ವಿಧವೆ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ..!
1 min read
ಯಾದಗಿರಿ : ವಿಚ್ಛೇದಿತ ಮಹಿಳೆಯನ್ನು ಪ್ರೀತಿಸುವ ನಾಟಕವಾಡಿ ಬಳಿಕ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ಕೊನೆಗೆ ವಿವಾಹವಾಗದೆ ವ್ಯಕ್ತಿಯೊಬ್ಬ ವಂಚಿಸಿರುವ ಘಟನೆ ಯಾದಗಿರಿ ತಾಲೂಕಿನ ಬಸಂತಪುರ ಗ್ರಾಮದಲ್ಲಿ ನಡೆದಿದೆ. ತಡಿಬಿಡಿ ಗ್ರಾಮದ ಮಾಳಪ್ಪ ಹತ್ತಕುಣಿ ಎಂಬುವವನಿಂದ ಸುವರ್ಣಾ ಎಂಬ ವಿಚ್ಛೇದಿತ ಮಹಿಳೆಗೆ ವಂಚನೆಯಾಗಿದ್ದು, ಕಳೆದ ಹತ್ತು ವರ್ಷದ ಹಿಂದೆ ಗಂಡನನ್ನು ಸುವರ್ಣಾ ಕಳೆದುಕೊಂಡಿದ್ದರು. ತನಗಿರುವ ಕಷ್ಟದ ಬಗ್ಗೆ ಅಬ್ಬೆತುಮಕೂರಿನ ಸ್ವಾಮೀಜಿ ಬಳಿ ಮಹಿಳೆ ಅಳಲು ತೊಂಡಿಕೊಂಡಿದ್ದಳು. ಅದೇ ಅಬ್ಬೆತುಮಕೂರು ಮಠದಲ್ಲೇ ಪರಿಚಯ ಮಾಡಿಕೊಂಡ ವಂಚಕ ಮಾಳಪ್ಪ ಹತ್ತಿಕುಣಿ ನಂತರ ಮಾಳಪ್ಪ ಹಾಗೂ ಸುವರ್ಣಾ ನಡುವೆ ಅತ್ಯಾಪ್ತ ಸಂಪರ್ಕ ಬೆಳೆದು ಸುವರ್ಣಾಗೆ ಬಾಳು ಕೊಡುತ್ತೇನೆಂದು ನಂಬಿಸಿ ಮೋಸ ಮಾಡಿ ವಿಧವೆಯ ಲಕ್ಷಾಂತರ ರೂ. ಬೆಲೆ ಬಾಳುವ ಜಮೀನು ಮಾರಿ ಹಣ ತಗೆದುಕೊಂಡು ಕೈ ಕೊಟ್ಟಿದ್ದಾನೆ ಎಂದು ಮಹಿಳೆ ಕಣ್ಣೀರಿಡುತ್ತಾ ಬಾಟಲ್ ನಲ್ಲಿ ಡಿಸೇಲ್ ತೆಗೆದುಕೊಂಡು ಯಾದಗಿರಿ ಎಸ್ಪಿ ಕಚೇರಿಗೆ ಬಂದ ಡಿಸೇಲ್ ಸುರಿದುಕೊಂಡು ಆತ್ಮಹತ್ಯೆಗೆ ವಿಧವೆ ಮಹಿಳೆ ಯತ್ನಿಸಿದ್ದಾಳೆ. ಆಕೆಯ ಹೆಸರಿನಲ್ಲಿದ್ದ ಆಸ್ತಿ, ದುಡ್ಡು, ಬಂಗಾರ ಮಾರಿಕೊಂಡು ತಿಂದ ಆರೋಪದಡಿ ಶಹಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
