ಗುರುವಾರ- ರಾಶಿ ಭವಿಷ್ಯ ಫೆಬ್ರವರಿ-13,2025
1 min read
ಮೇಷ ರಾಶಿ
ಪ್ರಯತ್ನ ಪೂರ್ವಕವಾದ ಕೆಲಸಗಳು ಕೈಗೂಡಲಿದೆ
ಇಂದು ಕೋಪವನ್ನು ಮಾಡಿಕೊಳ್ಳಬೇಡಿ
ಬಂಧುಗಳ ಅಲ್ಪ ಸಹಕಾರದಿಂದ ಬೇಸರ ಆಗಲಿದೆ
ಇಂದು ಆಸೆಗಳು ಈಡೇರಲಿದೆ
ಹಿಂದೆ ಮಾಡಿದ ಪುಣ್ಯ ಕರ್ಮದ ಫಲ ಪ್ರಾಪ್ತಿಯಾಗಲಿದೆ
ಮಾನಸಿಕ ಒತ್ತಡವಿದ್ದರೂ ಸಮಾಧಾನವಿದೆ
ತಾಪಸಮನ್ಯು ಪ್ರಾರ್ಥನೆ ಮಾಡಬೇಕು
ವೃಷಭ ರಾಶಿ
ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದೊರೆಯಲಿದೆ
ವೃತ್ತಿಯಲ್ಲಿ ಅತಿಯಾದ ಒತ್ತಡವಿರಲಿದೆ
ದೂರದ ಪ್ರಯಾಣಕ್ಕೆ ಅಡ್ಡಿಯಾಗಬಹುದು
ಹಣ ಹೂಡಿಕೆಯಿಂದ ಲಾಭವಿಲ್ಲ ನಿರಾಸೆಯಾಗಬಹುದು
ಭೂ ದೇವಿಯನ್ನು ಪ್ರಾರ್ಥಿಸಿ
ಮಿಥುನ ರಾಶಿ
ವ್ಯವಹಾರದಲ್ಲಿ ಜಾಗ್ರತೆ ವಹಿಸಿರಿ
ನಿಮ್ಮ ವೈಯಕ್ತಿಕ ಕಾರ್ಯದಲ್ಲಿ ಯಶಸ್ಸು ಸಿಗಲಿದೆ
ದಾಂಪತ್ಯದ ನೆಮ್ಮದಿಯನ್ನು ಹಾಳು ಮಾಡುವವರು ಇರುತ್ತಾರೆ ಗಮನಿಸಿ
ಉದ್ಯೋಗದಲ್ಲಿ ಅಭದ್ರತೆ ಕಾಡಬಹುದು
ಕುಟುಂಬದ ವಾಗ್ವಾದದಿಂದ ಬೇಸರ ಆಗುತ್ತೆ
ಮೌನಕ್ಕೆ ಶರಣು ಹೋದರೆ ನಿಮ್ಮ ಕೆಲಸಗಳು ಸ್ಥಗಿತವಾಗಬಹುದು
ಗುರು ದತ್ತಾತ್ರೇಯರನ್ನು ಸ್ಮರಣೆ ಮಾಡಬೇಕು
ಕಟಕ ರಾಶಿ
ಹಣ ಕಳೆದುಕೊಳ್ಳುವ ಸಂಭವವಿದೆ
ಪ್ರೇಮಿಗಳ ಪರಿಸ್ಥಿತಿ ಚಿಂತಾ ಜನಕ ಸರಿಪಡಿಸಿಕೊಳ್ಳಿ
ಹಿರಿಯರಿಗೆ ಬೇಸರ ಮಾಡಬೇಡಿ
ಸ್ವಂತ ಉದ್ಯೋಗದಲ್ಲಿ ಏರುಪೇರಾಗುವುದರಿಂದ ಭಯ
ಯತ್ನ ಕಾರ್ಯದಲ್ಲಿ ಜಯವಿದ್ದರೂ ಸಮಾಧಾನವಿಲ್ಲ
ಅಧಿಕಾರಿಗಳ ಹಿಡಿತದಿಂದ ಕೆಲಸದ ಗುಣಮಟ್ಟ ತಗ್ಗಬಹುದು
ಮಾರುತಿಯನ್ನು ಪ್ರಾರ್ಥನೆ ಮಾಡಬೇಕು
ಸಿಂಹ ರಾಶಿ
ಧೈರ್ಯದಿಂದ ಮುನ್ನುಗ್ಗಿದರೆ ನಿಮ್ಮ ಕೆಲಸದಲ್ಲಿ ಯಶಸ್ಸು
ಸಾಲದ ವಿಚಾರದಿಂದ ದೂರವಿರಿ
ಸ್ನೇಹಿತರೊಂದಿಗೆ ಕಲಹ ಬೇಡ
ವಾಹನದಿಂದ ತೊಂದರೆಯ ಸೂಚನೆ
ಅಣ್ಣ ತಮ್ಮಂದಿರ ಸಹಕಾರದಿಂದ ಶುಭ
ಕುಟುಂಬದವರ ತಿಳುವಳಿಕೆಗೆ ಮಾನ್ಯತೆ ಕೊಡಿ
ದುರ್ಗಾ ಕವಚ ಪಠಣೆ ಮಾಡಬೇಕು
ಕನ್ಯಾ ರಾಶಿ
ಸರ್ಕಾರದಿಂದ ಆಗಬೇಕಾದ ಕೆಲಸಗಳು ಸ್ಥಗಿತವಾಗಬಹುದು
ಇಂದು ನಿಮಗೆ ತಾಳ್ಮೆ ಅಗತ್ಯವಿದೆ
ಉನ್ನತ ವ್ಯಾಸಂಗ ಮಾಡಬೇಕೆನ್ನುವವರಿಗೆ ಲಾಭ
ನಿಮ್ಮ ಕೆಲಸದ ಬಗ್ಗೆ ಸರಿಯಾದ ಯೋಜನೆ ರೂಪಿಸಿ
ಹಣ ಆಸ್ತಿ ಯಾವುದು ನಷ್ಟವಾಗದಂತೆ ಎಚ್ಚರಿಕೆವಹಿಸಿರಿ
ಇಷ್ಟ ದೇವತಾ ಪ್ರಾರ್ಥನೆ ಮಾಡಬೇಕು
ತುