ಕರ್ನಾಟಕ ಬಂದ್ ಮಧ್ಯೆ ಬೆಳಗಾವಿಯಲ್ಲಿ ಎಂಇಎಸ್ ಮುಖಂಡರಿಂದ ಪ್ರಚೋದನಾತ್ಮಕ ನಡೆ..!
1 min read
ಬೆಳಗಾವಿ : ಬೆಳಗಾವಿ ಸೇರಿದಂತೆ ಕರ್ನಾಟಕ ಗಡಿಭಾಗದಲ್ಲಿ ಮಹಾರಾಷ್ಟ್ರದ ಕೆಲವು ಮರಾಠಿ ಪುಂಡರು ಹಾಗೂ MES ಕಾರ್ಯಕರ್ತರು ಕನ್ನಡಿಗರ ಮೇಲೆ ನಡೆಸುತ್ತಿರುವ ದೌರ್ಜನ್ಯ ಖಂಡಿಸಿ‘ಕರ್ನಾಟಕ ಬಂದ್’ಗೆ ಕರೆ ನೀಡಲಾಗಿದೆ. ಈ ಮಧ್ಯೆ ಕೆಲವು ನಾಡದ್ರೋಹಿ ಎಂಇಎಸ್ ಮುಖಂಡರು ಪ್ರಚೋದನಾತ್ಮಕ ನಡೆ ಪ್ರದರ್ಶಿಸಿದ್ದಾರೆ.ಕರ್ನಾಟಕದ ಪಿಡಿಓಗೆ ದರ್ಪ ತೋರಿದ ಮರಾಠಿ ಪುಂಡನಿಗೆ ಸನ್ಮಾನ ಮಾಡಿ ಉದ್ಧಟತನ ಮಾಡಿದೆ. ಕಿಣಯೇ ಗ್ರಾಮದ ತಿಪ್ಪಣ್ಣ ಡೋಕ್ರೆಗೆ ಎಂಇಎಸ್ ಮುಖಂಡ ಶುಭಂ ಶಳ್ಕೆ ಸನ್ಮಾನ ಮಾಡಿದ್ದಾರೆ. ಜೈಲಿನಿಂದ ಹೊರಬರುತ್ತಿದ್ದಂತೆ ತಿಪ್ಪಣ್ಣ ಡೋಕ್ರೆಗೆ ಸನ್ಮಾನಿಸಿಸಲಾಗಿದೆ.
ಕಿಣಯೇ ಗ್ರಾಪಂ ಪಿಡಿಓ ನಾಗೇಂದ್ರ ಪತ್ತಾರ ಅವರನ್ನು ತಿಪ್ಪಣ್ಣ ಡೋಕ್ರೆ ನಿಂದಿಸಿದ್ದ. ದಾಖಲೆಗಳನ್ನು ಮರಾಠಿ ಭಾಷೆಯಲ್ಲೇ ನೀಡಬೇಕು ಎಂದು ದರ್ಪ ತೋರಿದ್ದ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪೊಲೀಸರು ತಿಪ್ಪಣ್ಣ ಡೋಕ್ರೆಯನ್ನು ಜೈಲಿಗೆ ಕಳುಹಿಸಿದ್ದರು. ಇದೀಗ ಹಿಂಡಲಗಾ ಜೈಲಿನಿಂದ ಹೊರಬರುತ್ತಿದ್ದಂತೆ ತಿಪ್ಪಣ್ಣ ಡೋಕ್ರೆಗೆ ಸನ್ಮಾನ ಮಾಡಲಾಗಿದೆ.
