ಇಂದು ಅಪ್ಪು ಸಿನಿಮಾ ರೀ ರಿಲೀಸ್.. ಪುನೀತ್ ರಾಜ್‍ಕುಮಾರ್ ಫ್ಯಾನ್ಸ್ ಸಂಭ್ರಮ..ಚಿತ್ರಮಂದಿರಗಳಲ್ಲಿ ಫಸ್ಟ್ ಶೋ ಟಿಕೆಟ್ ಸೋಲ್ಡ್ ಔಟ್
1 min read
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನಾಯಕ ನಟನಾಗಿ ಅಭಿನಯ ಮಾಡಿರುವ ಮೊಟ್ಟ ಮೊದಲ ಸಿನಿಮಾ ಅಪ್ಪು, ಇಂದು ರಾಜ್ಯಾದ್ಯಂತ ಮರು ಬಿಡುಗಡೆ ಆಗುತ್ತಿದೆ. ಈ ಸಂದರ್ಭದಲ್ಲಿ ಅವರ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದ್ದು ಜೊತೆಗೆ ಚಿತ್ರಮಂದಿರಗಳಲ್ಲಿ ಫಸ್ಟ್ ಶೋ ಟಿಕೆಟ್ ಸೋಲ್ಡ್ ಔಟ್ ಆಗಿವೆ. ಮಾರ್ಚ್ 17 ರಂದು ಪುನೀತ್ ರಾಜ್‍ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬ ಇರುವುದರಿಂದ ಮೂರು ದಿನ ಮೊದಲೇ ಅವರ ಸಿನಿಮಾವನ್ನ ರೀ ರಿಲೀಸ್ ಆಗುತ್ತಿದೆ. 23 ವರ್ಷಗಳ ನಂತರ ಪುರಿ ಜಗನ್ನಾಥ್ ನಿರ್ದೇಶನದ ಈ ಸಿನಿಮಾ ಮತ್ತೆ ತೆರೆ ಮೇಲೆ ಬರುತ್ತಿದೆ. ಪುನೀತ್ ರಾಜ್‍ಕುಮಾರ್ ಸಿನಿಮಾ ಥಿಯೇಟರ್ನಲ್ಲಿ ನೋಡುವ ಅವಕಾಶ ಮತ್ತೆ ಸಿಗುವುದು ಯಾವಾಗ, ಏನೋ ಎಂದು ಅಭಿಮಾನಿಗಳು, ಜನ ಈಗಾಗಲೇ ಟಿಕೆಟ್ ಖರೀದಿಸಿ ಸಿನಿಮಾ ನೋಡಲು ಅಭಿಮಾನಿಗಳು ಕಾತುರದಲ್ಲಿದ್ದಾರೆ.
ಇನ್ನು ಅಪ್ಪು ಸಿನಿಮಾ ೨೬ ಏಪ್ರಿಲ್ ೨೦೦೨ ರಂದು ತೆರೆಗೆ ಅಪ್ಪಳಿಸಿತ್ತು. ಸಿನಿಮಾವೂ ಲವ್ಟ್ರ್ಯಾಕ್, ಫ್ಯಾಮಿಲಿ, ಫ್ರೆಂಡ್ಸ್, ಕಾಲೇಜು, ಕಾಮಿಡಿ ಎಲ್ಲವನ್ನು ಒಳಗೊಂಡಿದ್ದರಿಂದ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಶತದಿನೋತ್ಸವ ಪೂರೈಸಿತ್ತು. ಕಿರಿಯ ಮಗನ ಸಿನಿಮಾ ಸಕ್ಸಸ್ ಕಂಡಿದ್ದಕ್ಕೆ ರಾಜ್‍ಕುಮಾರ್ ಅವರು ತುಂಬಾ ಸಂತಸ ಪಟ್ಟು ಶತದಿನೋತ್ಸವ ಸಂಭ್ರಮಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಆಹ್ವಾನಿಸಿದ್ದರು. ಅಪ್ಪು ಒಟ್ಟು ೨೦೦ ದಿನಗಳ ಕಾಲ ಯಶಸ್ವಿ ಅಂದು ಪ್ರದರ್ಶನ ಕಂಡಿತ್ತು.
ಬೆಂಗಳೂರು ಮಾತ್ರ ಅಲ್ಲ ರಾಜ್ಯಾದ್ಯಂತ ಇರುವ 100ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಅಪ್ಪು ಸಿನಿಮಾ ಇಂದು ಮರು ಬಿಡುಗಡೆ ಆಗುತ್ತಿದೆ. ಕಳೆದ ವರ್ಷ ಜಾಕಿ ಸಿನಿಮಾವನ್ನು ರೀ ರಿಲೀಸ್ ಮಾಡಲಾಗಿತ್ತು. ಇದಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದ್ದರಿಂದ ದಾಖಲೆ ಮಟ್ಟದಲ್ಲಿ ಹಣ ಸಂಗ್ರಹ ಮಾಡಿತ್ತು. ಇದೀಗ ಅಪ್ಪು ಸಿನಿಮಾವನ್ನು ಇಂದು ರೀ ರಿಲೀಸ್ ಮಾಡಲಾಗುತ್ತಿದೆ. ಎಲ್ಲೆಡೆ ಅಪ್ಪು ಚಿತ್ರದ ರಿಲೀಸ್ ಅಬ್ಬರ ಜೋರಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾದ ಫೋಟೋಗಳು ವೈರಲ್ ಆಗಿವೆ.
