ಗುರುವಾರ ರಾಶಿ ಭವಿಷ್ಯ- ಏಪ್ರಿಲ್ ,03,2025
1 min read
ಮೇಷ ರಾಶಿ
ಇಂದು ದೈಹಿಕ ಶಕ್ತಿ ಕಡಿಮೆಯಾಗಬಹುದು
ನಿಮ್ಮ ಮನಸ್ಸನ್ನು ಒಂದು ಕಡೆ ಕೇಂದ್ರೀಕರಿಸಲು ಆಗದು
ನಿರಂತರ ಅಭ್ಯಾಸಗಳ ಬಗ್ಗೆ ಎಚ್ಚರಿಕೆ ಇರಲಿ
ಸಂಗಾತಿಯ ಜೊತೆ ಆರ್ಥಿಕತೆಯ ಬಗ್ಗೆ ವಾಗ್ವಾದ ಮಾಡುವಿರಿ
ನಿಮ್ಮ ಬಗ್ಗೆ ನಿಮಗೇ ನಂಬಿಕೆ ಸಾಲದು
ಕಾಲಭೈರವನನ್ನು ಪ್ರಾರ್ಥನೆ ಮಾಡಿ
ವೃಷಭ ರಾಶಿ
ನಿಮಗೆ ಹೊಸ ಅವಕಾಶಗಳು ಉದ್ಭವಿಸಲಿದ್ದು, ನೀವು ಅವುಗಳನ್ನು ವೇಗವಾಗಿ ವಶಪಡಿಸಿಕೊಳ್ಳಿ
ಆ ವೇಗವನ್ನು ಮುಂದುವರಿಸಲು ಫಲದ ಅಪೇಕ್ಷೆಯೂ ಇರಲಿದೆ
ಸಾಮಾಜಿಕ ಕಾರ್ಯಗಳನ್ನು ಮಾಡಲು ನಿಮಗೆ ಇಂದು ಉತ್ಸಾಹ ಇರಲಿದೆ
ಮನಸ್ಸಿನಲ್ಲಿ ಯಾವುದಾದರೂ ಭೀತಿಯು ಕಾಡಬಹುದು
ಸಣ್ಣ ವ್ಯಾಪಾರವು ಹೆಚ್ಚುವರಿಯಾಗಿ ಲಾಭವನ್ನು ಕೊಡುವುದು
ಶ್ರೀಲಕ್ಷ್ಮಿನಾರಾಯಣನನ್ನು ಆರಾಧನೆ ಮಾಡಿ
ಮಿಥುನ ರಾಶಿ
ನಿಮ್ಮ ವಿಶೇಷ ವ್ಯಕ್ತಿ ಇಂದು ನಿಮ್ಮ ಜೀವನಕ್ಕೆ ಉತ್ಸಾಹವನ್ನು ತರುತ್ತಾರೆ
ಮುನ್ನೋಟವಿಲ್ಲದೇ ಯಾವುದನ್ನೂ ಮಾಡುವುದು ಬೇಡ
ಒಬ್ಬಂಟಿಯಾಗಿದ್ದರೆ, ನಿಮ್ಮ ಕಣ್ಣುಗಳನ್ನು ತೆರೆದು ಸುತ್ತಲ ಜಗತ್ತನ್ನು ನೋಡಿ
ನಿಮ್ಮ ವೃತ್ತಿಪರ ಜೀವನದಲ್ಲಿ ದೊಡ್ಡ ಬದಲಾವಣೆಗಳು ಬರಲಿವೆ
ನೀವು ಮಾಡಿದ ಕಠಿಣ ಪರಿಶ್ರಮ ಅಂತಿಮವಾಗಿ ಫಲ ನೀಡುತ್ತದೆ
ನಿಮ್ಮ ಹಣದ ಮೇಲೆ ನಿಗಾ ಇರಿಸಿ
ಪರ್ವತಾಂಜನೇಯನನ್ನು ಪ್ರಾರ್ಥನೆ ಮಾಡಿ
ಕರ್ಕಾಟಕ ರಾಶಿ
ಒತ್ತಡದ ಮಟ್ಟವನ್ನು ಕಡಿಮೆ ಮಾಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ
