[t4b-ticker]

ಅಲ್ಪಸಂಖ್ಯಾತ ಸಮುದಾಯಗಳಿಗೆ ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ ನೀಡಲು ಸಂವಿಧಾನ ತಿದ್ದುಪಡಿಯ ಅಗತ್ಯವೂ ಇಲ್ಲ-ಬಿಕೆ ಹರಿಪ್ರಸಾದ್ ಸ್ಪಷ್ಟನೆ

1 min read
Share it

 

 

ದೆಹಲಿ: ಸಂವಿಧಾನವನ್ನು ತಿದ್ದುಪಡಿ ತರಲು ಅವಕಾಶವಿದೆಯೇ ಹೊರತು ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಬದಲಾವಣೆ ಮಾಡಲು ಬಿಡುವುದೂ ಇಲ್ಲ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ತಿದ್ದುಪಡಿಯ ಬದಲು ಬದಲಾವಣೆ ಎಂದು ಹೇಳಿರಬಹುದು. ಅಲ್ಪಸಂಖ್ಯಾತ ಸಮುದಾಯಗಳಿಗೆ ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ ನೀಡಲು ಸಂವಿಧಾನದ ತಿದ್ದುಪಡಿಯ ಅಗತ್ಯವೂ ಇಲ್ಲ, ಬದಲಾವಣೆಯ ಅನಿವಾರ್ಯತೆಯೂ ಇಲ್ಲ. ಸಂವಿಧಾನದ ಚೌಕಟ್ಟಿನಲ್ಲಿಯೇ ಮೀಸಲಾತಿ ನೀಡಿರುವುದು ಸ್ಪಷ್ಟ.

 

ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುವುದೇ ಸಂವಿಧಾನದ ಮುಖ್ಯ ಆಶಯ. ಸಂವಿಧಾನದ ಆಶಯದಂತೆಯೇ ರಾಜ್ಯದ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತ ಸಮುದಾಯಗಳಿಗೆ ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ ನೀಡಿದೆ. ಸಂವಿಧಾನ ಅನುಚ್ಛೇದ 14, 15(4), 16(4) ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಲು ಅವಕಾಶವಿದೆ. ಧರ್ಮದ ಆಧಾರದಲ್ಲಿ ಎಲ್ಲಿಯೂ ಕೂಡ ಮೀಸಲಾತಿ ನೀಡಿಲ್ಲ. 1977 ರಿಂದ 1993 ರವರೆಗೂ ನಾಲ್ಕು ಹಿಂದುಳಿದ ಆಯೋಗಗಳ ವರದಿ ನೀಡಿದೆ. ಹಾವನೂರು ಆಯೋಗ, ಚಿನ್ನಪ್ಪ ರೆಡ್ಡಿ ಆಯೋಗ ಸೇರಿದಂತೆ ನಾಲ್ಕು ಆಯೋಗಗಳು ಶೈಕ್ಷಣಿಕವಾಗಿ,ಸಾಮಾಜಿಕವಾಗಿ ಹಿಂದುಳಿದವರೆಲ್ಲರೂ ಹಿಂದುಳಿದ ವರ್ಗಕ್ಕೆ ಸೇರಿಸಬಹುದು ಎಂದು ವರದಿ ನೀಡಿದೆ. ಮುಖ್ಯವಾಗಿ 1993ರ ಇಂದಿರಾ ಸಹಾನಿ v/s ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಪ್ರತಿ ರಾಜ್ಯದಲ್ಲಿ ಹಿಂದುಳಿದವರ ಆಯೋಗ ರಚಿಸಿ, ಕುಲಶಾಸ್ತ್ರ ಅಧ್ಯಯನ ನಡೆಸಿ, ಸಮುದಾಯಗಳ ಸಬಲೀಕರಣಕ್ಕೆ ಮೀಸಲಾತಿ ನೀಡಬಹುದು ಎಂದು ಸ್ಪಷ್ಟಪಡಿಸಿದೆ.

 

ಮುಸ್ಲಿಂ ಸಮುದಾಯಗಳಿಗೆ ಮೀಸಲಾತಿ ಕೇವಲ ನಮ್ಮ‌ರಾಜ್ಯದಲ್ಲಿ ಮಾತ್ರವಿಲ್ಲ. ಗುಜರಾತಿನಲ್ಲೂ ಕೂಡ ಮೀಸಲಾತಿ ನೀಡಿದೆ. ಕೇಂದ್ರ ಸರ್ಕಾರದಲ್ಲಿಯೂ ಕೂಡ ನಾಲ್ಕು ಪಂಗಡಗಳನ್ನು ಹೊರತು ಉಳಿದವರಿಗೆ ಮೀಸಲಾತಿ ನೀಡಿದೆ. ಗುಜರಾತಿನಲ್ಲಿ 101 ಸಮುದಾಯಗಳಲ್ಲಿ 23 ಮುಸ್ಲಿಂ ಒಳ ಪಂಗಡಗಳಿಗೆ ಮೀಸಲಾತಿ ನೀಡಲಾಗಿದೆ. ಮುಸ್ಲಿಂ ಸಮುದಾಯಗಳು ಹಿಂದುಳಿದಿವೆ ಎಂದು ಕೆಲವು ಆಯೋಗಗಳು ಕೂಡ ವರದಿ ನೀಡಿದೆ. ಹನಿಟ್ಯ್ರಾಪ್ ರಾಜ ಮಹರಾಜರ ಕಾಲದಿಂದಲೂ ಹಿಡಿದು, ನರೇಂದ್ರ ಮೋದಿ ಗುಜರಾತಿನ ಮುಖ್ಯಮಂತ್ರಿಯಾದ ಕಾಲದಿಂದಲೂ, ಮಾನ್ಯ ಬಿಜೆಪಿ ಅಧ್ಯಕ್ಷನಿಂದಾಗಿ ಕರ್ನಾಟಕದ ಬಾಂಬೆ ಬಾಯ್ಸ್ ಗಳು ಕೋರ್ಟ್ ನಿಂದ ಇಂಜೆಕ್ಷನ್ ಆರ್ಡರ್ ವರೆಗೂ ಬಂದು, ಈಗ ಇಲ್ಲಿಗೆ ಬಂದು ನಿಂತಿದೆ. ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನದಂತೆ ಬಿಜೆಪಿಯವರು ಮಾತಾಡೋದು ಬೇಡ. ಹನಿಟ್ಯ್ರಾಪ್ ಈಗ ಆಗೋಗಿದೆ. ಅದರ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಗೃಹ ಸಚಿವರು ಹೇಳಿದ್ದಾರೆ, ಅದರ ಬಗ್ಗೆ ಚರ್ಚೆ ಬೇಡ.

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?