ಮಹಿಳೆಯರೇ ಎಚ್ಚರ ಎಚ್ಚರ… ಮಲ್ಲಿಗೆ ಮುಡಿಯೋ ಪ್ರತಿ ಹೆಣ್ಣು ಮಕ್ಕಳು ಓದಲೇಬೇಕಾದ ಸ್ಟೋರಿ
1 min read
https://youtu.be/cpGWtOrouxk?si=MP2s7-EmmfkmIfHl
ಮಲ್ಲಿಗೆ ಹೂ ಅಂದರೆ ಹೆಣ್ಣು ಮಕ್ಕಳಿಗೆ ಪಂಚಪ್ರಾಣ. ಯಾವುದೇ ಕಾರ್ಯಕ್ರಮಕ್ಕೆ ಹೋದರು ಮಹಿಳೆಯರು ಹೂವನ್ನು ಮುಡಿದುಕೊಳ್ಳುತ್ತಾರೆ. ಆದ್ರೆ ಇದೀಗ ಮಲ್ಲಿಗೆ ಹೂ ಬಾಡದಿರಲಿ ಅಂತ ಬಳಸುವ ಕೆಲವರು ಕೆಮಿಕಲ್ ಬಳಕೆ ಮಾಡುತ್ತಿದ್ದಾರೆ. ಕಲ್ಲಂಗಡಿಯಲ್ಲಿ ಕೃತ ಬಣ್ಣ ಬಳಕೆ. ಪ್ಲಾಸ್ಟಿಕ್ನಲ್ಲಿ ಬೇಯಿಸಿದ ಇಡ್ಲಿ ತಿಂದ್ರೆ ಕ್ಯಾನ್ಸರ್ ಬರುತ್ತೆ. ಇನ್ನು ಕೃತಕ ಬಣ್ಣ ಬಳಕೆಯ ಬಟಾಣಿ ತಿಂದ್ರಂತೂ ಮುಗಿದೇ ಹೋಯ್ತು. ಹೀಗೆ ನಾವು ತಿನ್ನುವ ಒಂದೊಂದು ಆಹಾರದಿಂದಲೂ ಆರೋಗ್ಯಕ್ಕೆ ಹಾನಿಯಾಗುತ್ತೆ ಅಂತ ಈಗಾಗಲೇ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಇದೀಗ ಹೆಣ್ಣು ಮಕ್ಕಳ ಅತಿ ಪ್ರಿಯವಾದ ಮಲ್ಲಿಗೆ ಹೂವಿನ ಮೇಲೂ ಈ ಕೃತಕ ಬಣ್ಣ ಬಳಕೆಯ ಕರಾಳತೆ ಬಯಲಾಗಿದೆ. ಹೂ ಬಾಡದಿರಲಿ ಅಂತ ಬಳಸುವ ಈ ಕೃತಕ ಬಣ್ಣ, ನಮ್ಮ ಆರೋಗ್ಯದ ಮೇಲೆ ದಷ್ಪರಿಣಾಮ ಬೀರೋದ್ರಲ್ಲಿ ನೋ ಡೌಟ್. ಹೂ ಬಾಡದಿರಲಿ ಅಂತ ಕೆಮಿಕಲ್ ಬಳಕೆ ಮಾಡಲಾಗುತ್ತಿದೆ.
ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತೆ, ಕೃತಕ ಬಣ್ಣದಿಂದ ದೇಹದಲ್ಲಿ ಅಲರ್ಜಿ ಉಂಟಾಗುತ್ತೆ. ಕೂದಲು ಕೂಡ ಉದುರೋ ಸಾಧ್ಯತೆ ಹೆಚ್ಚಾಗಿದೆ. ಈ ಮಲ್ಲಿಗೆ ಬಳಸಿದ್ರೆ ತಲೆ ನೋವು ಕಾಣಿಸಿಕೊಳ್ಳುತ್ತದೆ. ಕೃತಕ ವಾಸನೆಗೆ ಉಸಿರಾಟದ ತೊಂದರೆ ಉಂಟಾಗುತ್ತೆ. ಸಾಮಾನ್ಯವಾಗಿ ಮಲ್ಲಿಗೆ ಹೂವು ಗಿಡದಿಂದ ಕಿತ್ತ ಬಳಿಕ 24 ಗಂಟೆ ಹಾಳಾಗಲ್ಲ. 24 ಗಂಟೆ ಬಳಿಕ ಮಲ್ಲಿಗೆ ಹೂ ಬಾಡಿ, ದಳಗಳು ಉದುರುತ್ತೆ. ಆದ್ರೆ ವ್ಯಾಪಾರಿಗಳಿಗೆ ಕೇವಲ 24 ಗಂಟೆಯಲ್ಲಿ ಮಲ್ಲಿಗೆ ಹೂ ಮಾರಾಟವಾಗೋದಿಲ್ಲ. ಹೀಗಾಗಿ ಕೆಲ ಸಂದರ್ಭದಲ್ಲಿ ಮಲ್ಲಿಗೆಯನ್ನ ಎರಡ್ಮೂರು ದಿನ ಇಡಬೇಕಾಗುತ್ತದೆ. ಹಾಗೇ ಮಲ್ಲಿಗೆ ಹೂವನ್ನ ಇಟ್ಟರೆ ಹೂವು ಬಾಡಿ ಹೋಗುತ್ತದೆ. ಇದರಿಂದ ಮಲ್ಲಿಗೆ ಹೂವು ವ್ಯಾಪಾರಿಗಳಿಗೆ ನಷ್ಟ ಉಂಟಾಗುತ್ತದೆ. ಮಲ್ಲಿಗೆ ಹೂವು ದುಬಾರಿ ಆಗಿರುವುದರಿಂದ ನಷ್ಟದ ಪ್ರಮಾಣ ಜಾಸ್ತಿಯಾಗಿದೆ. ಇದೇ ಕಾರಣಕ್ಕೆ ಕೆಲ ವ್ಯಾಪಾರಿಗಳು ಮಲ್ಲಿಗೆಗೆ ಕೆಮಿಕಲ್ ಬಳಕೆ ಮಾಡುತ್ತಿದ್ದಾರೆ. ಈ ಕೆಮಿಕಲ್ ಬಳಕೆಯಿಂದ ಮಲ್ಲಿಗೆ ಹೆಚ್ಚುಕಾಲ ಬಾಡದೇ ಇರುತ್ತೆ. ಎರಡು ದಿನಕ್ಕಿಂತ ಹೆಚ್ಚು ಕಾಲ ಹೂ ಇಟ್ಕೊಂಡು ಮಾರಬಹುದು. ಇದೇ ಕಾರಣಕ್ಕೆ ಮಲ್ಲಿಗೆ ಹೂವಿಗೆ ಕೆಮಿಕಲ್ ಹಾಕಿ ವ್ಯಾಪಾರ ಮಾಡಲಾಗುತ್ತಿದೆ.