ಅದೃಷ್ಟವು ನಿಮ್ಮ ದಾರಿಯಲ್ಲಿ ಬರುತ್ತಿದೆ ಮತ್ತು ನಿಮ್ಮ ಕನಸುಗಳನ್ನು ನೀವು ನಂಬಿದರೆ, ನಿಮ್ಮ ಗುರಿಯಲ್ಲಿ ನಿರತರಾಗಿದ್ದರೆ, ನಿಮಗೆ ಯಶಸ್ಸು ಖಚಿತ
ನಿಮ್ಮ ಕನಸುಗಳನ್ನು ನನಸಾಗಿಸಲು ಒಂದು ಮಾರ್ಗವನ್ನು ಹೊಂದಿರುತ್ತೀರಿ
ನಿಮಗೆ ಕೆಲವು ವಿಚಾರದಲ್ಲಿ ಕಾನೂನಿನ ತೊಂದರೆ ಕಾಡಬಹುದು
ಶ್ರೀಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಸಿಂಹ ರಾಶಿ
ನಿಮ್ಮ ಸಂಬಂಧಗಳಲ್ಲಿ ನೀವು ಇಂದು ಸವಾಲಿನ ದಿನವನ್ನು ಎದುರಿಸಬೇಕಾಗಬಹುದು
ತಪ್ಪುಗ್ರಹಿಕೆಗಳು ಮತ್ತು ಭಿನ್ನಾಭಿಪ್ರಾಯಗಳ ಸಂದರ್ಭದಲ್ಲಿ, ತಪ್ಪುಗಳನ್ನು ಒಪ್ಪಿಕೊಳ್ಳಿ
ಅತಿಯಾದ ಚಿಂತೆಯಿಂದ ಆರೋಗ್ಯವನ್ನು ಹಾಳು ಮಾಡಿಕೊಳ್ಳುವಿರಿ
ಬೇಕಾದಷ್ಟು ಸಂಪತ್ತಿದ್ದರೂ ನಿಮಗೆ ಸರಿಯಾದ ನೆಮ್ಮದಿಯ ಸಿಗದು
ಅತಿಯಾದ ಚಿಂತೆಯಿಂದ ನೋವುಗಳು ದೇಹದಲ್ಲಿ ಕಾಣಿಸುವುದು
ಸಾಯಂಕಾಲದ ಸೂರ್ಯನನ್ನು ಪ್ರಾರ್ಥನೆ ಮಾಡಿ
ಕನ್ಯಾ ರಾಶಿ
ನಿಮ್ಮ ವೃತ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಲಾಭದ ಲಕ್ಷಣವಿರುವುದು
ಅಂತಸ್ಸಾಕ್ಷಿಯನ್ನು ಬಿಟ್ಟು ನೀವು ದೂರಾಗಬಹುದು
ನಂಬಿಕಸ್ಥರನ್ನು ಮಾತ್ರ ನಿಮ್ಮ ಹತ್ತಿರ ಸೇರಿಸಿಕೊಳ್ಳುವಿರಿ
ನೀವು ಹೊಂದಿರುವ ಅಪಾರ ಶಕ್ತಿ ಮತ್ತು ಧೈರ್ಯವು ಎಂತಹ ಸಂದರ್ಭದಲ್ಲಿಯೂ ಹಿಡಿದು ನಿಲ್ಲಿಸುವುದು
ಐಕ್ಯಮತ್ಯ ಮಂತ್ರ ಪಠಣೆ ಮಾಡಿ
ತುಲಾ ರಾಶಿ
ಸಂಗಾತಿಯ ನಡುವೆ ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆಯಿದೆ
ಇಂದು ದೀರ್ಘಕಾಲದ ನಿಮ್ಮ ಸಂಬಂಧಕ್ಕೆ ವಿರಾಮವು ಸಿಗಬಹುದು
