ಗೃಹಜ್ಯೋತಿ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ಶಾಕ್ ಮೇಲೆ ಶಾಕ್..!
1 min read
ಬೆಂಗಳೂರು: ಗೃಹಜ್ಯೋತಿ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಶಾಕ್ ಮೇಲೆ ಶಾಕ್ ಕೊಡುತ್ತಿದೆ. ಗ್ರಾಹಕರ ಹೊಸ ಕನೆಕ್ಷನ್ಗೆ ಮಾತ್ರ ಸ್ಮಾರ್ಟ್ ಮೀಟರ್ ಅಳವಡಿಸಲಾಗುತ್ತಿದ್ದು ಅಂತವರು ಬಿಲ್ ಪಾವತಿ ಮಾಡಲೇಬೇಕು ಎಂದು ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ಹೇಳಿದ್ದಾರೆ. ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ನಗರದಲ್ಲಿ ಮಾತನಾಡಿ ಹೊಸ ಕನೆಕ್ಷನ್ಗೆ ಸ್ಮಾರ್ಟ್ ಮೀಟರ್ ಅಳವಡಿಕೆಯಾಗಿದ್ದರೇ ಅಂತಹ ಗ್ರಾಹಕರು ಕಡ್ಡಾಯವಾಗಿ ಪ್ರತಿ ತಿಂಗಳು 116 ರೂಪಾಯಿ ಪಾವತಿಮಾಡಬೇಕು. ಗೃಹಜ್ಯೋತಿ ಯೋಜನೆ ಅನ್ವಯ ಆಗಿದ್ದರು ಕೂಡ ಪ್ರತಿ ತಿಂಗಳು 116 ರೂಪಾಯಿ ಬಿಲ್ ಪಾವತಿ ಮಾಡಬೇಕು. ಇದು ಕೇಂದ್ರ ಸರ್ಕಾರದ ಕಾನೂನು ಎಂದು ಇಂಧನ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.
ಕರ್ನಾಟಕದಲ್ಲಿ ಗ್ರ್ಯಾಜುವೆಲ್ ಮ್ಯಾನರ್ನಲ್ಲಿ ಇದನ್ನು ತೆಗೆದುಕೊಳ್ಳುತ್ತಿದ್ದೇವೆ. ಹೊಸ ಕನೆಕ್ಷನ್ಗೆ ಮಾತ್ರ ಸ್ಮಾರ್ಟ್ ಮೀಟರ್ ಅಳವಡಿಸಲಾಗಿದೆ. ಕರ್ನಾಟಕ ರೆಗ್ಯೂಲೆಟರಿ ಕಮಿಷನ್ ಇದನ್ನು ವಿಧಿಸಿದೆ. ಇದರ ಜೊತೆ ಕೇಂದ್ರ ಸರ್ಕಾರ ಇಡೀ ದೇಶದಲ್ಲಿ ಎಲ್ಲ ಮೀಟರ್ಸ್ ಸ್ಮಾರ್ಟ್ ಮೀಟರ್ ಇರಬೇಕು ಎಂದು ಹೇಳಿದೆ. ಈ ಉದ್ದೇಶದಿಂದ ಆರ್ಡಿಎಸ್ ಯೋಜನೆ ಅಡಿ ಅಳವಡಿಕೆ ಮಾಡಿ ಇದನ್ನು ಅನುಷ್ಠಾನ ಮಾಡಿದ್ದಾರೆ ಎಂದು ಹೇಳಿದ್ದಾರೆ. ಒಂದೇ ಭಾರೀ ರಾಜ್ಯದಲ್ಲಿ ಎಲ್ಲರಿಗೂ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡುತ್ತಿಲ್ಲ. ನಮ್ಮಲ್ಲಿ ಪ್ರತಿ ವರ್ಷ ಹೊಸ ಕನೆಕ್ಷನ್ಗೆ ಮಾತ್ರ ಸ್ಮಾರ್ಟ್ ಮೀಟರ್ ಇದೆ. ಈಗಿರುವ ವ್ಯವಸ್ಥೆ ಮುಂದುವರೆಯುತ್ತದೆ. ಹೊಸ ಬಿಲ್ಡಿಂಗ್ ಕಟ್ಟಿರುವವರು, ಹೊಸ ಬಿಲ್ಡಿಂಗ್ ಕಟ್ಟಲು ಮುಂದಾದವರಿಗೆ ಈ ಕನೆಕ್ಷನ್ ಇರುತ್ತದೆ. ಕೇಂದ್ರ ಸರ್ಕಾರದಿಂದ ನಮಗೆ ಸಬ್ಸಿಡಿ ಸಿಗುತ್ತಿಲ್ಲದ ಕಾರಣ ಗ್ರಾಹಕರು ಬಿಲ್ ಪಾವತಿ ಮಾಡಬೇಕು ಎಂದು ಹೇಳಿದ್ದಾರೆ.
