
ವಿದ್ಯುತ್ ತಂತಿ ಸ್ಪರ್ಶ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ತಾಲೂಕಿನ ನಾಗನಾಯಕನಹಳ್ಳಿಯಲ್ಲಿ ಘಟಿಸಿದೆ.
ಬೆಳಗ್ಗೆ ಕಸ ಹಾಕುವ ವೇಳೆ ತುಂಡರಿಸಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮುನಿವೆಂಕಟಪ್ಪ ಸಾವನ್ನಪ್ಪಿದ್ದಾನೆ.
ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆ ಬಿರುಗಾಳಿಗೆ ಮೇಲಿನ ವಿದ್ಯುತ್ ಕಂಬದ ತಂತಿ ತುಂಡರಿಸಿ ತಿಪ್ಪೆಗೆ ಬಿದ್ದಿತ್ತು. ಇದನ್ನು ಗಮನಿಸಿದೆ ಕಸ ಹಾಕುವ ವೇಳೆ ವಿದ್ಯುತ್ತಂತಿ ಸ್ಪರ್ಶಿಸಿ ಮುನಿವೆಂಕಟಪ್ಪ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಸೂರ್ಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಾಗನಾಯಕನಹಳ್ಳಿಯಲ್ಲಿ ತನ್ನ ಸಂಬಂದಿ ನಾಗರಾಜು ಮೃತಪಟ್ಟಿದ್ದರು. ಇಂದು ಬೆಳಗ್ಗೆ ಅಂತ್ಯಸಂಸ್ಕಾರ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮುನಿವೆಂಕಟಪ್ಪ ತೋಟಕ್ಕೆ ಹೋಗಿದ್ದರು.
ತೋಟಕ್ಕೆ ಹೋದ ಸಂದರ್ಭದಲ್ಲಿ ಘಟನೆ ನಡೆದಿದ್ದು ಒಂದೇ ಕುಟುಂಬ ಎರೆಡು ಜೀವಗಳನ್ನ ಏಕಕಾಲದಲ್ಲಿ ಕಳೆದುಕೊಂಡಂತಾಗಿದೆ.
ಘಟನಾ ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
