ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಯಾದಗಿರಿ ಜಿಲ್ಲೆ ವತಿಯಿಂದ ಬಿಸಿಲಿನ ತಾಪಮಾನದ ಬಗ್ಗೆ ಅರಿವು ಕಾರ್ಯಕ್ರಮ
1 min read
ಯಾದಗಿರಿ : ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಯಾದಗಿರಿ ಜಿಲ್ಲೆ ವತಿಯಿಂದ ಬಿಸಿಲಿನ ತಾಪಮಾನದ ಬಗ್ಗೆ ಅರಿವು ಕಾರ್ಯಕ್ರಮ ನಡೆಸಿದರು. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಇಸ್ಲಾಂಪೂರ ಗ್ರಾಮದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಾದ ಅಂಬ್ರೇಶ ಮಾಲಗತ್ತಿ, ಮತ್ತು ಹಸನ್ ಡಿ,ಎಮ್. ಇವರ ನೇತೃತ್ವದಲ್ಲಿ ಪ್ರತಿ ಕಂದಾಯ ಗ್ರಾಮಗಳಿಗೆ ಬೇಟಿ ನೀಡಿ, ಬೇಸಿಗೆ ಬಿಸಿಲಿನಿಂದ ಧಿನೆ ಧಿನೆ ತಾಪಮಾನ ಹೆಚ್ಚಾಗುತ್ತಿದ್ದಂತೆ ಪ್ರತಿ ಗ್ರಾಮಗಳಿಗೆ ಬೇಟಿ ನೀಡಿ ಬಿಸಿಲಿನಿಂದ ಗಾಳಿಯಿಂದ ಸಂಭವಿಸುವ ಅವಘಡಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಅಂಬ್ರೇಶ ಮಾಲಗತ್ತಿ ಅವರು ತಿಳಿಸಿದರು.
ಸೂಚನೆಗಳು
1) ನೀರು ಹೆಚ್ಚು ಕುಡಿಯಬೇಕು,
2) ನೇರ ಬಿಸಿಲಿಗೆ ಹೋಗಬಾರದು,
3) ಸಡಿಲ ಮತ್ತು ಹಗುರವಾದ ಬಟ್ಟೆಗಳನ್ನು ಧರಿಸಬೇಕು ಹಾಗೂ ಪೌಷ್ಟಿಕ ಆಹಾರವನ್ನು ಸೇವನೆ ಮಾಡಬೇಕು ,
4) ಮಧ್ಯಾಹ್ನ 12 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಹೊರಗಡೆ ಜಾಸ್ತಿ ತಿರುಗಾಡಬಾರದು
5) ಬೇಸಿಗೆಯಲ್ಲಿ ಆದಷ್ಟು ಜಾಸ್ತಿ ಶ್ರಮದ ಚಟುವಟಿಕೆಗಳನ್ನು ತಪ್ಪಿಸಿಕೊಳ್ಳಬೇಕು ಎಂದು ಸಾರ್ವಜನಿಕರಿಗೆ ಮನವಿ.
