ಎಸ್ಎಸ್ ಎಲ್ಸಿ ಪರೀಕ್ಷಾರ್ಥಿಗಳಿಗೆ ದೈರ್ಯದ ಮಾತನ್ನಾಡಿದ ಬಿಇಒ ವೆಂಕಟೇಶ್
1 min readhttps://youtu.be/PoeYFOivtbk?si=tDi4jIVPldK8erBt
ಆನೇಕಲ್ ತಾಲೂಕಿನ 115 ಶಾಲೆಗಳ 6610 ವಿದ್ಯಾರ್ಥಿಗಳ ಮಾ21ರಿಂದ ಎಸ್ಎಸ್ಎಲ್ಸಿ ಪರೀಕ್ಷೆ, ದೈರ್ಯವಾಗಿ ಎದುರಿಸಿ, -ಬಿಇಒ ವೆಂಕಟೇಶ್ ಕರೆ.
ಆನೇಕಲ್,ಮಾ,19: ತಾಲೂಕಿನಾಧ್ಯಂತ 2024-25 ನೇ ಸಾಲಿನ ಎಸ್ಎಸ್ ಎಲ್ಸಿ ಪರೀಕ್ಷೆಗಳು ಮಾ21ರಿಂದ ಆರಂಭವಾಗಲಿದ್ದು ಎಲ್ಲ ವಿದ್ಯಾರ್ಥಿಗಳು ದೈರ್ಯ-ಸ್ಥೈರ್ಯದಿಂದ ಪರೀಕ್ಷೆ ಎದುರಿಸುವಂತೆ ಆನೇಕಲ್ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಕರೆ ನೀಡಿದ್ದಾರೆ.
ಎಲ್ಲ 20 ಕೇಂದ್ರಗಳಲ್ಲೂ ವೆಬ್ಕಾಸ್ಟ್ ಮತ್ತು ಎಐ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದರು. ಹೀಗಾಗಿ ಯಾವುದೇ ಆತಂಕವಿಲ್ಲದೆ ಸಮಯವನ್ನು ಸದುಪಯೋಗ ಪಡಿಸಿಕೊಂಡು ಪರೀಕ್ಷೆಯನ್ನು ಉತ್ತಮವಾಗಿ ಎದುರಿಸುವ ಮೂಲಕ ಇಡೀ ತಾಲೂಕಿಗೆ ಪೋಷಕರಿಗೆ ಗುರುಗಳಿಗೆ ಹೆಸರು ತರಬೇಕೆಂದು ಕೋರಿದರು.
ಒಟ್ಟು 115 ಶಾಲೆಗಳ 6610 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ಅನುದಾನಿತ 15 ಶಾಲೆಗಳಿಂದ 1413, ಸರ್ಕಾರಿ 14 ಶಾಲೆಗಳಿಂದ 888, ಖಾಸಗೀ 86 ಶಾಲೆಗಳಿಂದ 4309 ಪರೀಕ್ಷೆಗೆ ಕುಳಿತಿದ್ದಾರೆ.
ಅಲ್ಲದೆ ಯಾವ ಅಧಿಕಾರಿ ಸಿಬ್ಬಂದಿಗೂ ಮೊಬೈಲ್ ನಿಷೇಧವಾಗಿದ್ದು ಪರೀಕ್ಷಾ ಕೇಂದ್ರಗಳಿಗೆ ಯಾವ ಮಾಧ್ಯಮಕ್ಕೂ ಪ್ರವೇಶಿಸಲು ಅನುಮತಿಯಿರುವುದಿಲ್ಲ ಎಂದು ತಿಳಿಸಿದ್ದಾರೆ.
