ನಾಡಿನ ಸಾಮಾನ್ಯ ಜನರ ಮೇಲೆ ದರ ಏರಿಕೆ ಮಾಡುವ ಮೂಲಕ ಸಂಕಷ್ಟಕ್ಕೆ ದೂಡಿದ ರಾಜ್ಯ ಸರ್ಕಾರ -ನಿಖಿಲ್ ಕುಮಾರಸ್ವಾಮಿ
1 min read
ಬೆಂಗಳೂರು : ರಾಜ್ಯ ಸರ್ಕಾರ ಕಳೆದ ಎರಡು ವರ್ಷಗಳಿಂದ ಆಡಳಿತಕ್ಕೆ ಬಂದಾಗಿನಿಂದ ಎರಡು ಇನ್ನು ಪೂರೈಸಿಲ್ಲ, ಎರಡು ವರ್ಷಗಳಿಂದ ಹಂತ ಹಂತವಾಗಿ ನಾಡಿನ ಸಾಮಾನ್ಯ ಜನರ ಮೇಲೆ ದರ ಏರಿಕೆ ಮಾಡುವ ಮೂಲಕ ಸಂಕಷ್ಟಕ್ಕೆ ದೂಡಿದೆ.ಆ ಹಿನ್ನೆಲೆಯಲ್ಲಿ ಸಾಕಷ್ಟು ಚರ್ಚೆಗಳ ಆಗ್ತಾ ಇದೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಒಂದು ರಾಜಕೀಯ ಪಕ್ಷವಾಗಿ ಜೆಡಿಎಸ್ ತಮ್ಮ ಕರ್ತವ್ಯವನ್ನು,ಜವಾಬ್ದಾರಿಯನ್ನ ಜೆಡಿಎಸ್ ಮಾಡ್ತಾ ಇದೆ. ಆ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಬೆಳಗ್ಗೆಯಿಂದ ಸಾಕಪ್ಪ ಸಾಕು ಅಂತ ಅಭಿಯಾನ ಪ್ರಾರಂಭ ಮಾಡಿದ್ದೇವೆ. ಭ್ರಷ್ಟಾಚಾರದ ಬಗ್ಗೆ ಹೋಗ್ತಾ ಹೋಗ್ತಾ ಮಾತನಾಡುತ್ತೇನೆ. ಸಿಎಂ ಆರ್ಥಿಕ ಸಲಹೆಗಾರರು ಅವ್ರ ಹೇಳಿಕೆ ಗಮನಿಸಿದ್ದೇನೆ. ಅವರಿಗೆ ನಾನು ಅಭಿನಂದನೆಗಳು ಸಲ್ಲಿಸುತ್ತೇನೆ. ಸರ್ಕಾರ ಅಂಗವಾಗಿ ಅದರಲ್ಲೂ ಆರ್ಥಿಕ ಸಲಹೆಗಾರರು ಹೇಳಿರೋದು. ಭ್ರಷ್ಟಾಚಾರದಲ್ಲಿ ರಾಜ್ಯ ಸರ್ಕಾರ ನಂಬರ್ ಒಂದನೇ ಸ್ಥಾನದಲ್ಲಿ ಇದೆ ಎಂದು ಹೇಳಿದರು.
