ರಾಜ್ಯದ ಜನರನ್ನ ಬಿಡದೆ ಕಾಡುತ್ತಿದೆ. ಬಿಸಿಲ ಧಗೆ ಬೆಂಗಳೂರಿನಲ್ಲಿ ಏರಿಕೆಯಾಗ್ತಿದೆ.. ಕರುಳು ಬೇನೆ, ಟೈಫಾಯಿಡ್‌, ವೈರಲ್‌ ಹೆಪಟೈಟಿಸ್‌ನಂತಹ ಕರುಳು ಸಂಬಂಧಿ ರೋಗಗಳು  ಅಧಿಕವಾಗಿದೆ.. ಕಳೆದ ಎರಡು ತಿಂಗಳಲ್ಲಿ  ಬರೋಬ್ಬರಿ 34,276 ಮಂದಿಗೆ ಎಡಿಡಿ ಅಂದ್ರೆ ಅಕ್ಯುಟ್‌ ಡಯಾರಿಯಲ್‌ ಡಿಸೀಸ್‌ ಕಾಣಿಸಿಕೊಂಡಿದೆ.ಹವಾಮಾನ ಬದಲಾವಣೆ ಮುಂತಾದ ಕಾರಣಗಳಿಂದ ಕರಳು ಬೇನೆ ಗ್ಯಾಸ್ಟ್ರೋ ಎಂಟರಿಟೈಸ್ ಸೇರಿದಂತೆ ಕರುಳು ಸಂಬಂಧಿ ಖಾಯಿಲೆ ಹೆಚ್ಚಾಗಿ ಕಂಡು ಬರುತ್ತಿದೆ. ಒಟ್ಟಿನಲ್ಲಿ ಕರುಳುಬೇನೆ ಪ್ರಕರಣಗಳಲ್ಲಿ ರೋಗಿಗಳಿಗೆ ಸಾಕಷ್ಟು ದ್ರವಾಹಾರ ನೀಡಬೇಕಿದ್ದು ಇಲ್ಲವಾದಲ್ಲಿ ಮೂತ್ರಪಿಂಡ ವೈಫಲ್ಯದ ಸಾಧ್ಯತೆಗಳು ಹೆಚ್ಚಿರುತ್ತದೆ. ಹೀಗಾಗಿ ವೈದ್ಯರು ಎಚ್ಚರಿಕೆ ಅತ್ಯಗತ್ಯ ಅಂತಿದ್ದು ಸಿಲಿಕಾನ್‌ ಸಿಟಿ ಜನರು ಬೆಸಿಗೆ ಮುಗಿಯುವವರೆಗೂ ಎಚ್ಚರಿಕೆ ವಹಿಸಬೇಕು.

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?