ಶನಿವಾರ ರಾಶಿ ಭವಿಷ್ಯ- ಮಾರ್ಚ್, 29,2025
1 min read
ಮೇಷ ರಾಶಿ
ಹಲವಾರು ದಿನಗಳಿಂದ ಬಾಕಿ ಉಳಿದಿದ್ದ ಕೆಲಸಕ್ಕೆ ಹೊಸ ರೂಪ ಬರುತ್ತದೆ, ಇವತ್ತಿನ ದಿನ ಬಹಳ ಉತ್ತಮ
ಅಗತ್ಯವಿರುವವರಿಗೆ ಬಂಧುಗಳಿಂದ ಸಾಹಯ ಸಿಗುತ್ತದೆ
ಸಾಮಾಜಿಕ ವಲಯದಲ್ಲಿ ಹೆಸರು ಮಾಡುವ ಯೋಗವಿದೆ
ನಿಮ್ಮ ವಿರೋಧಿಗಳು ನಿಮಗೆ ತೊಂದರೆ ಕೊಡಬಹುದು ಎಚ್ಚರಿಕೆ ಇರಲಿ
ವಿರೋಧಿಗಳಿಂದ ಮಾನಸಿಕ ತಳಮಳ ಉಂಟಾಗಬಹುದು
ದುರ್ಗಾದೇವಿಯ 32 ನಾಮಾವಳಿ ಪಠಿಸಬೇಕು
ವೃಷಭ ರಾಶಿ
ಕುಟುಂಬ ಸದಸ್ಯರ ಜೊತೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು
ಕುಟುಂಬದವರ ಜೊತೆ ಹೆಚ್ಚು ಸಮಯ ಕಳೆಯುವ ಅವಕಾಶ
ಇಂದು ನಿಮ್ಮ ಕೋಪವನ್ನು ನಿಯಂತ್ರಿಸಿ, ದಾರಿಯಲ್ಲಿ ಜಗಳವಾಗುವ ಸಾಧ್ಯತೆ
ನಿಮ್ಮ ಮನಸ್ಸಿನಲ್ಲಿ ಋಣಾತ್ಮಕ ಆಲೋಚನೆಗಳು ಬರಬಹುದು
ಇಂದು ಅಂದುಕೊಂಡ ಕೆಲಸ ಆಗಬೇಕಾದರೆ ಕಷ್ಟವಿದೆ
ಭದ್ರಕಾಳಿಯ ಆರಾಧನೆ ಮಾಡಬೇಕು
ಮಿಥುನ ರಾಶಿ
ಗಂಭೀರ ಚಿಂತನೆ ಹಾಗೂ ತಾಳ್ಮೆಯಿಂದ ಮಾಡಿದ ಕೆಲಸಗಳು ಪರಿಪೂರ್ಣವಾಗುವ ಯೋಗವಿದೆ
ಸ್ನೇಹಿತರು, ಬಂಧುಗಳು, ಗಣ್ಯರು ನಿಮಗೆ ಅನುಕೂಲ ಮಾಡಲು ಚಿಂತನೆ ನಡೆಸುತ್ತಾರೆ
ಇಂದು ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ
ಇಂದು ನಿಮ್ಮನ್ನು ನೀವು ಹೆಚ್ಚು ಸಮರ್ಥನೆ ಮಾಡಿಕೊಳ್ಳುವುದು ಒಳ್ಳೆಯದಲ್ಲ
ಗಣಪತಿ ಆರಾಧನೆ ಮಾಡಬೇಕು
ಕಟಕ ರಾಶಿ
ಇಂದು ಆದಾಯಕ್ಕಿಂತ ಖರ್ಚು ಹೆಚ್ಚು ಜಾಸ್ತಿ
ಹಣ ಖರ್ಚು ಮಾಡಲು ಮನಸ್ಸಿರುವುದಿಲ್ಲ, ಆದರೂ ಹಣ ಖರ್ಚಾಗುತ್ತದೆ
ಇಂದು ಕಷ್ಟಕರವಾದ ಕೆಲಸಗಳು ಸ್ನೇಹಿತರ ಸಹಾಯದಿಂದ ಸುಗಮವಾಗಿ ನೆರವೇರುತ್ತವೆ
