[t4b-ticker]

ಕಲಿಯುಗದ ಕರ್ಣನ ರತನ್ ಟಾಟಾ ವಿಲ್​​ನಲ್ಲಿ ಯಾರಿಗೆಷ್ಟು ಕೋಟಿ ಬರೆದಿದ್ದಾರೆ ಗೊತ್ತಾ?

1 min read
Share it

 

ಮಹಾನ್ ಉದ್ಯಮಿ,ಮಹಾನ್ ಮಾನವತಾವಾದಿ, ಸಹಜ ಸಮಾಜ ಸೇವಕರಾಗಿ ಹೆಸರು ಗಳಿಸಿದ  ದಿವಗಂತ ರತನ್ ಟಾಟಾ ಲಕ್ಷ ಕೋಟಿಗಳ ಸಾಮ್ರಾಜ್ಯದ ಅಧಿಪತಿ ಆಗಿದ್ರು. ಟಾಟಾ ಉದ್ಯಮದ ಅಸಲಿ ಉತ್ತರಾಧಿಕಾರಿ ಆಗಿ ದಾಖಲೆ ಬರೆದಿದ್ದರು.  ಕಲಿಯುಗದ ಕರ್ಣನ ರತನ್ ಟಾಟಾ ಕಾರ್ಪೋರೇಟ್​​ ಜಗತ್ತಿನಲ್ಲಿ ಗಟ್ಟಿ ಹೆಸರು ಗಿಟ್ಟಿಸಿದರು. 2023ರ ಅಕ್ಟೋಬರ್ 9ರಂದು ರತನ್ ಟಾಟಾ ಅವರು ಅನಾರೋಗ್ಯದಿಂದಾಗಿ ಕೊನೆಯುಸಿರೆಳೆದರು.  ಕಣ್ಮುಚ್ಚುವ ಮುನ್ನ ರತನ್ ಟಾಟಾ ತಮ್ಮ ಪಾಲಿನ ₹10 ಸಾವಿರ ಕೋಟಿ ಆಸ್ತಿಯನ್ನು ಹಂಚಿ ವಿಲ್ ಬರೆದರು.  ಆ ವಿಲ್ ಬಗ್ಗೆ ಬಹುಪಾಲು ಮಂದಿಗೆ ಕುತೂಹಲವೂ ಇತ್ತು. ಆದ್ರೀಗ  ರತನ್ ಟಾಟಾ ವಿಲ್​​ನಲ್ಲಿ ಯಾರಿಗೆಲ್ಲಾ ಎಷ್ಟು ಹಂಚಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ.

 

ತಮ್ಮೊಂದಿಗೆ ಸುದೀರ್ಘ ಸ್ನೇಹಿತರಾಗಿದ್ದ, ಟಾಟಾ ಕಂಪನಿಯ ಉದ್ಯೋಗಿ ಆಗಿದ್ದ ಮೋಹಿನಿ ಮೋಹನ್ ದತ್ತಾಗೆ  ₹800 ಕೋಟಿ ಆಸ್ತಿ ಬರೆದಿಟ್ಟಿದ್ದಾರೆ.ರತನ್​ ಟಾಟಾ ಅವರಿಗೆ ಸೇರಿದ ಬಂಗಲೆಯೊಂದಿಗೆ ಷೇರುಗಳನ್ನೂ ಒಳಗೊಂಡಂತೆ ಬೆಳ್ಳಿ, ಬಂಗಾರದ ವಸ್ತುಗಳನ್ನ ತಮ್ಮ ಸೋದರ ಜಿಮ್ಮಿ ನಾವಲ್ ಟಾಟಾಗೆ ಹಂಚಿದ್ದಾರೆ.ತಮ್ಮ ಮಲ ಸೋದರಿಯರಾದ ಶಿರೀನ್ ಜೆಜೀಭೋಯ್, ದಿಯಾನಾ ಜೆಜೀಭೋಯ್ ಹೆಸರಿನ ಮೇಲೆ ₹800 ಕೋಟಿ ಆಸ್ತಿ ಬರೆದಿಟ್ಟಿದ್ದಾರೆ. ಇದರಲ್ಲಿ ಫಿಕ್ಸಡ್​​ ಡಿಪಾಜಿಟ್​​, ಷೇರುಗಳೊಂದಿಗೆ ಬೆಲೆಬಾಳುವ ವಾಚುಗಳು, ಪೇಟಿಂಗ್ಸ್​ನಂತಹ ವಸ್ತುಗಳಿವೆ.ಅಲಿಬಾಗ್​​​ನ ಬಂಗಲೆ, ಮೂರು ಪಿಸ್ತೂಲ್​​ಗಳನ್ನ ತಮ್ಮ ಪ್ರಿಯ ಮಿತ್ರ ಮಹಿಲ್ ಮಿಸ್ತ್ರಿ ಹೆಸರಿಗೆ ಬರೆದಿದ್ದಾರೆ ಎನ್ನಲಾಗುತ್ತಿದೆ.

 

ರತನ್ ಟಾಟಾರಿಗೆ ಇಳಿ ವಯಸ್ಸಿನಲ್ಲಿ ಸ್ನೇಹಿತರಾಗಿದ್ದ ಶಂತನು ನಾಯ್ಡುಗೂ ವಿಲ್​​ನಲ್ಲಿ ಪಾಲಿದೆ. ಶಂತನೂ ಓದಲು ನೀಡಿದ್ದ ಸಾಲವನ್ನು ಮನ್ನಾ ಮಾಡಿದ್ದಾರೆ. ಈ ವಿಲ್​​ ಪತ್ರವನ್ನ ರತನ್ ಟಾಟಾ 2022 ಫೆಬ್ರವರಿ 23ರಂದು ಬರೆಸಿದ್ದರು ಎನ್ನಲಾಗುತ್ತಿದೆ. ಇದನ್ನ ಪರಿಶೀಲಿಸಿ ಆಸ್ತಿಗಳನ್ನು ಹಂಚಬೇಕು ಅಂತ ಇದೀಗ ಬಾಂಬೆ ಹೈಕೋರ್ಟ್​​ನಲ್ಲಿ ಪಿಟಿಷನ್ ದಾಖಲಾಗಿದೆ. ಈ ಪ್ರಕ್ರಿಯೆ ಪೂರ್ತಿ ಆಗೋ ಹೊತ್ತಿಗೆ ಇನ್ನೂ 6 ತಿಂಗಳು ಉರುಳಬಹುದು..?

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?