ಪಡೆದುಕೊಳ್ಳಬೇಕಾದ ಸ್ಥಿರಾಸ್ತಿ ನಿಮಗೆ ಬರುವುದು
ನಿಮ್ಮ ಪ್ರೀತಿಯನ್ನು ಇತರರಿಗೆ ವ್ಯಕ್ತಪಡಿಸಲು ಸುಲಭವಾದ ಮಾರ್ಗ ಸಿಗಲಿದೆ
ಹೂಡಿಕೆಯನ್ನು ಅಲ್ಪಪ್ರಮಾಣದಲ್ಲಿ ಇರಿಸಿಕೊಂಡರೆ ಒಳ್ಳೆಯದು
ಇಷ್ಟದೇವತಾ ಪ್ರಾರ್ಥನೆ ಮಾಡಿ
ವೃಶ್ಚಿಕ ರಾಶಿ
ಇಂದು ಬಗೆಹರಿಯದ ಸಮಸ್ಯೆಗಳ ಬಗ್ಗೆ ನಿಮ್ಮ ಕುಟುಂಬದ ಜೊತೆಗೆ ಮಾತನಾಡಲು ನೀವು ಬಯಸಬಹುದು
ನೀವು ಚೆನ್ನಾಗಿ ಯೋಚಿಸಿದ ಯಾವುದಾದರೂ ವಿಧಾನವನ್ನು ಬಳಸುತ್ತೀರೆಂದು ಖಚಿತಪಡಿಸಿಕೊಳ್ಳಿ
ಕೆಲಸದಲ್ಲಿ ಹೊಸತನ ಬಹಳ ಮುಖ್ಯವಾಗುತ್ತದೆ
ಮಕ್ಕಳ ವಿವಾಹಕ್ಕಾಗಿ ಓಡಾಟ, ಮಾತುಕತೆಗಳನ್ನು ಮಾಡಬೇಕಾದೀತು
ಕುಟುಂಬಕ್ಕೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ಸುದ್ದಿಗಳನ್ನು ಪಡೆಯುತ್ತೀರಿ
ಯಾವುದೇ ಆಸ್ತಿಯಲ್ಲಿ ಹೂಡಿಕೆ ಮಾಡುವುದು ಬೇಡ
ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಧನು ರಾಶಿ
ವ್ಯಾಪಾರದಲ್ಲಿ ಚಾತುರ್ಯದಿಂದ ಲಾಭ. ಹಿತಶತ್ರುಗಳನ್ನು ಇಂದು ಅವರಾಡುವ ಮಾತುಗಳಿಂದ ಗುರುತಿಸುವಿರಿ
ನಿಮ್ಮ ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿಲ್ಲ. ಖರ್ಚಿನ ವಿಚಾರದಲ್ಲಿ ಔದಾರ್ಯ ಬೇಡ
ವಾಸಸ್ಥಳ ಬದಲಾವಣೆಯಿಂದ ಹೆಚ್ಚು ಸಂತೋಷ ಇರುವುದು
ನಿಮ್ಮವರ ಮೇಲಿರುವ ಅನುಮಾನ ನಿವಾರಣೆ ಮಾಡಿಕೊಳ್ಳುವಿರಿ
ನಿಮ್ಮ ಅತ್ಯುನ್ನತ ಸಾಮರ್ಥ್ಯವನ್ನು ತಲುಪಲು ನೀವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು
ಮಾರುತಿಯನ್ನು ಪ್ರಾರ್ಥನೆ ಮಾಡಿ
ಮಕರ ರಾಶಿ
