ಆಸಿಡ್ ದಾಳಿ ಮಾಡಿದ ಆರೋಪಿಗೆ ಹತ್ತು ವರ್ಷ ಶಿಕ್ಷೆ ಮತ್ತು ಹತ್ತು ಲಕ್ಷ ರೂ ದಂಡ ವಿಧಿಸಿದ ಆನೇಕಲ್ ನ್ಯಾಯಾಲಯ.

ಆಸಿಡ್ ದಾಳಿ ಮಾಡಿದ ಆರೋಪಿಗೆ ಹತ್ತು ವರ್ಷ ಶಿಕ್ಷೆ ಮತ್ತು ಹತ್ತು ಲಕ್ಷ ರೂ ದಂಡ ವಿಧಿಸಿದ ಆನೇಕಲ್ ನ್ಯಾಯಾಲಯ.
ಬೆಂ,ಆನೇಕಲ್,ಮಾ,೧೯: ೨೦೧೯ರ ಡಿಸೆಂಬರ್ ೧೮ರಂದು ಸರ್ಜಾಪುರದ ಆರೋಪಿ ಬಸಪ್ಪ ಎಂಬುವವರು ಆನಂದ್ ಹೆಚ್ ಎಂಬುವವರ ಮುಖಕ್ಕೆ ಆಸಿಡ್ ಎರಚಿದ್ದರು. ಈ ಪ್ರಕರಣವನ್ನು ದಾಖಲಿಸಿದ್ದ ತನಿಖಾಧಿಕಾರಿ ಟಿವಿ ಶಿವಶಂಕರ್ ಬಸಪ್ಪನ ವಿರುದ್ದ ಸಮರ್ಪಕವಾಗಿ ದೋಷಾರೋಪಪಟ್ಟಿಯನ್ನು ೩ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಎಸ್ಸಿ ಸಂಖ್ಯೆ ೫೦೩೫/೨೧ರಂತೆ ಭಾರತೀಯ ದಂಡ ಸಂಹಿತೆ ಕಲಂ ೩೨೬(ಎ) ಅಡಿಯ ಪ್ರಕರಣವನ್ನು ಸರ್ಕಾರಿ ಅಭಿಯೋಜಕÀ ತಾರಾನಾಥ್ ವಾದ ಆಲಿಸಿದ ನ್ಯಾಯಾಧೀಶ ಸೋಮಶೇಖರ್ ಬಿ ರವರು ಇತ್ತ ತೀರ್ಪಿನಂತೆ ಶಿಕ್ಷೆ ಪ್ರಕಟಗೊಂಡಿದೆ ಎಂದು ನ್ಯಾಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
![]()