ಗ್ಯಾರಂಟಿಗಳಿಂದ ಅಭಿವೃದ್ಧಿ ಕುಠಿತವಾಗಿದೆ ಅಂತಸ ಬಸವರಾಯರೆಡ್ಡಿಯವರು ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಐದು ಗ್ಯಾರಂಟಿ ಘೋಷಣೆ ಮಾಡಿರುವ ಸರ್ಕಾರ ಅನುಷ್ಠಾನ ಬಗ್ಗೆ ಮಾತಾಡಿದ್ರು, ಅವ್ರು ಕೊಟ್ಟ ಮಾತಿನಂತೆ ನಡೆದುಕೊಂಡ್ರಾ ಎಂದು ನಾನು ಸರ್ಕಾರಕ್ಕೆ ಪ್ರಶ್ನೆ ಇಟ್ಟಿದ್ವಿ. ರೈತರಿಗೆ ಶಕ್ತಿ ತುಂಬಿಸಬೇಕು,ಅವರಿಗೆ ಬೆನ್ನೆಲುಬು ಆಗಿ ನಿಲ್ಲಬೇಕು ಅಂತ ಮೋದಿ ಅವ್ರು. ೨೦೧೯ ರಲ್ಲಿ ಪ್ರತಿಯೊಬ್ಬ ರೈತರ ಖಾತೆಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಿದ್ರು. ಅವ್ರು ಕೊಟ್ಟ ಮಾತನ್ನ ಉಳಿಸಿಕೊಂಡಿದ್ದಾರೆ.೨೦೧೯ ರಿಂದ ಇಲ್ಲಿಯವರೆಗೆ ಯಾವುದೇ ಮಾತು ತಪ್ಪದೆ ಉಳಿಸಿಕೊಂಡಿದ್ದಾರೆ. ಅದರೆ ಇಲ್ಲಿ ಗ್ಯಾರಂಟಿಗಳು ಉಪಚುನಾವಣೆ ಸಾಕ್ಷಿ, ಚನ್ನಪಟ್ಟಣ, ಶಿಗ್ಗಾಂವಿಯಲ್ಲಿ ಮತ ಚಲಾವಣೆ ೪೮ ಗಂಟೆ ಮುನ್ನ ಹಣ ಬಿಡುಗಡೆ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ರಾಮನಗರ ಜಿಲ್ಲೆಯಲ್ಲಿ ಫಲಾನುಭವಿಗಳ ಸಭೆ ಕರೆದುನಮ್ಮ ರಾಮನಗರದ ಶಾಸಕರು ಧಮ್ಕಿ ಹಾಕಿದ್ರು. ಸಂಸದರಿಗೆ ಮತ ಹಾಕಿಲ್ಲ ಅಂತ ಗ್ಯಾರಂಟಿ ನಿಲ್ಲಿಸುತ್ತೇವೆ ಎಂದು ಬೆದರಿಕೆ ಹಾಕಿದ್ರು, ಇದು ಒಂದು ದಿನ ಹೋರಾಟ ಅಲ್ಲ,ವಾರದ ಹೋರಾಟ ಅಲ್ಲ ಆ ಹಿನ್ನೆಲೆಯಲ್ಲಿ ಈ ವೆಬ್ ಸೈಟ್ ಲಾಂಜ್ ಮಾಡಿದ್ದೇವೆ ಎಂದು ಹೇಳಿದರು.
