ದಾಸನಪುರ ದಲಿತ ಸುರೇಶನ ಸಾವಿನ ತನಿಖೆ ಸಿಒಡಿಗೆ ಒಪ್ಪಿಸುವ ಭರವಸೆ ನೀಡಿದ ಶಾಸಕ ಬಿ ಶಿವಣ್ಣ
1 min read
https://youtu.be/1CAfNU9HgSw?si=IpS-8Htg6UBFT17x
ದಾಸನಪುರ ದಲಿತ ಸುರೇಶ್ ಸಾವು ಪ್ರಕರಣ ಸಿಒಡಿಗೆ ಒಪ್ಪಿಸುವ ಭರವಸೆ ನೀಡಿದ ಶಾಸಕ ಬಿ ಶಿವಣ್ಣ.
ಬೆಂ,ಆನೇಕಲ್,ಮಾ,13: 2021ರಲ್ಲಿ ತಾಲೂಕಿನ ಗಡಿ ದಾಸನಪುರದಲ್ಲಿ ದಲಿತ ಸುರೇಶ್ ಸಾವಿನ ಕುರಿತು ಪೊಲೀಸ್ ಇಲಾಖೆ ನಿಷ್ಪಕ್ಷಪಾತ ತನಿಖೆಯ ಮೇಲೆ ಶಂಕೆ ವ್ಯಕ್ತಪಡಿಸಿದ ದಲಿತ ಸಂಘಟನೆಗಳ ಒಕ್ಕೂಟ ಕಳೆದ ಎರೆಡು ದಿನದಿಂದ ದರಣಿ ಕುಳಿತಿದ್ದು ಇಂದು ಮದ್ಯಾಹ್ನ ಶಾಸಕ ಬಿ ಶಿವಣ್ಣ, ಹಾಗು ಬೆಂ ಗ್ರಾ ಎಎಸ್ಪಿ ನಾಗರಾಜ್ ಭೇಟಿ ಭರವಸೆಯೊಂದಿಗೆ ಪ್ರತಿಭಟನೆ ಅಂತ್ಯಗೊಂಡಿತು.
ಒಕ್ಕೂಟದ ನೇತೃತ್ವವಹಿಸಿದ ವೆಂಕಟೇಶ್ ಮೂರ್ತಿ, ಸುರೇಶ್ ಪೋತ ಮನವಿ ಓದುವುದರ ಮೂಲಕ ಪ್ರಮುಖ ಬೇಡಿಕೆಯಾದ ಸುರೇಶ್ ಸಾವಿನ ತನಿಖೆ ಸಿಒಡಿಗೆ ವಹಿಸಬೇಕು, ಆಗಿನ ಅತ್ತಿಬೆಲೆ ಪಿಐ ಕೆ ವಿಶ್ವನಾಥ್ ಹಾಗು ಸುರೇಶನ ಪ್ರೇಯಸಿ ರಮ್ಯರನ್ನ ಮಂಪರು ಪರೀಕ್ಷೆಗೆ ಒಳಪಡಿಸಿ ಸತ್ಯ ಹೊರಬರಬೇಕು, ಈಗಿನ ಆನೇಕಲ್ ಇನ್ಸಪೆಕ್ಟರ್ ಬಿಎಂ ತಿಪ್ಪೇಸ್ವಾಮಿ ಹಾಗು ಡಿವೈಎಸ್ಪಿ ಮೋಹನ್ ರನ್ನು ದೋಷಾರೋಪ ಪಟ್ಟಿ ಸಲ್ಲಿಕೆ ವಿಳಂಭದ ಹೊಣೆಗಾರರನ್ನಾಗಿಸುವುದಲ್ಲದೆ. ಅಪಘಾತದಲ್ಲಿ ಭಾಗಿಯಾಗದ ಕ್ಯಾಂಟರ್ ಚಾಲಕನನ್ನು ಹೆದರಿಸಿದ ತಿಪ್ಪೇಸ್ವಾಮಿಯನ್ನು ವರ್ಗಾವಣೆ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಇಡೀ ಪ್ರಕರಣ ದಿಕ್ಕು ತಪ್ಪಿಸಿದ ಪೊಲೀಸ್ ಇಲಾಖೆಯ ಮೇಲೆ ನಂಬಿಕೆಯಿಲ್ಲ, ಬದಲಾಗಿ ಇವರನ್ನೆಲ್ಲ ತನಿಖೆ ಮಾಡಿ ಆತುರಾತುರವಾಗಿ ಸುರೇಶ್ ಸಾವಿನ ಕುರಿತ ಪ್ರಕರಣವನ್ನು ಮುಚ್ಚಿಹಾಕಿ ತನಿಖೆ ದಿಕ್ಕು ತಪ್ಪಿಸಿದ ಪೊಲೀಸರನ್ನು ಅಮಾನತ್ತು ಮಾಡಬೇಕೆಂದು ಒತ್ತಾಯಿಸಿದರು.
