ಚಿನ್ನಸ್ವಾಮಿ ಮೈದಾನದಲ್ಲಿ RCB ಸಮರಾಭ್ಯಾಸ..ಕಪ್ ಗೆಲ್ಲಲು ಮೈದಾನದಲ್ಲಿ ಸಂಕಲ್ಪ..ಸಿದ್ಧತೆ ಹೇಗಿದೆ..?
1 min read
ಇಂಡಿಯನ್ ಪ್ರೀಮಿಯರ್ ಲೀಗ್ನ ಫೀವರ್ ಕ್ರಿಕೆಟ್ ಲೋಕವನ್ನ ಆವರಿಸಿದೆ. ಕೆಲವೇ ದಿನಗಳಲ್ಲಿ ಮಿಲಿಯನ್ ಡಾಲರ್ ಟೂರ್ನಿ ಆರಂಭವಾಗಲಿದ್ದು, ಫ್ರಾಂಚೈಸಿಗಳ ವಲಯದಲ್ಲಿ ಚುಟುವಟಿಗಳು ಗರಿಗೆದರಿದೆ. ಕ್ರಿಕೆಟ್ ಜಗತ್ತಿನ ಕಲರ್ಫುಲ್ ಲೀಗ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದೆ. ಇಂಡಿಯನ್ ಪ್ರೀಮಿಯರ್ ಲೀಗ್ನ ಫೀವರ್ ವಿಶ್ವವನ್ನೇ ಆವರಿಸಿದೆ. ಫ್ಯಾನ್ಸ್ ಜಾತಕ ಪಕ್ಷಿಗಳಂತೆ ಟೂರ್ನಿ ಆರಂಭಕ್ಕೆ ಕಾಯ್ತಿದ್ದಾರೆ. ಈಗಾಗಲೇ ಅಭ್ಯಾಸದ ಅಖಾಡಕ್ಕೆ ಧುಮಿಕಿರೋ ಟೀಮ್ಸ್ ಟ್ರೋಫಿ ಗೆಲುವಿಗೆ ತಯಾರಿ ನಡೆಸ್ತಿವೆ. ಸೀಸನ್ 18ರ ಐಪಿಎಲ್ ಆರಂಭಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ತಯಾರಿ ಜೋರಾಗಿದೆ. ಹೊಸ ಕ್ಯಾಪ್ಟನ್, ಹೊಸ ಪ್ಲೇಯರ್ಸ್, ಹೊಸ ಹುರುಪಿನೊಂದಿಗೆ ಹೊಸ ಸೀಸನ್ಗೆ ಸಿದ್ಧತೆ ನಡೆಸ್ತಿದೆ. 17 ವರ್ಷಗಳ ಸುದೀರ್ಘ ಕನಸನ್ನ ಈ ಬಾರಿ ನನಸು ಮಾಡಿಕೊಳ್ಳೋ ಲೆಕ್ಕಾಚಾರದಲ್ಲಿ ತಂಡ ರೆಡಿಯಾಗ್ತಿದೆ.
ಚಾಂಪಿಯನ್ಸ್ ಟ್ರೋಫಿ ಬಳಿಕ ತಂಗಿ ವಿವಾಹದಲ್ಲಿ ಬ್ಯುಸಿಯಾಗಿದ್ದ ರಿಷಭ್ ಪಂತ್ ಐಪಿಎಲ್ ಅಖಾಡಕ್ಕೆ ಧುಮುಕಿದ್ದಾರೆ. ಕೆಜಿಎಫ್ನ ರಾಕಿ ಭಾಯ್ ಸ್ಟೈಲ್ನಲ್ಲಿ ಪಂತ್ ಲಕ್ನೋ ತಂಡಕ್ಕೆ ಎಂಟ್ರಿಕೊಟ್ಟಿದ್ದಾರೆ.ಆನ್ಫೀಲ್ಡ್ನಲ್ಲಿ ಭರ್ಜರಿ ಅಭ್ಯಾಸ ನಡೆಸ್ತಿರೋ ರಾಜಸ್ಥಾನ ರಾಯಲ್ಸ್ ತಂಡ ಆಫ್ ದ ಫೀಲ್ಡ್ನಲ್ಲಿ ಅಷ್ಟೇ ಮಸ್ತಿ ಮಾಡ್ತಿದೆ. ಮೊನ್ನೆ ರಾಜಸ್ಥಾನ್ ಕ್ಯಾಂಪ್ ಹೋಳಿ ಸೆಲೆಬ್ರೇಷನ್ ಜೋರಾಗಿ ಅದ್ರ ವಿಡಿಯೋವನ್ನ ಇದೀಗ ರಿಲೀಸ್ ಮಾಡಿದ್ದು ಆಟಗಾರರ ಬಣ್ಣದಾಟ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.ಸೀಸನ್ 18ಕ್ಕೂ ಮುನ್ನ ಮುಂಬೈ ಸ್ಪೆಷಲ್ ಸಾಂಗ್ ರಿಲೀಸ್ ಮಾಡಿದೆ. ಱಪರ್ಗಳಾದ ಸಂಬತಾ ಹಾಗೂ ಸೃಷ್ಟಿ ತಾವ್ಡೆ, ದಾದ ಸೂರ್ಯಕುಮಾರ್ ಯಾದವ್ಗಾಗಿ ಸ್ಪೆಷಲ್ ಸಾಂಗ್ ಮಾಡಿದ್ದಾರೆ.
ಐಪಿಎಲ್ಗೂ ಮುನ್ನ ಸನ್ರೈಸರ್ಸ್ ಹೈದ್ರಾಬಾದ್ ಕ್ಯಾಂಪ್ ಆತ್ಮವಿಶ್ವಾಸ ಹೆಚ್ಚಿದೆ. ಅಭ್ಯಾಸದ ಅಖಾಡಕ್ಕೆ ಧುಮುಕಿರೋ ಇಶಾನ್ ಕಿಶನ್ ಎದುರಾಳಿಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಪ್ರಾಕ್ಟಿಸ್ ಮ್ಯಾಚ್ನಲ್ಲಿ ಬೌಲರ್ಗಳ ಬೆಂಡೆತ್ತಿರೋ ಕಿಶನ್ ಸ್ಫೋಟಕ ಆಟವಾಡಿದ್ದಾರೆ. ಒಂದು ಪಂದ್ಯದಲ್ಲಿ 24 ಎಸೆತಕ್ಕೆ 64 ರನ್ ಚಚ್ಚಿರೋ ಕಿಶನ್, ಇನ್ನೊಂದು ಪಂದ್ಯದಲ್ಲಿ 30 ಎಸೆತಗಳಲ್ಲಿ 73 ರನ್ ಚಚ್ಚಿದ್ದಾರೆ. 18ನೇ ಸೀಸನ್ನ ಐಪಿಎಲ್ ಜಾತ್ರೆಯ ಫೀವರ್ ಕ್ರಿಕೆಟ್ ಲೋಕದಲ್ಲಿ ಸಖತ್ ಸೌಂಡ್ ಮಾಡ್ತಿದೆ. ಆನ್ಫೀಲ್ಡ್ ಹಾಗೂ ಆಫ್ ಫೀಲ್ಡ್ ಆ್ಯಕ್ಟಿವಿಟಿಯಿಂದ ಕ್ರಿಕೆಟರ್ಸ್ ಸುದ್ದಿಯಲ್ಲಿದ್ದಾರೆ. 3 ತಿಂಗಳು ಕಲರ್ಫುಲ್ ಜಾತ್ರೆಯದ್ದೇ ಅಬ್ಬರ ಬಿಡಿ.
