ಯತ್ನಾಳ ಗೌಡರ ಬಾಯಿಗೆ ಇತಿ ಮಿತಿ ಇಲ್ಲದ ಕಾರಣ ರಾಷ್ಟ್ರೀಯ ನಾಯಕರು ಉಚ್ಚಾಟನೆ-ಪಂಚಮಸಾಲಿ ಮುಖಂಡ ವಿಜುಗೌಡ ಪಾಟೀಲ
1 min read
ವಿಜಯಪುರ : ಪಂಚಮಸಾಲಿ ಸಮಾಜ ಒಗ್ಗೂಡಿಸುವ ಕೆಲಸ ದಿವಂಗತ ಎಸ್ ಆರ್ ಕಾಶಪ್ಪನವರ ಮಾಡಿದ್ದರು. ಬಳಿಕ ಇಂಡಿ ಪಟ್ಟಣದ ದಾದಾಗೌಡರು ನೇತೃತ್ವದಲ್ಲಿ ಹಾಗೂ ಯಡವಣ್ಣನವರ ಅವರ ನೇತೃತ್ವದಲ್ಲಿ ಸಮಾಜ ಸಂಘಟನೆ ಮಾಡಲಾಗಿತ್ತು ಎಂದು ಪಂಚಮಸಾಲಿ ಮುಖಂಡ ವಿಜುಗೌಡ ಪಾಟೀಲ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಮಾಜದ ಮಹಾಂತ ಶಿವಾಚಾರ್ಯರು ಸಮಾಜದ ಸಲುವಾಗಿ ಸಾಕಷ್ಟು ಪ್ರಯತ್ನ ಮಾಡಿದ್ದರು. ಬಳಿಕ ಕೂಡಲ ಸಂಗಮದ ಬಸವಜಯ ಮೃತ್ಯೂಂಜಯ ಸ್ವಾಮಿಗಳಿಗೆ ಮಾಡಲಾಯಿತು. ರಾಜ್ಯದಲ್ಲಿ ಹೆಚ್ಚಿರುವದು ಪಂಚಮಸಾಲಿ ಸಮಾಜ. ಮೈಕ್ ಸಿಕ್ಕರೆ ಹಿಗ್ಗಾ ಮುಗ್ಗಾ ಮಾತನಾಡುವ ಯತ್ನಾಳ ಗೌಡರ ಬಾಯಿಗೆ ಇತಿ ಮಿತಿ ಇಲ್ಲದ ಕಾರಣ ರಾಷ್ಟ್ರೀಯ ನಾಯಕರು ಉಚ್ಚಾಟನೆ ಮಾಡಿದರು. ಪಕ್ಷ ಉಚ್ಚಾಟನೆ ಮಾಡಿದ ಬಳಿಕ ಕೂಡಲಸಂಗಮ ಶ್ರೀಗಳು ಒಬ್ಬರಿಗಾಗಿ ಗಡುವು ಕೊಡುವ ಕೆಲಸ ಮಾಡುತ್ತಿದ್ದಾರೆ. ಇವರು ಬಿಜೆಪಿ ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡುತ್ತಿದ್ದಾರೆ. ಶ್ರೀಗಳು ಸಮಾಜಕ್ಕೆ ತಪ್ಪು ಸಂದೇಶ ಕೊಡುವ ಕೆಲಸ ಮಾಡಬಾರದು. ನಾವ್ಯಾರು ಪಂಚಮಸಾಲಿಗರಿಗೆ ಹುಟ್ಟಿಲ್ಲವಾ. 2008 ರಲ್ಲಿ ನಲ್ಲಿ ನನ್ನ ಚುನಾವಣೆ ಮಾಡಿದಿರಿ. 2018, 2023 ರಲ್ಲಿ ಏನು ಮಾಡಿದಿರಿ. ನಾನು ಜೀವನದಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಲ್ಲ ಎಂದು ಹೇಳಿದರು.
ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಇತಿ ಮಿತಿಗೆ ತಕ್ಕಂತೆ ಖರ್ಚು ಮಾಡಿನಿ. 2023 ರಲ್ಲಿ ಬಬಲೇಶ್ವರಕ್ಕೆ ಬಂದು ಬಿಜೆಪಿಗೆ ಮತ ಹಾಕಿ ಎನ್ನಲಿಲ್ಲ, ವಿಜುಗೌಡರಿಗೆ ಮತ ಹಾಕಿ ಎನ್ನಲಿಲ್ಲ ಯತ್ನಾಳ ಅವರು. ನಾನು ಜನರ ಸಲುವಾಗಿ ಬಬಲೇಶ್ವರ ವಿಧಾನ ಸಭಾ ಮತಕ್ಷೇತ್ರದ ಓಡಾಟ ಮಾಡುತ್ತಿರುವೆ. ನನಗೆ ಯಾರೇ ಹಣ ಕೊಟ್ಟಿಲ್ಲ, ಹಣ ಕೊಟ್ಟಿದ್ದರ ಬಗ್ಗೆ ದಾಖಲೆ ಕೊಡಿ ರಾಜಕೀಯ ನಿವೃತ್ತಿ ಕೊಡುವೆ. ಕೂಡಲ ಸಂಗಮ ಶ್ರೀಗಳು ಯತ್ನಾಳ ಅವರ ವಿಚಾರವಾಗಿ ಭಾಗವಹಿಸಲು ಹೋಗಬೇಡಿ. ಯಡಿಯೂರಪ್ಪ ಅವರ ಮನೆಯಲ್ಲಿ ಯತ್ನಾಳ ಅವರ ಕಾಲಿಗೆ ಬೀಳುತ್ತಾರೆ. ಯಡಿಯೂರಪ್ಪ ನವರು ನಿಮಗೆ ಟಿಕೆಟ್ ಕೊಟ್ಟರು. ನಾನು ಸೋತರೂ ನನಗೆ ನಿಗಮದ ಅಧ್ಯಕ ಮಾಡಿದರು. ವಿಶ್ವ ಹಿಂದೂ ಪರಿಷತ್ ನ ಅದ್ಯಕ್ಷ ಗೋಪಾಲ್ ಜಿ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಚಂತನ್ ಮುಸ್ಲಿಂ ಮರಿಗೆ ಬೈಯ್ಯೂವದು ರಾತ್ರೀ ಅವರ ಮನೆಯ ಡಬ್ಬಿ ತಂದು ಊಟ ಮಾಡುವದು. ರಾಜ್ಯ ತಿರುಗಾಡಿದ ಇವರು ಯಾರಿಗಾದರೂ ಶಾಸಕ ಮಾಡಿದ್ದಾರಾ. ಇವತ್ತು ಮಹಾನಗರ ಪಾಲಿಕೆ ಸದಸ್ಯರ ಪರಿಸ್ಥಿತಿ ಏನಾಯಿತು. ಇವತ್ತು ಯತ್ನಾಳ ಹಾಗೂ ಉಸ್ತುವಾರಿ ಸಚಿವರು ಸೇರಿಕೊಂಡು ಇವರಿಗೆ ಅನರ್ಹ ಮಾಡಿದರು. ವಿಜಯಪುರ ಸಿಂಗಾಪುರ್ ದುಬೈ ಮಾಡಿನಿ ಎಂದು ಹೇಳುವ ನೀವು ಅದಕ್ಕೆ ಹಣ ಕೊಟ್ಟಿದ್ದೇ ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ಎಂದರು.
1988 ರಿಂದ 1992 ರ ವರೆಗೆ ನೀವು ಏನಾಗಿದ್ದೀರಿ. ನೀವು ಬಾಯಿಗೆ ಸ್ವಲ್ಪ ಲಗಾಮ್ ಹಾಕಿಕೊಳ್ಳಿ. ಹಿಂದೆ ಇದೇ ಕೂಡಲಸಂಗಮ ಶ್ರೀಗಳಿಗೆ ಬಾಯಿಗೆ ಬಂದಂಗೆ ಮಾತನಾಡಿದ್ದಾರೆ. ಸಮಾಜ ನಿಮ್ಮ ಬೆನ್ನು ಹಿಂದೆ ನೀವು ಯತ್ನಾಳ ಅವರ ವಿಚಾರವಾಗಿ ಮಾತನಾಡುವದು ಬಿಡಿ. ಇರದಿದ್ದರೆ ಮುಂಬರುವ ದಿನದಲ್ಲಿ ಸಮಾಜ ನಿಮ್ಮನ್ನು ಕಡೆಗಣಿಸುತ್ತದೆ. ಅಪ್ಪ ಮಕ್ಕಳು ಬ್ರಷ್ಟರು ವಿದೇಶದಲ್ಲಿ ಆಸ್ತಿ ಮಾಡಿರಿ ಅಂತಾರೆ. ಇವರು ಕಗ್ಗೋಡ ಗೋ ಶಾಲೆಗೆ ಹಣ ಕೊಟ್ಟು ಬನ್ನಿ ಅನ್ನುತ್ತಾರೆ. ದನಗಳೇನು ಹಣ ತಿನ್ನುತ್ತವಾ…? ಕೂಡಲ ಸಂಗಮ ಶ್ರೀಗಳ ಜೊತೆ ಕೂಡಿಕೊಂಡು ನಾಟಕ ಮಾಡುವದು ಬಿಡಿ. ಸಮಾಜಕ್ಕೆ ತಪ್ಪು ದಾರಿಗೆ ಎಳೆಯುವ ಕೆಲಸ ಬಿಡಿ. ಕೂಡಲ ಸಂಗಮ ಶ್ರೀಗಳು ಸಹಿತ ಇದನ್ನು ಬಿಟ್ಟು ಬಿಡಬೇಕು. ಶ್ರೀಗಳು ಸಮಾಜದ ಸಂಘಟನೆ ಮಾಡಿಕೊಂಡು ಬಂದಿರಿ ಅದನ್ನು ಮಾಡಬೇಕು ರಾಜಕಾರಣಿಗಳ ಹಿಂದೆ ಬೆನ್ನು ಹತ್ತಬೇಡಿ ಎಂದ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಹೇಳಿದರು.
