ಕರ್ನಾಟಕ ಬಂದ್ ಹಿನ್ನೆಲೆ ಥಿಯೇಟರ್‌ಗಳಿಗೆ ತಟ್ಟಿದ ಬಂದ್ ಬಿಸಿ.. ಬಾರ್, ಮಾಲ್‌ಗಳು ಓಪನ್; ಇದೆಂಥಾ ಹೋರಾಟ?
1 min read
ಅಖಂಡ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಸಿನಿಮಾ ಥಿಯೇಟರ್‌ಗಳಿಗೆ ಹೋರಾಟದ ಬಿಸಿ ತಟ್ಟಿದೆ. ಇವತ್ತಿನ ಮಾರ್ನಿಂಗ್ ಶೋ ಪ್ರದರ್ಶನ ರದ್ದು ಮಾಡಲಾಗಿದ್ದು, ವಾಟಾಳ್ ನಾಗರಾಜ್ ಹೋರಾಟಕ್ಕೆ ಥಿಯೇಟರ್ ಮಾಲೀಕರು ಬೆಂಬಲ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಥಿಯೇಟರ್ ಮಾಲೀಕರು, ಸಿನಿಮಾ ಪ್ರೇಕ್ಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಸಂತೋಷ್, ನರ್ತಕಿ ಥಿಯೇಟರ್‌ನಲ್ಲಿ ಇಂದು ಸಿನಿಮಾ ಪ್ರದರ್ಶನ ರದ್ದಾಗಿದೆ. ಬಾರ್ ಹಾಗೂ ಮಾಲ್‌ಗಳು ಓಪನ್ ಆಗಿದ್ದು, ಥಿಯೇಟರ್‌ನಲ್ಲಿ ಸಿನಿಮಾ ಪ್ರದರ್ಶನ ರದ್ದು ಮಾಡಿದ್ದಕ್ಕೆ ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿನಿಮಾ ಪ್ರದರ್ಶನ ರದ್ದು ಮಾಡಿದ್ರೆ ಚಿತ್ರಮಂದಿರಕ್ಕೆ ನಷ್ಟ ಆಗುತ್ತೆ. ಗಲಾಟೆ ಆಗಿದ್ದು ಬೆಳಗಾವಿಯಲ್ಲಿ, ಮರಾಠಿ ಪುಂಡರಿಗೆ ಬುದ್ಧಿ ಕಲಿಸಿ. ಬಂದ್ ಆದ್ರೆ ಸಂಪೂರ್ಣ ಬಂದ್ ಆಗಬೇಕು ಎಂದು ಹೇಳಿದ್ದಾರೆ.
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಥಿಯೇಟರ್‌ಗಳಲ್ಲಿ ಟಿಕೆಟ್ ಕೌಂಟರ್ ಕೂಡ ಕ್ಲೋಸ್ ಮಾಡಲಾಗಿದೆ. ಥಿಯೇಟರ್ ಸಿಬ್ಬಂದಿ ಪ್ರೇಕ್ಷಕರನ್ನು ವಾಪಸ್ ಕಳುಹಿಸುತ್ತಿದ್ದಾರೆ. ಇಂದು ಥಿಯೇಟರ್ ಬಂದ್ ಆಗಿರೋದು ನಮಗೆ ಗೊತ್ತಿರಲಿಲ್ಲ. ಕ್ಲೋಸ್ ಆದ್ರೆ ಎಲ್ಲವೂ ಕ್ಲೋಸ್ ಆಗಬೇಕು. ಹೊರಗೆ ನೋಡಿದ್ರೆ ಬಾರ್ ಓಪನ್ ಆಗಿವೆ. ಇಲ್ಲಿ ನೋಡಿದ್ರೆ ಥಿಯೇಟರ್ ಬಂದ್ ಮಾಡಿದ್ದಾರೆ. ಬರೀ ಥಿಯೇಟರ್ ಕ್ಲೋಸ್ ಮಾಡೋದಲ್ಲ. ಕನ್ನಡ ಪರ ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡಬೇಕು. ಈಗಿನ ಸ್ಥಿತಿ ನೋಡಿದ್ರೆ ಬಂದ್ ಯಶಸ್ವಿ ಆದಂತೆ ಕಾಣುತ್ತಿಲ್ಲ ಎಂದು ಕನ್ನಡ ಸಿನಿಮಾ ಪ್ರೇಕ್ಷಕರು ತಮ್ಮ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸಿನಿಮಾ ಥಿಯೇಟರ್ ಮಾಲೀಕರು ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ನಮಗೆ ನಷ್ಟವಾಗಿದೆ. ವಾಟಾಳ್ ನಾಗರಾಜ್ ಹೋರಾಟ ಅಂದ್ರೆ ಸುಮ್ಮನೇ ಅಲ್ಲ. ಇಂತಹ ಹೋರಾಟಕ್ಕೆ ಎಲ್ಲರೂ ಬೆಂಬಲ ಕೊಡಬೇಕು. ಬಂದ್ ಅಂದ್ರೆ ಹೀಗೆ ಮಾಡೋದಲ್ಲ. ಕೊರೊನಾ ಟೈಂನಲ್ಲಿ ಇದ್ದಂತೆ ಆಗ್ಬೇಕು. ಆಗ ಮಾತ್ರ ಬಂದ್‌ಗೆ ಅರ್ಥ ಎಂದಿದ್ದಾರೆ. ಥಿಯೇಟರ್‌ಗಳ ಪ್ರದರ್ಶನ ಮಾತ್ರ ಕ್ಯಾನ್ಸಲ್ ಮಾಡಿದ್ದಾರೆ. ಆ ಕಡೆ ನೋಡಿದ್ರೆ ಬಾರ್ ಮತ್ತು ಮಾಲ್‌ಗೆ ಅವಕಾಶ ಕೊಟ್ಟಿದ್ದಾರೆ. ಇದರಿಂದ ಥಿಯೇಟರ್‌ಗೆ ನಷ್ಟ ಆಗಲಿದೆ. ಮೊದಲೇ ಜನ ಥಿಯೇಟರ್ ಕಡೆ ಬರ್ತಿಲ್ಲ. ಬಂದ್ ಆದ್ರೆ ಸಂಪೂರ್ಣ ಬಂದ್ ಆಗ್ಬೇಕು. ಈ ಥರಾ ಬಂದ್ ಮಾಡೋದಲ್ಲ ಎನ್ನುತ್ತಿದ್ದಾರೆ.
