ಕನ್ನಡ ಒಕ್ಕೂಟದ ಕರ್ನಾಟಕ ಬಂದ್ ಮುಷ್ಕರಕ್ಕೆ ಚಾಲನೆ ನೀಡಿದ ಕನ್ನಡ ಜಾಗೃತಿ ವೇದಿಕೆ.
1 min read
https://youtu.be/7xzQRC5jsPc?si=s5M5wV17GS61Nv3l
ಕನ್ನಡಿಗರ ಮೇಲೆ ಹಲ್ಲೆ ಖಂಡಿಸಿ ಕನ್ನಡ ಜಾಗೃತಿ ವೇದಿಕೆಯಿಂದ ಹೆದ್ದಾರಿ ತಡೆ, ಬಂಧನ.
ಬೆಂ,ಆನೇಕಲ್,22: ಕರ್ನಾಟಕ ಬಂದ್ ಗೆ ಕರೆ ಕೊಟ್ಟಿರುವ ಕನ್ನಡ ಒಕ್ಕೂಟದ ಕನ್ನಡ ಜಾಗೃತಿ ವೇದಿಕೆ ರಾಜ್ಯದ ಗಡಿ ಅತ್ತಿಬೆಲೆಯಲ್ಲಿ ಹೆದ್ದಾರಿ ತಡೆಯುವ ಮುಖಾಂತರ ಮರಾಠಿಗರ ಹಲ್ಲೆಯನ್ನು ಖಂಡಿಸಿದರು. ಅನಂತರ ಅತ್ತಿಬೆಲೆ ಪೊಲೀಸರು ಕಜಾವೇ ಕಾರ್ಯಕರ್ತರನ್ನು ಬಂಧಿಸಿ ಬಿಡುಗಡೆ ಮಾಡಿದರು.
ಕಜಾವೇ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ ಮಂಜುನಾಥ ದೇವ ನೇತೃತ್ವದ ತಂಡ ಬೆಳಗ್ಗೆ ತಮಿಳುನಾಡು-ಕರ್ನಾಟಕದ ಗಡಿ ಅತ್ತಿಬೆಲೆ ಗಡಿಯ ರಾಷ್ಟ್ರೀಯ ಹೆದ್ದಾರಿ ತಡೆದು ರಸ್ತೆಯಲ್ಲಿಯೇ ಕುಳಿತು ಹಲ್ಲೆಯನ್ನು ಖಂಡಿಸಿ ಕರ್ನಾಟಕ ಬಂದ್ ಗೆ ಚಾಲನೆ ನೀಡಿದರು. ಹೋರಾಟಗಾರರು ಜಮಾಯಿಸುತ್ತಿದ್ದಂತೆ ಪೊಲೀಸರ ಸಂಖ್ಯೆ ಹೆಚ್ಚಿಸಿ ಹೋರಾಟಗಾರರು ರಸ್ತೆ ತಡೆ ನಂತರ ಬಂಧಿಸಿ ಬಿಡುಗಡೆ ಮಾಡಿದರು. ಹೋರಾಟ- ಬಂಧನ-ಬಿಡುಗಡೆ ನಂತರ ಬೆಂಗಳೂರಿನತ್ತ ಕಾರ್ಯಕರ್ತರು ತೆರಳಿದರು.
