[t4b-ticker]

ಭಾರತಕ್ಕೆ ಜಾಕ್​ಪಾಟ್​ .. ಒಂದಲ್ಲ.. ಎರಡಲ್ಲ.. ಏಳು ಕಡೆ ಬಂಗಾರದ ಭಂಡಾರವೇ ಪತ್ತೆ..!

1 min read
Share it

 

ಚಿನ್ನ.. ಚಿನ್ನ.. ಚಿನ್ನ.. ಚಿನ್ನ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಕೆಲ ದಿನಗಳ ಹಿಂದೆ ಇದೇ ಚಿನ್ನದ ವಿಷಯ ಸಾಕಷ್ಟು ಸುದ್ದಿಯಾಗಿತ್ತು. ಸ್ಯಾಂಡಲ್‌ವುಡ್‌ ನಟಿ ರನ್ಯಾ ರಾವ್​​​ ಗೋಲ್ಡ್​ ಸ್ಮಗ್ಲಿಂಗ್​ ಕೇಸ್​ ಇಡೀ ದೇಶದಲ್ಲಿ ಸಖತ್​ ಸೌಂಡ್​ ಮಾಡಿತ್ತು. ಆದ್ರೀಗ ಚಿನ್ನದ ವಿಚಾರದಲ್ಲಿ ಭಾರತಕ್ಕೆ ಜಾಕ್​ಪಾಟ್​ ಹೊಡೆದಿದೆ. ಒಂದಲ್ಲ.. ಎರಡಲ್ಲ.. ಏಳು ಕಡೆ ಬಂಗಾರದ ಭಂಡಾರವೇ ಪತ್ತೆಯಾಗಿದೆ.ಭಾರತಕ್ಕೆ ಸದ್ಯ ಒಂದು ಜಾಕ್​ಪಾಟ್ ಹೊಡೆದಿದೆ. ದೇಶದ ಇದೊಂದು ರಾಜ್ಯದಲ್ಲಿ ಅಪಾರ ಪ್ರಮಾಣದ ಚಿನ್ನದ ನಿಕ್ಷೇಪ ಇರೋದು ಪತ್ತೆಯಾಗಿದೆ. ಅದು ಕೂಡ ಒಂದೇ ಜಾಗದಲ್ಲಿ ಅಲ್ಲ. ಹಾಗಾದ್ರೆ ಯಾವುದು ಆ ರಾಜ್ಯ, ಎಷ್ಟು ಕಡೆ ನಿಕ್ಷೇಪ ಪತ್ತೆಯಾಗಿದೆ.

 

ಕಳಿಂಗರ ನಾಡು ಒಡಿಶಾದಲ್ಲಿ ಅಪಾರ ಪ್ರಮಾಣದ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಕೇವಲ ಒಂದು ಕಡೆ ಮಾತ್ರವಲ್ಲದೇ ಒಡಿಶಾದ 7 ಜಿಲ್ಲೆಗಳಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದ್ದು, ಭಾರತದ ಚಿನ್ನದ ಗಣಿಗಾರಿಕೆ ಇತಿಹಾಸದಲ್ಲೇ ಅತಿದೊಡ್ಡ ಮೈಲಿಗಲ್ಲಿಗೆ ಸಾಕ್ಷಿಯಾಗಲಿದೆ. ಚಿನ್ನದ ನಿಕ್ಷೇಪದ ಬಗ್ಗೆ ಖುದ್ದು ಒಡಿಶಾದ ಗಣಿಗಾರಿಕೆ ಸಚಿವ ಬಿಭೂತಿ ಭೂಷಣ್ ಮಾಹಿತಿ ಹಂಚಿಕೊಂಡಿದ್ದಾರೆ. ಜಿಯೋಲಾಜಿಕಲ್​​ ಸರ್ವೇ ಆಫ್​ ಇಂಡಿಯಾ ಒಟ್ಟು ರಾಜ್ಯ ಏಳು ಕಡೆ ಚಿನ್ನದ ನಿಕ್ಷೇಪವನ್ನ ಪತ್ತೆ ಹಚ್ಚಿದೆ. ಇದು ಒಡಿಶಾವನ್ನ ಭಾರತದ ಅತಿದೊಡ್ಡ ಚಿನ್ನದ ನಿಕ್ಷೇಪವಿರುವ ರಾಜ್ಯವೆಂದು ಗುರುತಿಸಿಕೊಳ್ಳಲಿದೆ ಅಂತ ಹೇಳಿದ್ದಾರೆ.ಎಲ್ಲೆಲ್ಲಿ ಚಿನ್ನ ನಿಕ್ಷೇಪ ಪತ್ತೆಯಾಗಿದೆ ಅಂತ ಹೇಳೋದಾದ್ರೆ, ಒಡಿಶಾದ ಜಾಶಿಪುರ್​, ಸುರಿಯಾಗುಡಾ, ರೌನ್ಸಿ, ಇಡೆಲ್ಕುಚಾ, ಮರೆದಿಹಿ, ಸುಲೆಪಾತ್​​​​, ಬಾದಂಪಹರ್​ನಲ್ಲಿ ಜಿಯೋಲಾಜಿಕಲ್​​ ಸರ್ವೇ ಆಫ್​ ಇಂಡಿಯಾ ಚಿನ್ನದ ನಿಕ್ಷೇಪಗಳನ್ನ ಪತ್ತೆ ಹಚ್ಚಿದೆ.

 

ಒಡಿಶಾದಲ್ಲಿ ಕೇವಲ ಚಿನ್ನದ ನಿಕ್ಷೇಪಗಳು ಮಾತ್ರವಲ್ಲದೇ, ಅದಾಸಾ-ರಾಂಪಲ್ಲಿ ಪ್ರದೇಶಗಳಲ್ಲಿ ಅಪಾರ ತಾಮ್ರದ ನಿಕ್ಷೇಪ ಇರುವುದು ಕೂಡ ಪತ್ತೆಯಾಗಿದೆ. ಈಗಾಗಲೇ ಕಿಯೋಂಜಾರ್ ಜಿಲ್ಲೆಯಲ್ಲಿ ಚಿನ್ನ ನಿಕ್ಷೇಪಗಳನ್ನ ಪತ್ತೆ ಹಚ್ಚಲಾಗಿದ್ದು, ಚಿನ್ನ ಸಿಗೋದು ಕನ್ಫರ್ಮ್​ ಆಗ್ತಿದ್ದಂತೆ ಒಡಿಶಾ ಸರ್ಕಾರ ಗೊಲ್ಡ್​ ಮೈನಿಂಗ್​ ಹರಾಜು ಪ್ರಕ್ರಿಯೆಗೆ ಸಿದ್ಧತೆ ನಡೆಸಿದೆ.ಸದ್ಯ ಕರ್ನಾಟಕದ ರಾಜ್ಯದ ಹಟ್ಟಿ ಚಿನ್ನದ ಗಣಿಯಲ್ಲಿ ಮಾತ್ರ ಚಿನ್ನ ಉತ್ಪಾದನೆಯಾಗುತ್ತಿದೆ. ಮುಂದೆ ಒಡಿಶಾದಲ್ಲೂ ಚಿನ್ನದ ಗಣಿ ಆರಂಭವಾಗುವ ಲಕ್ಷಣ ಕಾಣಿಸುತ್ತಿದೆ. ಇದ್ರಿಂದ ದೇಶಕ್ಕೆ ಉತ್ತಮ ಆದಾಯ ಸಿಗುವುದರಲ್ಲಿ ಡೌಟ್‌ ಇಲ್ಲ..

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?