ವಿಶೇಷ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುವ ಯೋಗ
ದೇವಿಯ ಆರಾಧನೆ ಮಾಡಿ ಮೊಸರನ್ನವನ್ನ ಅರ್ಪಿಸಬೇಕು
ಸಿಂಹ ರಾಶಿ
ನಿಮ್ಮ ಎಲ್ಲಾ ಕಾರ್ಯಗಳನ್ನು ಧೈರ್ಯ, ದಕ್ಷತೆ ಮತ್ತು ಪ್ರಾಮಾಣಿಕತೆಗಳಿಂದ ಮಾಡಿರೀ
ಇಂದು ಮಿಶ್ರಫಲ ಕೊಡುವ ದಿನವಿದು, ಚಿತ್ತಚಾಂಚಲ್ಯ ಬಿಟ್ಟು ನಿಮ್ಮ ಕೆಲಸಗಳ ಕಡೆಗೆ ಗಮನ ಕೊಡಿ
ಹಣದ ವಿಚಾರ ಬಂದಾಗ ಸ್ವಲ್ಪ ಕಿರಿಕಿರಿ ಉಂಟಾಗುವ ಸಾಧ್ಯತೆ
ಇಂದು ಯಾವುದೇ ರೀತಿಯ ಸಾಲ ಮಾಡುವುದು ಬೇಡ
ದುರ್ಗಾ ಸಪ್ತಶತಿ ಪಾರಾಯಣ ಮಾಡಬೇಕು
ಕನ್ಯಾ ರಾಶಿ
ಸಾಮಾಜಿಕವಾಗಿ ನಿಮ್ಮ ಆಸೆಗಳು ಈಡೇರುತ್ತವೆ
ಇಂದು ಸಮಾಜದ ಗಣ್ಯರ ಪ್ರೋತ್ಸಾಹ ಮಾರ್ಗದರ್ಶನ ದೊರಕುತ್ತದೆ
ಕಚೇರಿಯ ಕೆಲಸಗಳಿದ್ದರೆ ಮಧ್ಯಾಹ್ನದ ಒಳಗೆ ಪೂರೈಸಿಕೊಳ್ಳಿ
ವಿವಾದಾತ್ಮಕ ಹೇಳಿಕೆಗಳಿಂದ ಅವಮಾನಿತರಾಗುತ್ತೀರಿ
ಶ್ರೀಲಕ್ಷ್ಮೀ ಆರಾಧನೆ ಮಾಡಿ, ಜೇನಿನ ಅಭಿಷೇಕ ಮಾಡಿಸಬೇಕು
ತುಲಾ ರಾಶಿ
ಇವತ್ತು ದಿನದ ಆರಂಭ ಚೆನ್ನಾಗಿರುತ್ತದೆ, ನಂತರ ಬೇಸರ ಉಂಟಾಗುವ ಸಾಧ್ಯತೆ
ಸಹೋದ್ಯೋಗಿಗಳೊಂದಿಗೆ ಮನಸ್ತಾಪ ಏರ್ಪಡುವ ಸಾಧ್ಯತೆ
ನಿಮ್ಮ ಮತ್ತು ಸ್ನೇಹಿತರ ಮಧ್ಯೆ ಭಿನ್ನಾಭಿಪ್ರಾಯ ಸಾಧ್ಯತೆ
ಧರ್ಮ ಪರವಾಗಿರುವ ಒಂದು ಕಥೆಯನ್ನು ಪಠಣೆ ಮಾಡಬೇಕು
ವೃಶ್ಚಿಕ ರಾಶಿ
ಕುಟುಂಬದ ಸದಸ್ಯರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವ ಸಾಧ್ಯತೆ ಇದೆ
ಇಂದು ಕುಟುಂಬ ಮತ್ತು ಸ್ನೇಹಿತರಿಗಾಗಿ ಹಣ ಖರ್ಚಾಗುತ್ತದೆ
ನೆರೆಹೊರೆಯವರೊಂದಿಗೆ ಸಣ್ಣ ಕಾರಣಗಳಿಗೆ ಜಗಳ ಸಾಧ್ಯತೆ ಇದೆ
ಅದರಲ್ಲೂ ವಾಹನ ವಿಚಾರಕ್ಕೆ ಮನಸ್ತಾಪ, ಜಗಳವಾಗಬಹುದು
ಇಂದು ಎಲ್ಲರೊಂದಿಗೆ ಬಹಳ ತಾಳ್ಮೆಯಿಂದ ಮಾತನಾಡಿ