ಕೂಡಲೇ ಎಎಸ್ಪಿ ನಾಗರಾಜ್ ಪ್ರಕರಣ ಕಡತವನ್ನು ಮುಂದಿನ ಮಂಗಳವಾರದೊಳಗೆ ಶಾಸಕರಿಗೆ ನೀಡಿದರೆ ಈ ಕುರಿತಂತೆ ಗೃಹಸಚಿವರಿಗೆ ಹಾಗು ಸರ್ಕಾರದ ಮುಂದೆ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸಿಒಡಿಗೆ ಪ್ರಕರಣ ಒಪ್ಪಿಸುವ ಭರವಸೆಯನ್ನು ಶಾಸಕ ಬಿ ಶಿವಣ್ಣ ತಿಳಿಸಿದರು.
ಇದರೊಂದಿಗೆ ಹಣ್ಣಿನ ರಸ ಕುಡಿಸುವುದರೊಂದಿಗೆ ಶಾಸಕರು ದರಣಿಗೆ ತೆರೆ ಎಳೆದರು.
ಮೃತನ ಕುಟುಂಬದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು ಅವರಲ್ಲಿ ಒಬ್ಬರಿಗೆ ಉದ್ಯೋಗವೊಂದನ್ನು ನೀಡಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಆನೇಕಲ್ ಇನ್ಸಪೆಕ್ಟರ್ ತಿಪ್ಪೇಸ್ವಾಮಿ ವಿರುದ್ದ ಹಣದ ಬೇಡಿಕೆಯ ಕುರಿತು ವೆಂಕಟೇಶ್ ಮೂರ್ತಿ ಆರೋಪಿಸಿದರು. ಜೊತೆಗೆ ಓರ್ವ ಪುರಸಭೆ ಸದಸ್ಯ ಗಂಡ ಹೆಂಡತಿ ನ್ಯಾಯದ ವಿಚಾರದಲ್ಲಿ 50,000 ಪೊಲೀಸರ ಹೆಸರಿನಲ್ಲಿ ಪಡೆದಿರುವುದು ಎಎಸ್ಪಿ – ಶಾಸಕರ ಸಮ್ಮುಖದಲ್ಲಿ ಪ್ರಸ್ತಾಪವಾಗುತ್ತಿದ್ದಂತೆ ಶಾಸಕ- ಎಎಸ್ಪಿ ವಿಚಾರವನ್ನು ತಡೆದು ಸಿಒಡಿ ತನಿಖೆ ಕೈಗೊಳ್ಳುವ ಕುರಿತಷ್ಟೇ ಪ್ರಸ್ತಾಪಿಸಿ ಮುಂದೆ ಸಾಗಿದರು.
ಧರಣಿಯಲ್ಲಿ ಸಿ ರಾವಣ, ಸುರೇಶ್ ಪೋತ, ವೆಂಕಟೇಶ್ ಮೂರ್ತಿ, ಇಂಡ್ಲವಾಡಿ ಬಸವರಾಜ್, ವೆಂಕಟೇಶ್, ಹಾರಗದ್ದೆ ರುದ್ರ, ಮರಸೂರು ರಮೇಶ್, ಪಾಪಮ್ಮ, ವಕೀಲ ಆನಂದ್ ಚಕ್ರವರ್ತಿ, ನಂದಕುಮಾರ್, ಬಿದರಗೆರೆ ತಿಮ್ಮರಾಜು, ಮುನಿರತ್ನ, ತಾಯಿ ತಿಮ್ಮಕ್ಕ ಕುಟುಂಬಸ್ಥರು ಭಾಗವಹಿಸಿದ್ದರು.