ಇಂದು ಮೋಜು ಮಾಡಲು ಹೊರಡುವವರಿಗೆ ಮುನ್ನೆಚ್ಚರಿಕೆ ಇರಲಿ
ಜಾಡ್ಯದಿಂದ ನೀವು ಇಂದಿನ ಕಾರ್ಯವನ್ನು ಮುಂದೂಡುವಿರಿ
ಯಾರಿಂದಲಾದರೂ ಹಣವನ್ನು ಎರವಲು ಪಡೆದ ಜನರಿಗೆ ಯಾವುದೇ ಪರಿಸ್ಥಿತಿಯಲ್ಲಿ ಸಾಲವನ್ನು ಮರುಪಾವತಿ ಮಾಡಬೇಕಾಗಬಹುದು
ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುವ ಸಾಧ್ಯತೆಯಿದೆ
ದೂರವಾಣಿ ಕರೆಗಳಿಂದ ನಿಮಗೆ ತೊಂದರೆ. ಓಡಾಟದಲ್ಲಿ ಕೆಲವು ಅಡೆತಡೆಗಳ ಬರಬಹುದು
ನಿಮ್ಮ ದೌರ್ಬಲ್ಯಗಳಿಂದ ನಿಮಗೆ ತೊಂದರೆ ಆಗುವ ಸಾಧ್ಯತೆ
ಸುದರ್ಶನನ್ನು ಪ್ರಾರ್ಥನೆ ಮಾಡಿ
ಕುಂಭ ರಾಶಿ
ಪ್ರೀತಿಯಲ್ಲಿ ನಂಬಿಕೆ ಕಳೆದುಕೊಳ್ಳುವಿರಿ. ಇಷ್ಟವಾದವರು ಬಿಟ್ಟುಹೋಗಬಹುದು
ನೀವು ಯಾರೊಂದಿಗೆ ಅರ್ಥಪೂರ್ಣ ಸಂಬಂಧವನ್ನು ಹೊಂದಲು ಬಯಸುತ್ತೀರಿ ಎಂಬ ವಿಚಾರದಲದಲಿ ಸ್ಪಷ್ಟತೆ ಇರಲಿ
ಆಹಾರ ಸೇವನೆಯ ಅನಂತರ ಅನಾರೋಗ್ಯ ಕಾಡಬಹುದು
ಹೂಡಿಕೆ ಮಾಡಲು ಹೊಸ ಮಾರ್ಗಗಳನ್ನು ತೆರೆಯಬಹುದು
ಇಂದು ಹಳೆಯ ತಪ್ಪಿಗೆ ನೀವು ಪಶ್ಚಾತ್ತಾಪ ಪಡಪಡುವಿರಿ
ಹಿರಿಯರ ಆಶೀರ್ವಾದ ಪಡೆಯಿರಿ
ಮೀನ ರಾಶಿ
ಇಂದು ವೃತ್ತಿಪರರಾಗಿರಿ ನಿಮ್ಮ ವಹಿವಾಟು ಉತ್ತಮವಾಗಿದೆ ನೋಡಿಕೊಳ್ಳಿ
ನಿಮ್ಮ ಬಗ್ಗೆ ಸಲ್ಲದ ಮಾತುಗಳು ನಿಮಗೆ ಗೊತ್ತಾಗದಂತೆ ನಡೆಯಲಿವೆ
ಆರ್ಥಿಕತೆಯ ಬಗ್ಗೆ ನೀವು ಸರಿಯಾಗಿ ತಿಳಿದುಕೊಳ್ಳಬೇಕಾಗಬಹುದು
ಇಂದು ಬದಲಾವಣೆಯ ದಿನವಾಗಿದ್ದರೂ, ಆಶ್ಚರ್ಯವು ಕಾಣಿಸಿಕೊಳ್ಳಬಹುದು
ನಿಮ್ಮನ್ನು ಯಾರಾದರೂ ಆರ್ಥಿಕ ತೊಂದರೆಗೆ ಸಿಲುಕಿಸಬಹುದು
ಧ್ಯಾನ ಮಾಡುತ್ತಿರುವ ಋಷಿಗಳನ್ನು ಪ್ರಾರ್ಥನೆ ಮಾಡಿ
