[t4b-ticker]

ಯೂಟ್ಯೂಬ್‌ ನೋಡಿ ಚಿನ್ನ ಬಚ್ಚಿಡೋದು ಕಲಿತೆ, ಬೆಂಗಳೂರಿಗೆ ತಂದು ಆಟೋದಲ್ಲಿಡಲು ಸೂಚನೆ – ರನ್ಯಾ

1 min read
Share it

ಗೋಲ್ಡ್​ ಸ್ಮಗ್ಲಿಂಗ್ ಪ್ರಕರಣದಲ್ಲಿ ಸ್ಯಾಂಡಲ್​ವುಡ್​ ನಟಿ ರನ್ಯಾ ರಾವ್ ಬಂಧನಕ್ಕೆ ಒಳಗಾಗಿದ್ದುಮ, DRI  ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಕೆಲವು ಮಾಹಿತಿಗಳನ್ನು ರನ್ಯಾ ರಾವ್ ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ. DRI  ಅಧಿಕಾರಿಗಳು ತಾವು ನಡೆಸಿದ್ದ ತನಿಖೆಯಲ್ಲಿ ಬಹಿರಂಗ ಆಗಿರುವ ವಿಚಾರಗಳ ಬಗ್ಗೆ ವರದಿ ಸಿದ್ಧಪಡಿಸಿದ್ದಾರೆ. ಅದರಲ್ಲಿ ರನ್ಯಾ ರಾವ್, ಚಿನ್ನ ಕಳ್ಳ ಸಾಗಾಟದ ವೇಳೆ ಅಧಿಕಾರಿಗಳ ಕಣ್ತಪ್ಪಿಸಿಕೊಳ್ಳಲು ಹೇಗೆ ಎಸ್ಕೇಪ್ ಆಗಬೇಕು. ಚಿನ್ನವನ್ನು ಹೇಗೆ ಬಚ್ಚಿಡಬೇಕು ಅನ್ನೋದ್ರ ಬಗ್ಗೆ ಯೂಟ್ಯೂಬ್​ನಲ್ಲಿ ತಿಳಿದುಕೊಂಡಿದ್ದರು ಅಂತಾ ಉಲ್ಲೇಖಿಸಿದ್ದಾರೆ. ತನಿಖೆಯಲ್ಲಿ ಗೊತ್ತಾಗಿರುವಂತೆ ರನ್ಯಾ, ದುಬೈ ಏರ್​ಪೋರ್ಟ್​ನಲ್ಲಿ ತಿಳಿದುಕೊಂಡಿದ್ದಳಂತೆ. ಏರ್​ಪೋರ್ಟ್​ ವಾಶ್​ ರೂಂನಲ್ಲಿ ಕುಳಿತು ಸ್ಕೆಚ್ ಹಾಕುತ್ತಿದ್ದಳು. ​ವಾಶ್​ ರೂಂಗೆ ಹೋದಾಗ ಮೊಬೈಲ್​ನಿಂದ ಯೂಟ್ಯೂಬ್ ಆನ್ ಮಾಡಿ, ಚಿನ್ನವನ್ನ ಮರೆಮಾಚಲು ಪ್ಲಾನ್ ಮಾಡಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

 