ಹಿಮಾಚಲ ಪ್ರದೇಶ ದಿವಾಳಿಯಾಗಿದೆ. ತೆಲಂಗಾಣದಲ್ಲಿ ಸಿಎಂ ಎಷ್ಟು ಸಾಲ ಆಗಿದೆ ಅಂತ ಗೊತ್ತಾಗಿಲ, ಗ್ಯಾರಂಟಿಗಳಿಂದ ಸಾಲ ಆಗಿದೆ. ಮುಂದೆ ಎಲ್ಲಿ ದಿವಾಳಿ ಆಗುತ್ತೆ ಅಂತ ಅಲ್ಲಿನ ಸಿಎಂ ಹೇಳಿದ್ದಾರೆ . ಗ್ಯಾರಂಟಿ ಘೋಷಣೆ ಮಾಡುವ ಮುನ್ನ ನಮ್ಮ ಆರ್ಥಿಕ ಪರಿಸ್ಥಿತಿ ಅವಲೋಕಿದೆ ತೀರ್ಮಾನ ಮಾಡಿದ್ದಾರೆ. ನಾವು ಗ್ಯಾರಂಟಿ ಯೋಜನೆ ನಮ್ಮ ವಿರೋಧ ಇಲ್ಲ, ಅದರೆ ನೀವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೀರಾ,ಆಡಳಿತ ಪಕ್ಷ ಶಾಸಕರು,ಅನುಭವಿ ಶಾಸಕರು ಇದ್ದಾರೆ.ಆಡಳಿತ ಪಕ್ಷದ ಶಾಸಕರ ಜೊತೆ ಚರ್ಚೆ ಮಾಡಿದ ಸಂದರ್ಭದಲ್ಲಿ ಅವ್ರ ಪರಿಸ್ಥಿತಿ ನಿಮಗೆ ತಿಳಿಯುತ್ತೆ. ರಾಜ್ಯದಲ್ಲಿ ಅಭಿವೃದ್ಧಿ ಕಾಣದಂತೆ ನೋಡಬಹುದು, ಇತ್ತೀಚೆಗೆ ೧೦ ಕೋಟಿ ನೀಡಿದ್ದಾರೆ, ಆ ೧೦ ಕೋಟಿಯಲ್ಲಿ ಎಷ್ಟು ರಸ್ತೆ ಅಭಿವೃದ್ಧಿ ಮಾಡೋಕೆ ಆಗುತ್ತೆ, ಇದು ಆಡಳಿತ ಪಕ್ಷದ ಶಾಸಕರ ಪರಿಸ್ಥಿತಿಗೆ ತಲುಪಿದೆ. ಎಸ್ಸಿ ಎಸ್ಟಿ ಅಭಿವೃದ್ಧಿ ಗೆ ನಾವು ಶ್ರಮಿಸಿದ್ದೇವೆ ಕಾಂಗ್ರೆಸ್ ಸಂಸದರು ಹೇಳಿದ್ದಾರೆ. ರಾಹುಲ್ ಗಾಂಧಿ ಸಂವಿಧಾನ ಪುಸ್ತಕವನ್ನು ಗಂಟೆ ಅಲ್ಲಾಡಿಸಿದಾಗೆ ಅಲ್ಲಾಡಿಸುತ್ತಾರೆ ಎಂದು ಹೇಳಿದರು.
ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಕ್ಯಾಬಿನೆಟ್ ಸಚಿವರಿಗೆ ಹನಿಟ್ರ್ಯಾಪ್ ಮಾಡಿದ್ದಾರೆ. ಜನರಿಗೆ ತೆರಿಗೆ ಟ್ರ್ಯಾಪ್ ಮಾಡಿದ್ದಾರೆ. ಪ್ರಭಾವಿ ಸಚಿವರು ಸದನದಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ೧೬ ನೇ ಬಜೆಟ್ ಮಂಡಿಸಿರುವ ಸಿದ್ರಾಮಣ್ಣ ಅವ್ರು ಎರಡು ವರ್ಷಗಳಲ್ಲಿ ೨.