ಟಾಪ್ ಮತ್ತು ಬ್ಲೂ ಜೀನ್ಸ್ ಹುಡುಗಿ ಬಂದಿದ್ಲು..’ ಇವತ್ತೇ ದೂರು ಕೊಡುತ್ತೇನೆ – ಸಚಿವ ಕೆ.ಎನ್ ರಾಜಣ್ಣ ಸ್ಫೋಟಕ ಟ್ವಿಸ್ಟ್
1 min read
ತುಮಕೂರು: ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿರುವ ಹನಿಟ್ರ್ಯಾಪ್ ವಿಚಾರಕ್ಕೆ ಇವತ್ತು ಸ್ಫೋಟಕ ಟ್ವಿಸ್ಟ್ ಸಿಗಲಿದೆ. ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ್ದ ಸಚಿವ ಕೆ.ಎನ್ ರಾಜಣ್ಣ ಅವರು ಇಂದು ದೂರು ನೀಡಲು ತಯಾರಿ ನಡೆಸಿದ್ದಾರೆ. ತುಮಕೂರಿನಲ್ಲಿ ಈ ಹನಿಟ್ರ್ಯಾಪ್ ಆರೋಪದ ದೂರಿನ ಬಗ್ಗೆ ಸಚಿವ ರಾಜಣ್ಣ ಹೇಳಿಕೆ ನೀಡಿದರು.. ಜಡ್ಜ್ ಮೇಲೆ ಹನಿಟ್ರ್ಯಾಪ್ ಆಗಿದೆ ಎಂದು ನಾನು ಹೇಳಿಲ್ಲ. ನನಗೆ ಇರೋ ಮಾಹಿತಿ ರಾಜಕಾರಣಿಗಳ ಮೇಲೆ, ರಾಜಕೀಯ ದ್ವೇಷಕ್ಕಾಗಿ ಹನಿಟ್ರ್ಯಾಪ್ ಆಗಿದೆ ಅನ್ನೋದು. ನಾನು ನ್ಯಾಯಮೂರ್ತಿಗಳ ಮೇಲೆ ನಡೆದಿದೆ ಎಂದಿಲ್ಲ. ಜಡ್ಜ್‌ಗಳ ಮೇಲೆ ಹನಿಟ್ರ್ಯಾಪ್ ನಡೆದಿದೆ ಅನ್ನೋದು ಸುಳ್ಳು ವದಂತಿ ಎಂದು ರಾಜಣ್ಣ ಹೇಳಿದರು…
ತಮ್ಮ ವಿರುದ್ಧ ನಡೆದಿರುವ ಹನಿಟ್ರ್ಯಾಪ್ ಯತ್ನದ ಬಗ್ಗೆ ತುಮಕೂರಿನಲ್ಲಿ ಮಾತನಾಡಿರುವ ರಾಜಣ್ಣ, ಎರಡು ಬಾರಿ ನನ್ನ ಬಳಿ ಬಂದಿದ್ದ ಹುಡುಗ ಒಬ್ಬನೇ ಇದ್ದ. ಆದರೆ ಹುಡುಗಿ ಬೇರೆ, ಬೇರೆ ಇದ್ರು. ಹುಡುಗಿ ಟಾಪ್ ಮತ್ತು ಬ್ಲೂ ಜೀನ್ಸ್ ಹಾಕಿಕೊಂಡು ಬಂದಿದ್ದಳು ಎಂದಿದ್ದಾರೆ.ಸಚಿವ ಕೆ.ಎನ್ ರಾಜಣ್ಣ ಅವರು ದೂರು ನೀಡೋದು ವಿಳಂಬ ಆಗಿಲ್ಲ. ಇಷ್ಟು ದಿನ ಬ್ಯುಸಿ ಇದ್ದಿದ್ದರಿಂದ ದೂರು ಬರೆಯಲು ಆಗಿರಲಿಲ್ಲ. ಇವತ್ತು ಬೆಳಗ್ಗೆಯಿಂದ ನಾನೇ ಕೂತು ದೂರು ಬರೆದಿದ್ದೇನೆ. ಇವತ್ತು ನಾನೇ ಗೃಹ ಸಚಿವರಿಗೆ ದೂರು ನೀಡುತ್ತೇನೆ ಎಂದಿದ್ದಾರೆ.
ಗೃಹ ಸಚಿವರು ಎಲ್ಲಿದ್ದಾರೋ ಅಲ್ಲಿಗೆ ಹೋಗಿ ದೂರು ನೀಡುತ್ತೇನೆ. ಸೆಷನ್‌ನಲ್ಲಿ ಮಾತಾಡಿರೋ ವಿಡಿಯೋ ಸಹಿತ ದೂರು ನೀಡುತ್ತೇನೆ. ಮಾಧ್ಯಮದಲ್ಲಿ ಈ ಬಗ್ಗೆ ಸುದ್ದಿ ಬಂದಾಗ ನಾನು ಉದಾಸೀನ ಮಾಡಿದ್ದೆ. ವಿಧಾನಸಭೆಯಲ್ಲಿ ನನ್ನ ಹೆಸರು ಪ್ರಸ್ತಾಪ ಮಾಡಿದ್ದಕ್ಕೆ ನಾನು ಮಾತಾಡಿದ್ದೆ. ಅಪರಿಚಿತರು ಎಂದು ದೂರು ನೀಡುತ್ತೇನೆ. ಎರಡು ಬಾರಿ ಬಂದಿದ್ದು ಯುವಕರು. ಆಮೇಲೆ ಲೇಡಿ ಲಾಯರ್ ಬಂದಿದ್ದರು. ಅವರ ಫೋಟೋ ತೋರಿಸಿದರೆ ನಾನು ಗುರುತು ಹಿಡಿಯುತ್ತೇನೆ.
ಸಿಎಂ ಸಿದ್ದರಾಮಯ್ಯ ಅವರನ್ನು ನಿನ್ನೆ ಭೇಟಿ ಮಾಡಿದ್ದೆ. ಅವರು ದೂರು ಕೊಡುವಂತೆ ಹೇಳಿದ್ದಾರೆ. ಹಾಗಾಗಿ ಇವತ್ತು ದೂರು ನೀಡುತ್ತೇನೆ. ಮಾರ್ಚ್ 30ರಂದು ದೆಹಲಿಗೆ ಹೋಗಿ ಕಾಂಗ್ರೆಸ್ ಹೈಕಮಾಂಡ್‌ಗೆ ಹೇಳುತ್ತೇನೆ. ಸದನದಲ್ಲಿ ಚೀಟಿ ಕೊಟ್ಟವರು ಯಾರು ಅಂತಾ ಗೊತ್ತಿಲ್ಲ. ಬಿಜೆಪಿಯವರು ಸಿಬಿಐ ತನಿಖೆಗೆ ಹೋರಾಟ ಮಾಡಿದ್ರೆ ಮಾಡಲಿ ಎಂದು ಸಚಿವ ಕೆ.ಎನ್ ರಾಜಣ್ಣ ಹನಿಟ್ರ್ಯಾಪ್ ಜಾಲದ ವಿರುದ್ಧ ಸಮರ ಸಾರಿದ್ದಾರೆ.
