ಗಗನಯಾತ್ರಿ ಸುನಿತಾ ವಿಲಿಯಮ್ಸ್ ಭೂಮಿಗೆ ಬರೋದು ಮತ್ತೆ ವಿಳಂಬ! ಕೊನೆ ಸೆಕೆಂಡ್ನಲ್ಲಿ ಕೈಕೊಟ್ಟ ಮಷಿನ್

ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಜೋಡಿ ಕಳೆದ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ, ಇದೀಗ ಅವರನ್ನು ಕರೆತರುವ ಕಾರ್ಯಾಚರಣೆಯನ್ನು ಮತ್ತೆ ಮುಂದೂಡಲಾಗಿದೆ ಎಂದು ನಾಸಾ ತಿಳಿಸಿದೆ. ಭೂಮಿಗೆ ಅವರನ್ನು ಸುರಕ್ಷಿತವಾಗಿ ಕರೆ ತರಲು ಮಾರ್ಚ್ 13 ರಿಂದ SpaceX ಕಾರ್ಯಾಚರಣೆ ಮಾಡಲಿದೆ ಎಂದು NASA ಘೋಷಣೆ ಮಾಡಿತ್ತು. ಈಗ ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ SpaceX ಉಡಾವಣೆ ರದ್ದುಗೊಳಿಸಲಾಗಿದೆ ಎಂದು NASA ಹೇಳಿದೆ. ಇನ್ನೇನು ಉಡಾವಣೆ ಮಾಡಲು ಕೆಲವೇ ಗಂಟೆಗಳು ಬಾಕಿ ಇರುವಾಗ NASA ಬೇಸರದ ಸುದ್ದಿ ನೀಡಿತು.
ಮಷಿನ್ನ ಹೈಡ್ರಾಲಿಕ್ ವ್ಯವಸ್ಥೆಯಲ್ಲಿ ಸಮಸ್ಯೆ ಇದೆ ಅಂತಾ ನಾಸಾ ಉಡಾವಣಾ ನಿರೂಪಕ ಡರೋಲ್ ನೆಲ್ ತಿಳಿಸಿದ್ದಾರೆ. ಆದರೆ ರಾಕೆಟ್ ಮತ್ತು ಬಾಹ್ಯಾಕಾಶ ನೌಕೆಯಲ್ಲಿ ಎಲ್ಲವೂ ಸರಿಯಾಗಿದೆ ಎಂದಿದ್ದಾರೆ. NASA-SpaceX Crew-೧೦ ಕಾರ್ಯಾಚರಣೆ ಹೊತ್ತ ಫಾಲ್ಕನ್ ೯ ರಾಕೆಟ್ ಬುಧವಾರ ಸಂಜೆ ೭:೪೮ ಕ್ಕೆ (೨೩೪೮ GMT) ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಬೇಕಿತ್ತು. ಇನ್ನು ಮುಂದಿನ ಕಾರ್ಯಾಚರಣೆ ಬಗ್ಗೆ ನಾಸಾ ಮಾಹಿತಿ ತಿಳಿಸಿಲ್ಲ.ಕೇವಲ ೮ ದಿನಗಳ ಮಿಷನ್ ಭಾಗವಾಗಿ ಜೂನ್ ೫ ರಂದು ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಬಾಹ್ಯಾಕಾಶ ಕೇಂದ್ರಕ್ಕೆ ಹೋಗಿದ್ದರು. ಆದರೆ ತಾಂತ್ರಿಕ ದೋಷದಿಂದ ಅವರು ಬರೋಬ್ಬರಿ ೯ ತಿಂಗಳ ಕಾಲ ಅಲ್ಲಿಯೇ ಸಿಲುಕಿಕೊಂಡಿದ್ದಾರೆ.
![]()