೨೫ ಕೋಟಿ ಸಾಲ ಮಾಡಿದ್ದಾರೆ. ಸಾಲ ತೆಗೆದುಕೊಂಡಿರೋದು ತಪ್ಪು ಅಂತ ನಾನು ಹೇಳಿಲ್ಲ. ಐತಿಹಾಸಿಕ ಬಜೆಟ್ ಮಂಡಿದ್ದೇವೆ ಅಂತ ಅವ್ರ ಪಕ್ಷದವರು ಬೆನ್ನು ತಟ್ಟಿಕೊಂಡ್ರಿ. ಸಾಲ ಮಾಡಿ ರಾಜ್ಯದ ಜನತೆ ಮೇಲೆ ಎಷ್ಟು ಹೊರೆ ಹಾಕಿದ್ದೀರಾ. ಆ ಸಾಲದ ಹಣದಿಂದ ಎನಾದ್ರು ಮೂಲಸೌಕರ್ಯ ಅಭಿವೃದ್ಧಿ ಗೆ ಬಳಸಿಕೊಳ್ಳಿದ್ದೀರಾ, ಸಾಲವನ್ನು ಅಭಿವೃದ್ಧಿ ದೃಷ್ಟಿಯಿಂದ ಮಾಡಿದ್ದೀರಾ ಅಥವಾ ನೀವು ಸುಳ್ಳು,ಡೊಳ್ಳು ಯೋಜನೆಗಳಿಗೆ ಕೊಟ್ಟಿದ್ದೀರಾ ಇದನ್ನ ಮೊದಲು ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಸ್ಮಾರ್ಟ್ ಮೀಟರ್ ನಲ್ಲಿ ದೊಡ್ಡ ಹಗರಣ ಆಗಿದೆ. ಮುಡಾದಲ್ಲಿ ಸಿಎಂ ವಿರುದ್ಧ ನೀಡಿದ್ದ ಲೋಕಾ ಚೀಟ್ ವಿರುದ್ಧ ಇಡಿ ಕೋರ್ಟ್ ಗೆ ಹೋಗಿದೆ. ಸನ್ಮಾನ ಸಿಎಂ ಸಿದ್ರಾಮಣ್ಣ ಅವ್ರು ಯಾಕೆ ಸೈಟ್ ವಾಪಸ್ ಕೊಡಬೇಕು ಅಂದ್ರು. ಅಮೇಲೆ ಸೈಟ್ ವಾಪಸ್ ನೀಡಿದ್ರು. ಅವ್ರು ತಪ್ಪು ಮಾಡಿಲ್ಲ ಅಂದ್ರೆ ಮತ್ತೆ ಯಾಕೆ ಸೈಟ್ ವಾಪಸ್ ಮಾಡಿದ್ರು. ಅವ್ರ ನೈತಿಕತೆ ಏನು, ನಾನು ವೈಯಕ್ತಿಕವಾಗಿ ತೇಜೋವದೆ ಮಾಡುವ ಉದ್ದೇಶ ಇಲ್ಲ, ವೆಬ್ ಸೈಟ್ ನಲ್ಲಿ ನೀವು ನೋಡಬಹುದು. ಸಚಿವರು,ಶಾಸಕರು ಹೇಳಿಕೆಗಳನ್ನ ವೆಬ್ ಸೈಟ್ ಮಲ್ಲಿ ಇಟ್ಟಿದ್ದೇವೆ. ಇದೇ ವಾರ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಿರ್ಧಾರ ಮಾಡಿದ್ದೇವೆ, ಶಾಸಕರು, ಎಂಎಲ್ಸಿಗಳ,ನಾಯಕರು, ಕಾರ್ಯಕರ್ತರು, ಕುಮಾರಸ್ವಾಮಿ ಅವ್ರ ನೇತೃತ್ವದಲ್ಲಿ ಅಭಿಯಾನ ಮಾಡ್ತಾ ಇದ್ದೇವೆ,ಜನರ ಭಾವನೆಗಳಿಗೆ ಭಾವನೆಗಳಿಗಾಗಿ ಹೋರಾಟ ಮಾಡ್ತಾ ಇದ್ದೇವೆ, ಬೆಲೆ ಎರಿಕೆ,ಭ್ರಷ್ಟಾಚಾರ ಎಲ್ಲ ವಿಚಾರಗಳ ಬಗ್ಗೆ ಹೋರಾಟವನ್ನ ಘೋಷಣೆ ಮಾಡ್ತಾ ಇರುತ್ತೆ ಎಂದರು.
