ಆನೇಕಲ್ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಗಳನ್ನ ಕರೆಸಿ ಸರ್ಜಾಪುರ ಇನ್ಸಪೆಕ್ಟರ್ ನವೀನ್ ಕುಮಾರ್ ನೇತೃತ್ವದಲ್ಲಿ ಖಡಕ್ ಎಚ್ಚರಿಕೆಯನ್ನು ನೀಡುವ ಮುಖಾಂತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಕಡಿವಾಣ ಹಾಕುವ ಪ್ರಯತ್ನ ಮಾಡಿದರು.
1 min read

ಆನೇಕಲ್ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಗಳನ್ನ ಕರೆಸಿ ಸರ್ಜಾಪುರ ಇನ್ಸಪೆಕ್ಟರ್ ನವೀನ್ ಕುಮಾರ್ ನೇತೃತ್ವದಲ್ಲಿ ಖಡಕ್ ಎಚ್ಚರಿಕೆಯನ್ನು ನೀಡುವ ಮುಖಾಂತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಕಡಿವಾಣ ಹಾಕುವ ಪ್ರಯತ್ನ ಮಾಡಿದರು.
ಇತ್ತೀಚೆಗೆ ಸರ್ಜಾಪುರ ಭಾಗದಲ್ಲಿ ಕೊಲೆ ಸುಲಿಗೆ ದರೋಡೆಗಳಂತಹ ಕೃತ್ಯಗಳು ಬೆಳಕಿಗೆ ಬರುತ್ತಿದ್ದು ಸಾರ್ವಜನಿಕರಲ್ಲಿ ಪೊಲೀಸ್ ಇರುವಿಕೆಯ ಬಗ್ಗೆ ಅನುಮಾನ ಮೂಡಿದ್ದ ಬೆನ್ನಲ್ಲೇ ಈ ರೌಡಿ ಪೆರೇಡ್ ನಡೆದಿದೆ.
ಇನ್ನೂ ಬಹು ಮಖ್ಯ ರೌಡಿ ಆಸಾಮಿಗಳನ್ನ ಕರೆಸುವಲ್ಲಿ ಸರ್ಜಾಪುರ ಪೊಲೀಸರು ಯಶಸ್ವಿಯಾಗದಿರುವುದು ಅಲ್ಲದೆ ರೌಡಿ ಚಟುವಟಿಕೆಗಳಲ್ಲಿ ಹಿಂಬದಿ ಕೈವಾಡವಿರುವವರನ್ನು ಕರೆಸದಿರುವುದು ಈ ರೌಡಿ ಪೆರೇಡ್ ನೆಪಕ್ಕೆ ಎನ್ನುವ ಮಾತು ಗಾಢವಾಗಿ ಕೇಳಿಬರುತ್ತಿದೆ. ಕರೆಸಿದವರಲ್ಲಿ ಕರೆದಾಗ ಬರುವ ಆಸಾಮಿಗಳನ್ನೇ ಪದೇ ಪದೇ ಕರೆತಂದು ಎಚ್ಚರಿಕೆ ನೀಡುತ್ತಿರುವುದು ಬಲಿತ ರೌಡಿಗಳನ್ನು ಕರೆಸದಿರುವುದು ನಾಗರೀಕರಲ್ಲಿನ ಹತ್ತು ಹಲವು ಅನುಮಾನಗಳಿಗೆ ಮಣೆ ಹಾಕಿದೆ.
![]()