ಕೇಂದ್ರಕ್ಕೆ ಕರ್ನಾಟಕ ಸರ್ಕಾರ ಟಕ್ಕರ್- ವಕ್ಫ್ ತಿದ್ದುಪಡಿ ವಿರುದ್ಧ ಕರ್ನಾಟಕ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ
1 min read
ಪ್ರತಿಪಕ್ಷಗಳ ಅಭಿಪ್ರಾಯಕ್ಕೆ ಮನ್ನಣೆ ಕೊಡದೇ ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ತಂದಿತ್ತು. ಇದಕ್ಕೆ ಟಕ್ಕರ್ ಕೊಡಲೇ ಬೇಕು ಅಂತಾ ಸಜ್ಜಾಗಿದ್ದ ಕರ್ನಾಟಕ ಸರ್ಕಾರ, ನಿನ್ನೆ ಕೇಂದ್ರದ ವಕ್ಫ್ ತಿದ್ದುಪಡಿ ಮಸೂದೆ ವಾಪಸಾತಿಗೆ ಆಗ್ರಹಿಸಿ ನಿರ್ಣಯ ಮಂಡನೆ ಮಾಡಿದೆ. ಬಿಜೆಪಿ ಶಾಸಕರ ಸಭಾತ್ಯಾಗದ ನಡುವೆ ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರವಾಗಿದೆ. ನಿನ್ನೆ ವಿಧಾಸಭೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ ಪಾಟೀಲ್ ನಿರ್ಣಯವನ್ನ ಮಂಡಿಸಿದರು.
ವಕ್ಫ್ ತಿದ್ದುಪಡಿ ಮಸೂದೆ ಏಕಪಕ್ಷೀಯವಾಗಿದೆ. ಜಂಟಿ ಸದನ ಸಮಿತಿ ಕೇಂದ್ರಕ್ಕೆ ಏಕಪಕ್ಷೀಯವಾಗಿ ಶಿಫಾರಸುಗಳನ್ನ ಸಲ್ಲಿಸಿದೆ. ಪ್ರತಿಪಕ್ಷಗಳ ಅಭಿಪ್ರಾಯಕ್ಕೆ ಮನ್ನಣೆ ಕೊಡದೇ ಮೂಲಭೂತ ಹಕ್ಕನ್ನ ಉಲ್ಲಂಘಿಸಿದೆ. ಕೇಂದ್ರ ಈ ವಿಧೇಯಕದ ಮೂಲಕ ರಾಜ್ಯ ಸರ್ಕಾರದ ಸ್ವಾಯತ್ತತೆಯನ್ನ ಹತ್ತಿಕ್ಕಲು ಹೊರಟಿದೆ. ವಕ್ಫ್ ತಿದ್ದುಪಡಿ ಮಸೂದೆ ವಾಪಸ್ ಪಡೆಯಬೇಕೆಂದು ನಿರ್ಣಯ ಕೈಗೊಂಡಿರುತ್ತೆ. ಕರ್ನಾಟಕ ಸರ್ಕಾರ ಸರ್ವಾನುಮತದಿಂದ ಸದನದಲ್ಲಿ ನಿರ್ಣಯ ಕೈಗೊಂಡಿರುತ್ತದೆ ಎಂದು ಹೆಚ್.ಕೆ ಪಾಟೀಲ್ ನಿರ್ಣಯ ಓದಿದ್ರು.ಜ್ಯಾತ್ಯಾತೀತ ಪ್ರಜಾಪ್ರಭುತ್ವ ಮತ್ತು ನಾಗರಿಕರ ನಂಬಿಕೆ, ಹಕ್ಕಿನ ಮೇಲೆ ಯಾವುದನ್ನೂ ರಾಜಿ ಮಾಡಿಕೊಳ್ಳಬಾರದು. ಎಲ್ಲಾ ಸಾಂವಿಧಾನಿಕ ಮೌಲ್ಯಗಳನ್ನು ನಾವು ರಕ್ಷಿಸಬೇಕು. ಅದನ್ನು ರಕ್ಷಿಸೋದು ಎಲ್ಲಾ ರಾಜ್ಯಗಳ ಕರ್ತವ್ಯ ಆಗಿದೆ
