15 ದೇಶಗಳಿಗೆ ಡಬಲ್ ಶಾಕ್ ಕೊಟ್ಟ ಡೊನಾಲ್ಡ್ ಟ್ರಂಪ್ ಸುಂಕ.. ಭಾರತಕ್ಕೆ ಎಷ್ಟು ನಷ್ಟ ಗೋತ್ತಾ..?
1 min read
ಅಮೆರಿಕಾ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಘೋಷಿಸಿರುವ ಸುಂಕಯುದ್ಧ ಜಾಗತಿಕ ಮಟ್ಟದಲ್ಲಿ ಅತಿದೊಡ್ಡ ಸಂಚಲನ ಸೃಷ್ಟಿಸಿ ಮಾಡಿದೆ. ಏಪ್ರಿಲ್ 2ರಿಂದ ಅಮೆರಿಕಾದಲ್ಲಿ ವಿಮೋಚನಾ ದಿನ ಆಚರಣೆಗೆ ಕರೆ ನೀಡಲಾಗಿದೆ. ಈ ವಿಮೋಚನಾ ದಿನದ ಹಿನ್ನೆಲೆಯಲ್ಲಿ ಹೊಸ ಸುಂಕ ನೀತಿ ಜಾರಿಗೆ ತರಲು ಕೊನೆಗೂ ಟ್ರಂಪ್ ಗ್ರೀನ್ ಸಿಗ್ನಲ್ ನೀಡಿದರು..ಡೊನಾಲ್ಡ್ ಟ್ರಂಪ್ ಸರ್ಕಾರ ಅಮೆರಿಕಾದಲ್ಲಿ ವಾಣಿಜ್ಯ-ವ್ಯವಹಾರಕ್ಕೆ ಹೊಸ ಸುಂಕ ನೀತಿ ಜಾರಿಗೆ ತಂದಿದೆ. ಇದರಿಂದ ಅಮೆರಿಕಾದ ಸರಕು-ಸಾಗಣಿಕೆ ಮೇಲೆ ಹಿಂದೆಂದೂ ಕಾಣದಂತಹ ಅತಿ ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ. ಇದರಿಂದ Dirty 15 ಎಂದು ಪಟ್ಟಿ ಮಾಡಿರುವ ದೇಶಗಳನ್ನೇ ಟಾರ್ಗೆಟ್ ಮಾಡಿ ಟ್ಯಾಕ್ಸ್ ಹಾಕುವ ಸಾಧ್ಯತೆ ಇದೆ.
ಅಮೆರಿಕಾದ ಹೊಸ ಸುಂಕ ನೀತಿ ಬಗ್ಗೆ ವೈಟ್‌ಹೌಸ್ ಅಧಿಕೃತವಾಗಿ ಪ್ರಕಟ ಮಾಡಲಿದೆ. ಇದರಿಂದ ವಿಶ್ವದ ಅನೇಕ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಆರ್ಥಿಕ ಹೊಡೆತ ಬೀಳಲಿದೆ. ಯುಎಸ್ ವಾಣಿಜ್ಯ ಇಲಾಖೆಯ 2024ರ ಅಂಕಿ-ಅಂಶದ ಪ್ರಕಾರ ಈ Dirty 15 ದೇಶಗಳಿಗೆ ಅಮೆರಿಕಾ ಹೊಸ ಸುಂಕ ನೀತಿ ಹಾಕುವ ಸಾಧ್ಯತೆ ಹೆಚ್ಚಾಗಿದೆ.
Dirty 15 ದೇಶಗಳು ಯಾವುವು?
ಭಾರತ
ಇಟಲಿ
ಮೆಕ್ಸಿಕೊ
ಚೀನಾ
ವಿಯೆಟ್ನಾಂ
ಜರ್ಮನಿ
ಐರ್ಲೆಂಡ್
ದಕ್ಷಿಣ ಕೊರಿಯಾ
ತೈವಾನ್
ಜಪಾನ್
ಇಂಡೋನೇಷ್ಯಾ
ಮಲೇಷ್ಯಾ
ಕೆನಡಾ
ಥೈಲ್ಯಾಂಡ್
ಸ್ವಿಟ್ಜರ್ಲೆಂಡ್
ಅಮೆರಿಕಾದ ವಾಣಿಜ್ಯ ಇಲಾಖೆಯ ಪ್ರಕಾರ ಈ ಮೇಲಿನ ದೇಶಗಳಿಂದ ಅಮೆರಿಕಾ ಆರ್ಥಿಕತೆಗೆ ಹೊರೆಯಾಗುತ್ತಿದೆ. ಹೀಗಾಗಿ ಈ 15 ದೇಶಗಳ ಮೇಲೆ ಹೊಸ ತೆರಿಗೆ ನೀತಿಯನ್ನು ಅಮೆರಿಕಾ ಘೋಷಣೆ ಮಾಡಲು ಮುಂದಾಗಿದೆ. ಇದು ಜಾರಿಯಾದ್ರೆ ಭಾರತಕ್ಕೆ 3.1 ಬಿಲಿಯನ್ ಡಾಲರ್‌ನಷ್ಟು ಅಂದ್ರೆ 300 ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಎದುರಾಗುವ ಸಾಧ್ಯತೆ ಇದೆ.
