ದೇಶದಾದ್ಯಂತ ಕಾಂಗ್ರೆಸ್ ಮೂಲ ಅಲುಗಾಡುತ್ತಿದೆ-ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್
1 min read
ಹುಬ್ಬಳ್ಳಿ : ಎಐಸಿಸಿ ಸಮಾವೇಶದಿಂದ ಬಿಜೆಪಿಗೆ ಏನು ತೊಂದರೆ ಇಲ್ಲ ಗುಜರಾತ್ ನಲ್ಲಿ ನಡೆಯುತ್ತಿರುವ ಎಐಸಿಸಿ ಸಮಾವೇಶದಿಂದ ಭಾರತೀಯ ಜನತಾ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ದಿನದಿಂದ ದಿನಕ್ಕೆ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಾರ್ಟಿ ಕುಸಿಯುತ್ತಿದೆ. ಕಾಂಗ್ರೆಸ್ ಒಂದೊಂದು ರಾಜ್ಯವನ್ನು ಎದುಕೊಳ್ಳುತ್ತಿದ್ದಾರೆ. ಗುಜರಾತ್ ರಾಜ್ಯ ಕಳೆದುಕೊಂಡು ಮೂವತ್ತು ವರ್ಷಗಳಾಗಿವೆ. ಬಿಜೆಪಿಗೆ ಠಕ್ಕರ್ ಕೊಡಲು ಸಾಧ್ಯವಿಲ್ಲ. ಅಲ್ಲಿ ಕಾರ್ಯಕರ್ತರೇ ಇಲ್ಲವಾಗಿದೆ. ಪಕ್ಷ ಅವಸಾನದ ಅಂಚಿಗೆ ಹೋಗಿದೆ. ಅಲ್ಲಿ ಕಾಂಗ್ರೆಸ್ ಅಧಿವೇಶನ ಮಾಡುವ ಮೂಲ, ಅಲ್ಲಿ ಕಾಂಗ್ರೆಸ್‌ನ್ನು ಮುಂಚೂಣಿಗೆ ತರುತ್ತೇವೆ ಎನ್ನುವುದು ಮೂರ್ಖತನದ ಪರಮಾವಧಿ, ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ, ಕಾಂಗ್ರೆಸ್ ವಿಶ್ವಾಸ ಕಳೆದುಕೊಂಡಿದ್ದು ಮೋದಿ ನೇತೃತ್ವದ ಬಿಜೆಪಿ ಮೇಲೆ ವಿಶ್ವಾಸ ಇಟ್ಟಿದ್ದಾರೆ. ದೇಶದಾದ್ಯಂತ ಕಾಂಗ್ರೆಸ್ ಮೂಲ ಅಲುಗಾಡುತ್ತಿದೆ. ಕರ್ನಾಟಕದಲ್ಲಿ ಯಾವುದೇ ಕ್ಷಣದಲ್ಲಾದರೂ ಸರ್ಕಾರ ಪತನವಾಗಬಹುದು. ಉಳಿದ ಮೂರು ರಾಜ್ಯಗಳಲ್ಲಿಯ ಸರ್ಕಾರ ಸಹ ಉರುಳುವ ಸಾಧ್ಯತೆಯಿದೆ ಎಂದು ಹೇಳಿದರು.
ಆರ್ ಎಸ್ ಎಸ್ ಮುಸ್ಲಿಂರ ನಂತರ ಕ್ರಿಶ್ಚಿಯನರ್ ಆಸ್ತಿ ಮೇಲೆ ಕಣ್ಣು ಹಾಕಿದೆ ಎಂಬ ವಿಚಾರವಾಗಿ ಮಾತನಾಡಿದ ಅವರು ವಕ್ಫ್ ತಿದ್ದುಪಡಿ ಕಾಯ್ದೆ ಕುರಿತು ಕಾಂಗ್ರೆಸ್, ಸೆಕ್ಸನ್ ಗಳನ್ನು ಅಧ್ಯಯನ ಮಾಡದೆ ಅಪಪ್ರಚಾರ ಮಾಡುತ್ತಿದೆ. ಮುಸ್ಲಿಂ ಸಮುದಾಯಕ್ಕೆ ಯಾರಾದರೂ ದಾನ ಮಾಡಿದರೆ, ಅದು ವಕ್ಫ್ ಆಸ್ತಿ ಆಗುತ್ತದೆ. ರೈತರ ಸಾವಿರಾರು ಎಕರೆ ಜಮೀನು, ಅವರಿಗೆ ಗೊತ್ತಿಲ್ಲದೆ ವಕ್ಫ್ ಆಸ್ತಿ ಹೇಗಾಗುತ್ತದೆ? ಹಳೆ ಕಾನೂನಿನ ಸೆಕ್ಅನ್ 40 ಪ್ರಕಾರ ಒಂದು ಸಭೆ ಮಾಡಿ ಯಾವುದೇ ಆಸ್ತಿಯನ್ನು ವಕ್ಫ್ ಮಾಡಿಕೊಳ್ಳಬಹುದಿತ್ತು. ನೂತನ ಕಾಯ್ದೆಯಲ್ಲಿ ಆ ಸೆಕ್ಸನ್ ತೆಗೆಯಲಾಗಿದೆ. ರಾಹುಲ್ ಗಾಂಧಿಗೆ ಬಿಜೆಪಿ ವಿರುದ್ಧ ಮಾತನಾಡಲು ವಿಷಯಗಳಿಲ್ಲ. ಬಿಜೆಪಿ ಕ್ರೈಸ್ತರ ಆಸ್ತಿ ಮೇಲೆ ಕಣ್ಣಿಟ್ಟಿದೆ ಎಂದು ಆರೋಪಿಸುತ್ತಿದ್ದಾರೆ. ಮುಸ್ಲಿಮರು ಯಾವಾಗಲೂ ನಮ್ಮಪರವಾಗಿರಬೇಕು. ವೋಟ್ ಹಾಕುತ್ತ ಇರಬೇಕು ಎನ್ನುವ ಕಾರಣಕ್ಕೆ, ಆರ್‌ಎಸ್‌ಎಸ್ ಬಗ್ಗೆ ಆ ಸಮುದಾಯಕ್ಕೆ ಭಯ ಹುಟ್ಟಿಸುತ್ತಿದ್ದಾರೆ ಎಂದು ಹೇಳಿದರು.