ಬೆಂಗಳೂರು ನಗರದಲ್ಲಿ ಪಾದಯಾತ್ರೆ ಮಾಡೋಕೆ ಕೆಲವು ಕೋರ್ಟ್ ಆದೇಶವಿದೆ. ಬೆಂಗಳೂರು ಜನಕ್ಕೆ ನಮ್ಮಿಂದ ತೊಂದರೆ ಆಗಬಾರದ್ದು, ಜನರಲ್ಲಿ ಆಕ್ರೋಶ ಇದೆ. ಶನಿವಾರದಂದು ಹೋರಾಟ ಮಾಡುತ್ತೇವೆ. ೨೦೦೪ ರಿಂದ ೨೦೧೪ ರವರೆಗೆ ಕಾಂಗ್ರೆಸ್ ಸರ್ಕಾರ ಇತ್ತು. ೧೨೪೧ ಗ್ಯಾಸ್ ಬೆಲೆ ಇತ್ತು. ಈಗ ೮೫೪ ರೂಪಾಯಿ ಹತ್ತಿರ ತಂದು ನಿಲ್ಲಿಸಿದೆ ಕೇಂದ್ರ ಸರ್ಕಾರ, ಪೆನ್ ಪೇಪರ್ ಕೇಳಿದ್ರು ಎಲ್ಲ ಸರ್ಕರ ಕೊಟ್ಟಿದ್ದಾರೆ. ಸಾರ್ವಜನಿಕ ಭಾವನೆ ಸ್ಪಂದಿಸುಲು ಹೋರಾಟ, ಕನ್ನಡಿಗರಿಗೆ ಹೋರಾಟಗಾರಿಗೆ ಸೇರಿಸಲು ಆಹ್ವಾನ ನೀಡಲಾಗಿದೆ. ಒಂದು ವಾರದಿಂದ ಬಿಜೆಪಿ- ಜೆಡಿಎಸ್ ಗೆ ಅಸಮಾಧಾನ ಶುರುವಾಗಿದೆ ಅಂತ ಪ್ರಾರಂಭ ಆಗಿದೆ. ದೇವೇಗೌಡ ತೆಗೆದುಕೊಂಡು ನಿರ್ಣಯ, ದೇಶದ ಪ್ರಧಾನಿಗಳನ್ನ ಮೆಚ್ಚಿ ಬಿಜೆಪಿ ಜೊತೆ ಮೈತ್ರಿ ಆಗಬೇಕು. ಅವರು ತೀರ್ಮಾನ ತೆಗೆದುಕೊಂಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಸಿಕ್ಕಿದೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ,ಅಸಮಾಧಾನ ಇಲ್ಲ. ಮುಡಾ ಪಾದಯಾತ್ರೆ ವೇಳೆಯಲ್ಲಿ ಕೋಆರ್ಡಿನೇಷನ್ ಕಮಿಟಿ ಸಭೆ ಆಗಬೇಕು ಅಂತ ಹೇಳಿದ್ವಿ, ಅದು ಆಗಿಲ್ಲ ಅಂತ ಹೇಳಿದ್ದಾರೆ. ಸಮನ್ವಯ ಸಮತಿ ರಚನೆ ಮಾಡ್ಲಿ ಅಂತ ಸುರೇಶ್ ಬಾಬು ಹೇಳಿದ್ದಾರೆ ಅಷ್ಟೇ ಎಂದು ಹೇಳಿದರು.
ಕಾಂಗ್ರೆಸ್ ಅಪಪ್ರಚಾರಗಳು,ಬಿಜೆಪಿ ಜೆಡಿಎಸ್ ಎನೂ ಆಗಿದೆ ಸುಳ್ಳು, ಶೀಘ್ರದಲ್ಲೇ ಕೋಆರ್ಡಿನೇಷನ್ ಕಮಿಟಿ ಆಗುತ್ತೆ. ರಾಜ್ಯದಲ್ಲಿ ದೇವೇಗೌಡ ಕಿಚ್ಚು ಇದೆ ಅಲ್ವ, ರೈತರ ಪರ,ನೀರಾವರಿ ಯೋಜನೆ ಗಳ ಬಗ್ಗೆ ಕೊಡುಗೆ ಇದೆ ಅಲ್ವ, ರಾಷ್ಟ್ರೀಯ ಪಕ್ಷಗಳ ಮೀರಿ ಮುಂದೆ ಬರ್ತೇವೆ, ನಾನಾ ಕಾರಣಗಳಿಂದ ನಾವು ೪೦ ರಿಂದ ೧೮ ಕ್ಕೆ ಬಂದಿದ್ದೇವೆ, ಈ ಬಿಜೆಪಿ ಜೊತೆ ವಿಲೀನ ಆಗುವುದಿಲ್ಲ. ಹಾಗಾಗಿ ನಿಮ್ಮ ಮಾತನ್ನ ವಾಪಸ್ ತಿಳಿದುಕೊಳ್ಳಬೇಕು, ನಾವು ಬಿಜೆಪಿ ಮೈತ್ರಿ ಇರುತ್ತೆ ಎಂದರು.
