[t4b-ticker]

ಹೋಳಿ ಹುಣ್ಣಿಮೆಯ ದಿನದಂದೇ ಪೂರ್ಣ ಚಂದ್ರ ಗ್ರಹಣ..!

1 min read
Share it

 

ದೇಶದಲ್ಲಿ ಇಂದು ಹೋಳಿ ಹಬ್ಬದ ಸಂಭ್ರಮಾಚರಣೆ ಬಣ್ಣದ ಹಬ್ಬ ಸಡಗರದಲ್ಲಿರುವ ಜನರಿಗೆ ಗ್ರಹಣದ ಆತಂಕ ಕೂಡ ಕಾಡಿದೆ. ಹೌದು ಇವತ್ತು ವರ್ಷದ ಮೊದಲ ಸಂಪೂರ್ಣ ಚಂದ್ರ ಗ್ರಹಣ ಸಂಭವಿಸಲಿದೆ. ಇದು ಭಾರತದ ಯಾವುದೇ ಸ್ಥಳದಲ್ಲೂ ಗೋಚರಿಸುವುದಿಲ್ಲ, ವಿದೇಶದಲ್ಲಿ ನೋಡಬಹುದಾಗಿದೆ. ಭಾರತದಲ್ಲಿ ಗೋಚರಿಸದ ಹಿನ್ನೆಲೆಯಲ್ಲಿ ದೇಶದಲ್ಲಿ ಮುಕ್ತವಾಗಿ ಹೋಳಿ ಹಬ್ಬದಲ್ಲಿ ಮಿಂದೇಳಬಹುದಾಗಿದೆ. 2022ರ ಬಳಿಕ ಮತ್ತೊಮ್ಮೆ ರಕ್ತಗೆಂಪು ಬಣ್ಣದಲ್ಲಿ ಚಂದಿರ ಕಾಣಿಸಲಿದ್ದಾರೆ. ಬೆಳಗಿನ ವೇಳೆ ಸಂಭವಿಸೋದ್ರಿಂದ ಭಾರತದಲ್ಲಿ ಗೋಚರವಿಲ್ಲ. ಇನ್ನು, ಚಂದ್ರ ಗ್ರಹಣವು ಧಾರ್ಮಿಕ, ಜ್ಯೋತಿಷ್ಯ ಮತ್ತು ವೈಜ್ಞಾನಿಕ ದೃಷ್ಟಿಯಿಂದ ಮಹತ್ವವಾಗಿದೆ.

 

ಧಾರ್ಮಿಕ ದೃಷ್ಟಿ ಕೋನದಲ್ಲಿ ರಾಹು ಮತ್ತು ಕೇತು ಚಂದ್ರ ಗ್ರಹಣಕ್ಕೆ ಕಾರಣ ಎಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದಲ್ಲಿ ಕೇತುವಿನ ಕಾರಣದಿಂದ ಸಂಭವಿಸಲಿದೆ ಎಂದು ಹೇಳಲಾಗುತ್ತದೆ. ರಾಹು ಮತ್ತು ಕೇತುಗಳು ಹಾವುಗಳಂತೆ ಛಾಯ ಗ್ರಹಗಳೆಂದು ಪರಿಗಣಿಸಲಾಗುತ್ತದೆ. ಅವುಗಳ ಕಡಿತವು ಗ್ರಹಣಕ್ಕೆ ಕಾರಣವಾಗುತ್ತದೆ. ಅದೇ ಸಮಯದಲ್ಲಿ ರಾಹು ಮತ್ತು ಕೇತು ಚಂದ್ರನನ್ನು ನುಂಗಲು ಪ್ರಯತ್ನಿಸಿದಾಗ ಚಂದ್ರಗ್ರಹಣ ಸಂಭವಿಸುತ್ತದೆ ಎಂದು ಕೆಲವರು ನಂಬುತ್ತಾರೆ. ವೈಜ್ಞಾನಿಕ ದೃಷ್ಟಿಕೋನ, ಚಂದ್ರ ಭೂಮಿ ಮತ್ತು ಸೂರ್ಯ.. ಒಂದೇ ಸರಳ ರೇಖೆಯಲ್ಲಿ ಬಂದಾಗ ಈ ಸಮಯದಲ್ಲಿ ಸೂರ್ಯನ ಬೆಳಕು ಭೂಮಿಯ ಮೇಲೆ ಬೀಳುತ್ತದೆ. ಆದರೆ ಚಂದ್ರನ ಮೇಲೆ ಬೀಳುವುದಿಲ್ಲ. ಈ ವಿದ್ಯಮಾನವನ್ನು ಚಂದ್ರ ಗ್ರಹಣ ಎಂದು ಕರೆಯಲಾಗುತ್ತದೆ. ಮಾರ್ಚ್ ೧೪, ಫಾಲ್ಗುಣ ಕೃಷ್ಣ ಪಕ್ಷ ಪೂರ್ಣಿಮೆ ಶುಕ್ರವಾರ. ಹೋಳಿ ದಿನ. ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ ೧೦:೩೦ ರಿಂದ ಮಧ್ಯಾಹ್ನ ೨:೧೮ ರವರೆಗೆ ವಿದೇಶಗಳಲ್ಲಿ ಸಂಪೂರ್ಣ ಚಂದ್ರಗ್ರಹಣ ಸಂಭವಿಸಲಿದೆ. ಅಪರೂಪದ ನೆರಳು ಬೆಳಗ್ಗೆ ೦೯:೨7 ಕ್ಕೆ ಬೀದಿದೆ. ಬೆಳಗ್ಗೆ ೧೦:೪೦  ಕ್ಕೆ ಗ್ರಹಣ ಸ್ಪರ್ಶಿಸಲಿದೆ. ಗ್ರಹಣದ ಮಧ್ಯಭಾಗವು ೧೨:೨೯. ಮಧ್ಯಾಹ್ನ ೨:೩೦ಕ್ಕೆ ಮುಗಿಯಲಿದೆ.

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?