ಮಾರ್ಚ್​ 1 ರಂದು ನನಗೆ ವಿದೇಶಿ ನಂಬರ್​ನಿಂದ ಫೋನ್ ಬಂದಿತ್ತು. ಕರೆ ಮಾಡಿದ ಅವರು ದುಬೈ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದ ಗೇಟ್​-ಎ ನಲ್ಲಿರುವ ಟರ್ಮಿನಲ್ 3ಕ್ಕೆ ಹೋಗಲು ಸೂಚಿಸಿದ್ದರು. ವಿಮಾನ ನಿಲ್ದಾಣದಲ್ಲಿರುವ ಗೋಲ್ಡ್ ಸಂಗ್ರಹಿಸಿ ಬೆಂಗಳೂರಿಗೆ ತಲುಪಿಸು ಎಂದಿದ್ದರು. ಅದೇ ಮೊದಲ ಬಾರಿಗೆ ಸ್ಮಗ್ಲಿಂಗ್ ಮೂಲಕ ದುಬೈನಿಂದ ಬೆಂಗಳೂರಿಗೆ ಚಿನ್ನ ತಂದಿದ್ದು. ಇದಕ್ಕೂ ಮೊದಲು ದುಬೈನಲ್ಲಿ ಯಾವತ್ತೂ ಚಿನ್ನ ಖರಿದಿಸಿಯೂ ಇಲ್ಲ, ತಂದೂ ಇಲ್ಲ. ಗೋಲ್ಡ್​ ಎರಡು ಪ್ಲಾಸ್ಟಿಕ್ ಕವರ್​​ನಲ್ಲಿ ಇತ್ತು. ದುಬೈನ ವಿಮಾನ ನಿಲ್ದಾಣದಲ್ಲಿರುವ ರೆಸ್ಟ್​ ರೂಮ್​ನಲ್ಲಿ ನಾನು ಚಿನ್ನವನ್ನು ಮೈಗೆ ಅಂಟಿಸಿಕೊಂಡೆ. ನಾನು ಧರಿಸಿದ್ದ ಜೀನ್ಸ್​ ಮತ್ತು ಶೂಗೆ ಚಿನ್ನವನ್ನು ಅಂಟಿಸಿಕೊಂಡೆ. ನಾನು ಯೂಟ್ಯೂಬ್ ಮೂಲಕ ತಿಳಿದು ಚಿನ್ನವನ್ನು ಮರೆಮಾಚಿದೆ. ಅಂದು ಯಾರು ಕರೆ ಮಾಡಿದ್ದರು ಅನ್ನೋದು ಖಾತ್ರಿ ಇಲ್ಲ. ಅವರು ಆಫ್ರಿಕನ್-ಅಮೆರಿಕನ್ ಶೈಲಿಯಲ್ಲಿ ಮಾತನಾಡುತ್ತಿದ್ದರು. ದುಬೈ ವಿಮಾನ ನಿಲ್ದಾಣದಲ್ಲಿ ಭದ್ರತೆ ಪರಿಶೀಲಿಸಿದ ಬಳಿಕ ನನಗೆ ಚಿನ್ನವನ್ನು ಕೊಡಲಾಗಿದೆ. ಈ ಮೊದಲು ಆ ವ್ಯಕ್ತಿಯನ್ನು ಯಾವತ್ತೂ ಭೇಟಿ ಆಗಿರಲಿಲ್ಲ. ನೋಡಿಯೂ ಇರಲಿಲ್ಲ. ಸುಮಾರು 6 ಅಡಿ ಎತ್ತರ ಮತ್ತು ಬಿಳಿ ಚರ್ಮದವನಾಗಿದ್ದ.

 

ನಾನು ಯಾರಿಗೆ ಚಿನ್ನವನ್ನು ಕೊಡಬೇಕು ಎಂದು ಕೇಳಿದ್ದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಟೋಲ್ ಗೇಟ್ ತಲುಪಿದ ಮೇಲೆ ಸರ್ವಿಸ್ ರಸ್ತೆಗೆ ಹೋಗಲು ಹೇಳಿದ್ದರು. ಮುಂದೆ ಬರುವ ಸಿಗ್ನಲ್ ಬಳಿ ಆಟೋರಿಕ್ಷಾದಲ್ಲಿ ಚಿನ್ನ ಇಡಬೇಕು ಎಂದು ಹೇಳಿದ್ದರು. ನನಗೆ ಆಟೋರಿಕ್ಷಾದ ಸಂಖ್ಯೆ ನೀಡಿಲ್ಲ. ಒಬ್ಬ ಅಪರಿಚಿತ ವ್ಯಕ್ತಿಯಿಂದ ಮತ್ತೊಬ್ಬ ಅಪರಿಚಿತ ವ್ಯಕ್ತಿಗೆ ಚಿನ್ನ ನೀಡುವಂತೆ ಸೂಚಿಸಿದ್ದರು ಎಂದು ತನಿಖಾ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ರನ್ಯಾ ರಾವ್ ಕರ್ನಾಟಕದ ಡಿಜಿಪಿ ಕೆ.ರಾಮಚಂದ್ರ ರಾವ್ ಅವರ ಸಾಕು ಮಗಳು. ದುಬೈನಿಂದ ೧೪.೨ ಕೆಜಿ ಬಂಗಾರವನ್ನು ಅಕ್ರಮವಾಗಿ ತೆಗೆದುಕೊಂಡು ಬರುತ್ತಿದ್ದಾಗ ಬೆಂಗಳೂರಿನ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಸದ್ಯ ಈ ಕುರಿತ ತನಿಖೆ ಮುಂದುವರಿದಿದೆ.

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?