ಅಬ್ಬಾ.. 100 ಅಡಿ ಎತ್ತರದ ಮದ್ದೂರಮ್ಮ ದೇವಿ ಜಾತ್ರೆಯ ತೇರಿನ ಮೇಲೆ RCB ಫ್ಯಾನ್ಸ್; ವಿಡಿಯೋ ನೋಡಿದ್ರೆ ಶಾಕ್
1 min read
ಆನೇಕಲ್ ತಾಲೂಕಿನ ಇತಿಹಾಸ ಪ್ರಸಿದ್ಧ ಹುಸ್ಕೂರು ಮದ್ದೂರಮ್ಮ ದೇವಿಯ ಜಾತ್ರೆ ಈ ಬಾರಿ ಮಾರ್ಚ್ 21ರಿಂದ 25ರವರೆಗೆ ನಡೆಯಲಿದೆ. 20 ರಿಂದ 25 ಅಂತಸ್ತುಗಳಿರುವ 100 ಅಡಿಗೂ ಹೆಚ್ಚು ಎತ್ತರದ ತೇರಿನ ಮೇಲೆ RCB ಅಭಿಮಾನಿಗಳು ವಿಡಿಯೋ ಮಾಡಿ ತಮ್ಮ ಬೆಂಬಲವನ್ನು ಪ್ರದರ್ಶಿಸಿದ್ದಾರೆ.
ಈ ಸಲ ಕಪ್ ನಮ್ದೇ ಗುರು.. 10 ಅಲ್ಲ 18 ಸೀಸನ್ ಆದ್ರೂ RCB ಫ್ಯಾನ್ಸ್‌ಗಳ ಈ ನಂಬಿಕೆ ಸ್ವಲ್ಪವೂ ಕಮ್ಮಿ ಆಗಿಲ್ಲ. ಇವತ್ತು IPLನ 18ನೇ ಆವೃತ್ತಿ ಮೊದಲ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಆರ್ಸಿಬಿ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳು ಮುಖಾಮುಖಿ ಆಗುತ್ತಿವೆ. ಐಪಿಎಲ್ ರೋಚಕ ಹಣಾಹಣಿಗೂ ಮುನ್ನ RCB ಫ್ಯಾನ್ಸ್ ತಮ್ಮ ಅಭಿಮಾನ ಎಂಥದ್ದು ಅನ್ನೋದನ್ನ ಸಾರುತ್ತಿದ್ದಾರೆ. RCB ಕ್ರೇಜ್, RCB ಅಭಿಮಾನಿಗಳು ಅಂದ್ರೆ ಸುಮ್ನೆ ಅಲ್ಲವೇ ಅಲ್ಲ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಸುಮಾರು 100 ಅಡಿಗೂ ಎತ್ತರವಾದ ಮದ್ದೂರಮ್ಮ ದೇವಿಯ ಜಾತ್ರೆ ತೇರಿನ ಮೇಲೆ RCB ಫ್ಯಾನ್ಸ್ ನಿಂತು ತಮ್ಮ ಅಭಿಮಾನ ಮೆರೆದಿದ್ದಾರೆ. RCB ಅಭಿಮಾನಿಗಳ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದೆ.
ಬೆಂಗಳೂರಿನಿಂದ ಕೇವಲ 15 ಕಿಲೋ ಮೀಟರ್ ದೂರದಲ್ಲಿ ಈ ಜಾತ್ರೆ ಮಾಡಲಾಗುತ್ತದೆ. ಪ್ರತಿ ವರ್ಷವೂ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಹುಸ್ಕೂರು ಗ್ರಾಮಸ್ಥರು ಸೂಕ್ತದಿನವನ್ನು ಗೊತ್ತುಪಡಿಸಿ, ಈ ರಥೋತ್ಸವವನ್ನು ಸಂಘಟಿಸುತ್ತಾರೆ. ಜನರಿಗೆ, ಜಾನುವಾರುಗಳಿಗೆ ಕಾಯಿಲೆಗಳು ಬರದಿರುವಂತೆ ಗ್ರಾಮದೇವತೆಯ ರಕ್ಷಣೆಯನ್ನು ಕೋರಿ, ಹಿಂದಿನಿಂದಲೂ ಆಚರಣೆಯಲ್ಲಿರುವ ಈ ಜಾತ್ರೆ, ಇಂದಿಗೂ ನಡೆದುಕೊಂಡು ಬರುತ್ತಿದೆ. ಹಿರಿಯರು ಹೇಳುವಂತೆ ಈ ಜಾತ್ರೆ ಕನ್ನಡನಾಡಿನ ಜಾತ್ರೆಗಳಲ್ಲಿಯೇ ವಿಶೇಷವಾಗಿದೆ.
