ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಸಾಲ ಪಡೆದವರಿಗೆ RBI ಇಂದ ಸಿಹಿ ಸುದ್ದಿ..EMI ಕಡಿಮೆ!
1 min read
ಸಾಲ ಪಡೆದ ಗ್ರಾಹಕರಿಗೆ ಇಂದು ಭಾರತೀಯ ರಿಸರ್ವ್ ಬ್ಯಾಂಕ್ ಸಿಹಿ ಸುದ್ದಿ ನೀಡಿದೆ. ಸತತ 2ನೇ ಬಾರಿಗೆ 25 ಬೇಸಿಸ್ ಪಾಯಿಂಟ್ ರೆಪೋ ದರ ಇಳಿಕೆ ಮಾಡಿದೆ. ಜಾಗತಿಕ ತಲ್ಲಣ, ಷೇರುಪೇಟೆ ಕುಸಿತದ ಆತಂಕದ ಮಧ್ಯೆ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ಈ ದಿಟ್ಟ ನಿರ್ಧಾರ ಕೈಗೊಂಡಿದೆ. ರೆಪೋ ದರ ಅಂದ್ರೆ RBI ಸರ್ಕಾರಿ ಭದ್ರತೆಗಳ ವಿರುದ್ಧ ವಾಣಿಜ್ಯ ಬ್ಯಾಂಕುಗಳಿಗೆ ಹಣವನ್ನು ನೀಡುವ ಬಡ್ಡಿ ದರವಾಗಿದೆ. 25 ಬೇಸಿಸ್ ಪಾಯಿಂಟ್ ರೆಪೋ ದರ ಇಳಿಸಿದ ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಶೇ. 6.25 ರಿಂದ ಶೇ. 6ಕ್ಕೆ ಇಳಿಕೆಯಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್‌ಗಳ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡಿರೋದ್ರಿಂದ ಸಾಲ ಪಡೆದ ಗ್ರಾಹಕರಿಗೆ ಇದರಿಂದ ನೇರ ಲಾಭ ಆಗಲಿದೆ. ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಸಾಲದ ಬಡ್ಡಿ ದರ ಕೂಡ ಇಳಿಕೆ ಆಗಲಿದೆ. RBI ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಇಂದು ದ್ವೈಮಾಸಿಕ ನೀತಿಯನ್ನು ಪ್ರಕಟಿಸಿದರು. ಅದರಲ್ಲಿ ದೇಶದಲ್ಲಿ ಹಣದುಬ್ಬರ ನಿಯಂತ್ರಣದಲ್ಲಿ ಇರೋದ್ರಿಂದ ರೆಪೋ ದರ ಇಳಿಕೆ ಮಾಡಲಾಗಿದೆ. ಇದ್ರಿಂದಾಗಿ ಜನರು ಹೆಚ್ಚಿನ ಬ್ಯಾಂಕ್ ಸಾಲ ಪಡೆಯುತ್ತಾರೆ. ಜೊತೆಗೆ ಪಡೆದ ಸಾಲವನ್ನು ಖರೀದಿಗೆ ಖರ್ಚು ಮಾಡ್ತಾರೆ. ಇದರಿಂದಾಗಿ ಆರ್ಥಿಕತೆಯು ಚೇತರಿಕೆ ಆಗಲು ಸಾಧ್ಯ ಎಂದು ತಿಳಿಸಿದ್ದಾರೆ. ಸತತ 2ನೇ ಬಾರಿಗೆ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಇಳಿಸಿದೆ. 25 ಬೇಸಿಸ್ ಪಾಯಿಂಟ್ ರೆಪೋ ದರ ಇಳಿಸಿರೋದ್ರಿಂದ ಬ್ಯಾಂಕ್ ಸಾಲ ಪಡೆದ ಗ್ರಾಹಕರಿಗೆ ಬಡ್ಡಿ ದರ ಇಳಿಕೆ ಮಾಡಲಾಗುತ್ತದೆ. ಶೀಘ್ರವೇ ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಸಾಲದ ಬಡ್ಡಿ ದರ ಇಳಿಕೆ ಮಾಡುವ ನಿರ್ಧಾರವನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ಆಫರ್ ನೀಡಲಿವೆ.
