[t4b-ticker]

ಕುಡಿಯುವ ನೀರಿನ ಅಹಹಾಕಾರ… ಪಟ್ಟಣದ ಜನತೆಗೆ ಸ್ಮಶಾನದ ಬೋರ್ವೆಲ್ ನೀರೆ ಆಸರೆ

1 min read
Share it

 

ಯಾದಗಿರಿ : ವಡಗೇರಾ ಪಟ್ಟಣದ ಜನತೆಗೆ ಸ್ಮಶಾನದ ಬೋರ್ವೆಲ್ ನೀರೆ ಆಸರೆಯಾಗಿದೆ. ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದಲ್ಲಿ ಕುಡಿಯುವ ನೀರಿನ ಅಹಹಾಕಾರ ಹೆಚ್ಚಾಗಿದ್ದು,  ತಾಲೂಕು ಪಂಚಾಯಿತಿ ಇಓ ಪಿಡಿಓ ಸೇರಿ ಇನ್ನಿತರ ಅಧಿಕಾರಿಗಳು ಮತ್ತು ಶಾಸಕರು ದಿವ್ಯ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ವಾಸುದೇವ ಮೇಟಿ ಬಣದ ತಾಲೂಕು ಅಧ್ಯಕ್ಷ ವಿದ್ಯಾಧರ್ ಜಾಕಾ ಆರೋಪಿಸಿದ್ದಾರೆ. ಈಗಾಗಲೇ ಬೇಸಿಗೆ ಆರಂಭವಾಗಿದ್ದು ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ ಪಟ್ಟಣದ ವಾರ್ಡ್ 1. ಮತ್ತು 3. ರಲ್ಲಿ ಹಾಗೂ ಇನ್ನಿತರ ಬಡಾವಣೆಗಳಲ್ಲಿ ಸುಮಾರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇದೆ ನಮ್ಮ ರೈತ ಸಂಘದ ವತಿಯಿಂದ ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಕೂಡಾ ಯಾವುದೇ ರೀತಿಯಾದ ಪ್ರಯೋಜನವಾಗಿಲ್ಲ ಕುಡಿಯುವ ನೀರಿಗಾಗಿ ಸರ್ಕಾರದಿಂದ ಕೋಟಿಗಟ್ಟಲೆ ಹಣ ಬಿಡುಗಡೆಯಾದರೂ ಕೂಡಾ ಕುಡಿಯುವ ನೀರಿನ ಸಮಸ್ಯೆ ಮಾತ್ರ ಬಗೆಹರಿದಿಲ್ಲ ದಿನನಿತ್ಯ ಯುವಕರು ವೃದ್ಧರು ಮಕ್ಕಳು ಪಟ್ಟಣದ ಸ್ವಾಮಿ ವಿವೇಕಾನಂದ ಶಾಲೆಯ ಹತ್ತಿರವಿರುವ ಮತ್ತು ಮುಸ್ಲಿಂ ಸಮಾಜದ ಸ್ಮಶಾನದಲ್ಲಿರುವ ಬೋರ್ವೆಲ್ ಗಳ ನೀರೇ ಆಸರೆಯಾಗಿವೆ ಹಗಲು ರಾತ್ರಿ ಎನ್ನದೆ ಸೈಕಲ್ ಗಾಡಿಗಳ ಮೇಲೆ ನೀರು ತರುವುದೇ ದಿನನಿತ್ಯದ ಒಂದು ಕಾಯಕವಾಗಿದೆ ಅಧಿಕಾರಿಗಳು ಮಾತ್ರ ಇದೆಲ್ಲವನ್ನೂ ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ.

 

ಮೊನ್ನೆಯಷ್ಟೇ ಜಿಲ್ಲಾ ಪಂಚಾಯಿತಿ ಸಿಇಓ ರವರು ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಆದರೆ ಅವರ ಮಾತಿಗೂ ಕೂಡಾ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಇಲ್ಲಿನ ಅಧಿಕಾರಿಗಳು ಪಟ್ಟಣದ ಜನತೆಯು ಅಧಿಕಾರಿಗಳಿಗೆ ಇಡೀ ಶಾಪವಾಕುತ್ತಿದ್ದಾರೆ. ಪಿಡಿಓ ಮಾತ್ರ ಇದಕ್ಕೂ ನನಗೂ ಸಂಬಂಧವಿಲ್ಲವೆಂಬಂತೆ ವರ್ತಿಸುವುದರ ಜೊತೆಗೆ ಯಾವಾಗಲೂ ಮೊಬೈಲ್ ಬಂದ ಇಡುತ್ತಾರೆ ಎಂದು ರೈತ ಸಂಘದ ಪದಾಧಿಕಾರಿಗಳು ದೂರಿದ್ದಾರೆ ಶಾಸಕರು ಅಧಿಕಾರಿಗಳು ಈ ಕುರಿತು ಗಮನಹರಿಸಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಗ್ರಾಮ ಪಂಚಾಯಿತಿಗೆ ಮುಳ್ಳು ಬೇಲಿ ಬಡೆದು ರೈತ ಸಂಘದ ವತಿಯಿಂದ ಉಗ್ರ ಹೋರಾಟ ಮಾಡುವುದಾಗಿ ತಾಲೂಕು ಗೌರವಾಧ್ಯಕ್ಷ ಶರಣು ಜಡಿ, ಸತೀಶ್ ಪೂಜಾರಿ, ಮಲ್ಲು ನಾಟೇಕಾರ, ಹಳ್ಳೆಪ್ಪ ತೇಜೇರ ಹಾಗೂ ಇನ್ನಿತರರು ಎಚ್ಚರಿಕೆ ನೀಡಿದ್ದಾರೆ.

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?