ದೇವಿಯ ಆರಾಧನೆ ಮಾಡಿ, ಕೆಂಪು ಪುಷ್ಪವನ್ನು ಸಮರ್ಪಿಸಬೇಕು
ಧನಸ್ಸು ರಾಶಿ
ಮನೆಯಿಂದ ಹೊರಗೆ ಆನಂದದ ಸಮಯವನ್ನು ಕಳೆಯುತ್ತೀರಿ
ಇಂದು ರಸ್ತೆ ಬದಿಯ ಆಹಾರ ಸೇವನೆ ಮಾಡಬೇಡಿ
ಇಂದು ಮಕ್ಕಳು – ಮೊಮ್ಮಕ್ಕಳಿಗಾಗಿ ಹೆಚ್ಚು ಹಣ ಖರ್ಚಾಗುವ ಸಾಧ್ಯತೆ ಇದೆ
ಅನಾರೋಗ್ಯ ಕಾಣಿಸಿಕೊಂಡರೆ ನಿರ್ಲಕ್ಷಿಸದೆ ವೈದ್ಯರನ್ನು ಭೇಟಿ ಮಾಡಿ
ಇಂದು ವನದುರ್ಗಾದೇವಿ ಆರಾಧನೆ ಹಾಗು ದೇವಿಗೆ ಸಿಹಿ ಪೊಂಗಲ್ ನೈವೇದ್ಯ ಮಾಡಬೇಕು
ಮಕರ ರಾಶಿ
ನಿಮ್ಮಿಂದ ಸಾಲ ಪಡೆದಿದ್ದವರು ಈ ದಿವಸ ಹಣವನ್ನು ಹಿಂದಿರುಗಿಸುವ ಸಾಧ್ಯತೆ ಇದೆ
ಇಂಜಿನಿಯರಿಂಗ್ ಹಾಗೂ ಸಿ.ಎ. ವಿದ್ಯಾರ್ಥಿಗಳಿಗೆ ಶುಭ ದಿನವಿದು
ಓದಿನ ಕೊನೆಯ ಹಂತಕ್ಕೆ ಬಂದಿರುವವರಿಗೆ ಉದ್ಯೋಗದ ಅವಕಾಶ ಸಿಗುತ್ತದೆ
ಸರಸ್ವತಿ ಆರಾಧನೆ ಮಾಡಿ, ಪಾರಿಜಾತ ಹೂ ಅರ್ಪಿಸಬೇಕು
ಕುಂಭ ರಾಶಿ
ಇಂದು ನಿಮ್ಮದೇ ಲೋಕದಲ್ಲಿ ವಿಹರಿಸುತ್ತೀರಿ
ಯಾವುದನ್ನೂ ಸರಿಯಾದ ಸಮಯಕ್ಕೆ ಮಾಡುವುದಕ್ಕೆ ಮನಸ್ಸಿರುವುದಿಲ್ಲ
ಸಮಯಕ್ಕೆ ದಿಢೀರ್ ಎಂದು ಸ್ನೇಹಿತ, ಅತಿಥಿಗಳು ಮನೆಗೆ ಬರಬಹುದು
ಅವರ ಉಪಚಾರದಲ್ಲಿ ಕಾಲ ಹೋಗುತ್ತದೆ
ಮಧ್ಯರಾತ್ರಿವರೆಗೂ ಮಾತುಕತೆ ಸಂತೋಷವನ್ನು ಹಂಚಿಕೊಳ್ಳುತ್ತೀರಿ
ಅನ್ನಪೂರ್ಣೇಶ್ವರೀ ಆರಾಧನೆ ಮಾಡಿ, ವಿಕಲ ಚೇತನರಿಗೆ ಸಹಾಯ ಮಾಡಬೇಕು
ಮೀನ ರಾಶಿ
ತುಂಬಾ ಪರಿಶ್ರಮದಿಂದ ಕಟ್ಟಿಕೊಂಡ ಆಸೆಗಳು ನುಚ್ಚು ನೂರಾಗುತ್ತವೆ
ಇಂದು ಮನಸ್ಸು ನಿಮ್ಮ ಮಾತನ್ನು ಕೇಳುವುದಿಲ್ಲ
ಹಾಗೇ ನೀವು ಯಾರ ಮಾತನ್ನು ಕೇಳುವುದಿಲ್ಲ
ಒಟ್ಟಾರೆ ಒಬ್ಬಂಟಿಯಾಗಿ ಕುಳಿತು ತೀರಾ ಸಂಕಟ ಪಡುತ್ತೀರಿ
ಸಾಂತ್ವನ ಹೇಳುವವರೂ ಇರುವುದಿಲ್ಲ
ವೆಂಕಟರಮಣನನ್ನು ಆರಾಧನೆ ಮಾಡಿ, ವಿಷ್ಣು ಸಹಸ್ರನಾಮ ಶ್ರವಣ ಮಾಡಬೇಕು
