ಹುಸ್ಕೂರು ಮದ್ದೂರಮ್ಮ ಜಾತ್ರೆ, ಎರೆಡು ಕುರುಜುಗಳು ನೆಲಸಮ. ಇಬ್ಬರು ಸಾವು ಇಬ್ಬರಿಗೆ ಗಂಭೀರ ಗಾಯ.
1 min read
ಹುಸ್ಕೂರು ಮದ್ದೂರಮ್ಮ ಜಾತ್ರೆ, ಎರೆಡು ಕುರುಜುಗಳು ನೆಲಸಮ. ಇಬ್ಬರು ಸಾವು ಇಬ್ಬರಿಗೆ ಗಂಭೀರ ಗಾಯ.
ಬೆಂ,ಆನೇಕಲ್,ಮಾ,22: ತಾಲೂಕಿನ ಪ್ರತಿಷ್ಠಿತ ಹುಸ್ಕೂರು ಮದ್ದೂರಮ್ಮ ಜಾತ್ರೆಯ ವಿಶೇಷ ಆಕರ್ಷಣೆಯ ಎರೆಡು ಕುರುಜುಗಳು ಉರುಳಿ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿದರೆ ಮತ್ತಿಬ್ಬರು ಗಂಭೀರ ಗಾಯಗಳಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಮಿಳುನಾಡಿನ ಹೊಸೂರಿನ ರೋಹಿತ್ (26)- ಬೆಂಗಳೂರು ಕೆಂಗೇರಿಯ ಜ್ಯೋತಿ (14)ಸಾವನ್ನಪ್ಪಿದವರು.
ಉಳಿದಂತೆ ಲಕ್ಕಸಂದ್ರದ ರಾಕೇಶ್ ಜೊತೆಗೆ ಮತ್ತೋವ್ರ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ದೊಡ್ಡನಾಗಮಂಗಲದ ಕುರುಜು ಚಿಕ್ಕನಾಗಮಂಗಲದ ಬಳಿ ಮರಗಳ ಮೇಲೆ ಉರುಳಿ, ದೇವಾಲಯದ ಬಳಿಯ ರಾಯಸಂದ್ರ ಕುರುಜು ಜನರ ಮೇಲೆ ಉರುಳಿದೆ. ಕುರುಜಿನ ಕೆಳಗೆ ಭಕ್ತರು ಸಿಲುಕಿ ಆಟೋ ಚಾಲಕ ರೋಹಿತ್ ಮತ್ತು ಹುಡುಗಿ ಜ್ಯೋತಿ ಸಾವನ್ನಪ್ಪಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಲ್ಲದೆ ವಿಪರೀತ ಮಳೆಯ ಗಾಳಿಯೂ ಕುರುಜು ಬೀಳಲು ಕಾರಣ ಎಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ.
ಈ ಹಿಂದೆ ಇದೇ ರಾಯಸಂದ್ರದ ಕುರುಜು ಉರುಳಿದ್ದು, ಕಳೆದ ವರ್ಷ ಮತ್ತೊಂದು ಕುರುಜು ಉರುಳಿದ್ದನ್ನು ನೆನಪಿಸಬಹುದಾದರೂ ಆಗ ಸಾವು ನೋವುಗಳು ಸಂಭವಿಸಿರಲಿಲ್ಲ.
