[t4b-ticker]

ಮೊದಲ ಪಂದ್ಯಕ್ಕೂ ಮುನ್ನ ಅಣ್ಣಾವ್ರ ನೆನಪಿಸಿದ RCB..ಪಂದ್ಯ ಆರಂಭಕ್ಕೂ ಆರ್​ಸಿಬಿ ಅಭಿಮಾನಿಗಳ ಮನಗೆದ್ದ ಕ್ಯಾಪ್ಟನ್​

1 min read
Share it

https://youtube.com/shorts/i4qsTJRm8Q8?si=h_NkxxlKMbPvdfIa

 

ಕ್ರಿಕೆಟ್​​ ಜಗತ್ತು ತುದಿಗಾಲಲ್ಲಿ ನಿಂತು ಕಾಯುತ್ತಿದ್ದ ದಿನ ಬಂದೇ ಬಿಡುತು . ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಒಂದು ಪ್ರತಿಷ್ಟಿತ ಟ್ರೋಫಿಗಾಗಿ ಇಂದಿನಿಂದ 10 ತಂಡಗಳು ಬ್ಯಾಟಲ್ ​ಫೀಲ್ಡ್​ನಲ್ಲಿ ಫೈಟ್​​ ನಡೆಸಲಿದೆ. 75 ಪಂದ್ಯಗಳಿಗೆ 18ನೇ ಸೀಸನ್​ನ ಐಪಿಎಲ್​ ಸಾಕ್ಷಿಯಾಗಲಿದ್ದು, 65 ದಿನಗಳ ಕಾಲ ಕ್ರಿಕೆಟ್​ ಫ್ಯಾನ್ಸ್​ಗೆ ಫುಲ್​ ಟ್ರೀಟ್​ ಕಾದಿದೆ.

 

ಪಂದ್ಯ ಆರಂಭಕ್ಕೂ ಮುನ್ನ ಆರ್‌ಸಿಬಿ ತಂಡದ ನಾಯಕ ರಜತ್‌ ಪಾಟಿದಾರ್‌ ಅವರು ಎರಡು ಕೈ ಜೋಡಿಸಿ ನಟ ರಾಜ್‌ಕುಮಾರ್‌ ಅವರ ಖ್ಯಾತ ಡೈಲಾಗ್​ ಹೊಡೆದಿದ್ದಾರೆ. ಹೌದು, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ರಜತ್​ ಪಾಟಿದಾರ್​ ವರನಟ ಡಾಕ್ಟರ್​​ ರಾಜ್​ಕುಮಾರ್​ರನ್ನ ನೆನೆದಿದ್ದಾರೆ. ಮಿಸ್ಟರ್​​ ನ್ಯಾಗ್ಸ್​ ಜೊತೆಗಿನ ಇನ್​​ಸೈಡರ್​ ಶೋನಲ್ಲಿ ಭಾಗಿಯಾಗಿದ್ದ ವೇಳೆ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. ಫ್ಯಾನ್ಸ್​ ಬೆಂಬಲಕ್ಕೆ ಧನ್ಯವಾದ ಹೇಳಿರೋ ರಜತ್​, ಡಾಕ್ಟರ್​​ ರಾಜ್​ಕುಮಾರ್​ ಅವರು ಹೇಳಿದಂತೆ ಅಭಿಮಾನಿಗಳೇ ನಮ್ಮ ದೇವ್ರು ಎಂದು ಡೈಲಾಗ್​ ಹೊಡೆದಿದ್ದಾರೆ.

 

ಕನ್ನಡದಲ್ಲಿ ಅಭಿಮಾನಿಗಳೇ ನಮ್ಮ ದೇವ್ರು ಎಂದು ರಜತ್ ಪಾಟಿದಾರ್ ಹೊಡೆದ ಡೈಲಾಗ್​ ಕೇಳಿ ಆರ್​ಸಿಬಿ ಅಭಿಮಾನಿಗಳು ಫುಲ್​ ಖುಷ್ ಆಗಿದ್ದಾರೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು, ಅಭಿಮಾನಿಗಳಿಗೆ ನಮ್ಮನೇ ದೇವ್ರು, RCBನೇ ನಮ್ ಎದೆ ಉಸಿರು, ಕನ್ನಡ ಮಾತಾಡಿ ಮನಸ್ಸು ಗೆದ್ದು ಬಿಟ್ಟೆ, ಈ ಸಲ ಕಪ್‌  ನಮ್ಮದೆ , ನಮ್ಮ ನಾಯಕ ನಮ್ಮ ಹೆಮ್ಮೆ ಎಂದು ಕಾಮೆಂಟ್ಸ್​ ಹಾಕುತ್ತಿದ್ದಾರೆ. ಇನ್ನೂ, 2022 ರಿಂದ 2024ರವರೆಗೆ ದಕ್ಷಿಣ ಆಫ್ರಿಕಾದ ಫಾಫ್ ಡುಪ್ಲೆಸಿಸ್   ಆರ್​ಸಿಬಿ ನಾಯಕರಾಗಿದ್ದರು. ಆದರೆ ಈ ಬಾರಿಯ ರಜತ್ ಪಾಟಿದಾರ್ ಆರ್​ಸಿಬಿ ತಂಡದ ನಾಯಕರಾಗಿದ್ದಾರೆ.

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?