ಚಲಿಸುತ್ತಿರುವ ರೈಲು ಇಳಿಯಲು ಹೋಗಿ ಪ್ರಯಾಣಿಕನ ಎರಡೂ ಕಾಲು ಕಟ್
1 min read
https://youtu.be/RHChUO4JsfU?si=WJcP7yAYtHR3tDMS
ಬೆಳಗಾವಿ : ಚಲಿಸುತ್ತಿರುವ ರೈಲು ಇಳಿಯಲು ಹೋಗಿ ಪ್ರಯಾಣಿಕನ ಎರಡೂ ಕಾಲು ಕಟ್ ಆಗಿರುವ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಕೊಣ್ಣೂರ ರೈಲು ನಿಲ್ದಾಣದಲ್ಲಿ ನಡೆದಿದೆ. ಗೋಕಾಕ್ ತಾಲೂಕಿನ ಶಿಂಧಿಕುರಬೇಟ ಗ್ರಾಮದ ಹೊಳೆಪ್ಪ ಹುಲಕುಂದ್ (28) ಕಾಲು ಕಟ್ ಆಗಿ ಬಿದ್ದ ಯುವಕನಾಗಿದ್ದು, ಬೆಳಗಾವಿ ಕಡೆಯಿಂದ ಮೀರಜ್ ಕಡೆಗೆ ಹೊರಟಿದ್ದ ತಿರುಪತಿ ಎಕ್ಸ್‌ಪ್ರೆಸ್ ರೈಲಿನಡಿ ಸಿಲುಕಿ ಕಾಲು ಕಟ್ ಆಗಿದೆ. ಪಾಶ್ಚಾಪುರ ರೈಲು ನಿಲ್ದಾಣದಲ್ಲಿ ನಿಲುಗಡೆ ಇಲ್ಲದಿದ್ದರೂ ಓಡುತ್ತಾ ಚಲಿಸುತ್ತಿದ್ದ ರೈಲನ್ನು ಯುವಕ ಹತ್ತಿದ್ದಾನೆ. ಕೊಣ್ಣೂರ ರೈಲು ನಿಲ್ದಾಣದಲ್ಲಿ ರೈಲು ನಿಲುಗಡೆ ಇಲ್ಲದಿದ್ದರೂ ಚಲಿಸುತ್ತಿದ್ದ ರೈಲು ಇಳಿಯಲು ಹೋಗಿ ಅವಘಡ ಸಂಭವಿಸಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಯುವಕನ ರವಾನೆ ಮಾಡಲಾಗಿದೆ. ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