ಈ ಕಾಯ್ದೆಯು ಎಲ್ಲ ಜನರ ಆಶೋತ್ತರ ಮತ್ತು ಅವಕಾಶಗಳನ್ನು ಪ್ರತಿಬಿಂಬಿಸುವುದಿಲ್ಲ. ಕರ್ನಾಟಕ ಜನತೆಯೆ ಸರ್ವಾನುಮತದ ಅಪೇಕ್ಷೇಯ ನಿರೀಕ್ಷೆಗಳ ಮೇರೆಗೆ ಮತ್ತು ಜ್ಯಾತ್ಯಾತೀತ ತತ್ವಗಳಿಗೆ ಸಂಪೂರ್ಣವಾಗಿ ವಿರೋಧ ವ್ಯಕ್ತಪಡಿಸುವ ಕಾಯ್ದೆ ಆಗಿದೆ. ಹೀಗಾಗಿ ಈ ಸದನವು ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಸರ್ವಾನುಮತದಿಂದ ತಿರಸ್ಕರಿಸುತ್ತದೆ-ಹೆಚ್.ಕೆ ಪಾಟೀಲ್, ಸಚಿವ ಮಸೂದೆಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಶಾಸಕರು.. ಇದು ಮಿತಿ ಮೀರಿದ ವೋಲೈಕೆ ಎಂದು ಟೀಕಿಸಿದ್ರು. ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸುವ ಸರ್ಕಾರದ ನಿರ್ಣಯಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತು. ಇದು ಸರ್ವಾನುಮತದ ನಿರ್ಣಯ ಅಲ್ಲ.. ಇದಕ್ಕೆ ನಮ್ಮ ವಿರೋಧ ಇದೆ ಅಂತಾ ಬಿಜೆಪಿ ಸದಸ್ಯರು ಹೇಳ್ತಿದ್ರೂ.. ಸರ್ಕಾರ ಮಸೂದೆಯನ್ನ ಅಂಗೀಕರಿಸಿತು. ಸರ್ಕಾರದ ವಿರುದ್ಧ ಬಿಜೆಪಿ ಸದಸ್ಯರಿಂದ ಧಿಕ್ಕಾರ ಘೋಷಣೆಗಳು ಹರಿದು ಬಂದ್ವು.. ವಿಪಕ್ಷಗಳು ಭಾರತ್ ಮಾತಾಕಿ ಜೈ ಅಂತ ಘೋಷಣೆ ಕೂಗಿ ಸರ್ಕಾರದ ನಿರ್ಣಯ ವಿರೋಧಿಸಿ ಸಭಾತ್ಯಾಗ ಮಾಡ್ತು.
ಬಜೆಟ್ ಮೇಲಿನ ಚರ್ಚೆ ವೇಳೆ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಎದ್ದು ನಿಂತು ಒಗ್ಗಟ್ಟಿನ ಮಂತ್ರ ಪಠಿಸಿದ್ರು. ನಾವು ಎಲ್ಲಿಂದಲೋ ಬಂದವರಲ್ಲ.. ನಮ್ಮನ್ನೂ ಕೂಡ ನಿಮ್ಮ ಸಹೋದರರು ಅಂತ ತಿಳೀರಿ ಎಂದು ಆಗ್ರಹಿಸಿದರು. ವಿಧಾನಸಭೆಯಲ್ಲಿ ಜಟಾಪಟಿ.. ಮಾತಿನ ಚಕಮಕಿ.. ಇದೆಲ್ಲದರ ನಡುವೆ ವಕ್ಫ್ ತಿದ್ದುಪಡಿ ಮಸೂದೆ ಚಾಪ್ಟರ್ ಮುಗಿಸಿದ್ರು. ಇದರ ಜೊತೆಗೆ ಹಲವು ವಿಧೇಯಕಗಳಿಗೆ ಅನುಮೋದನೆ ಸಿಕಿದೆ.
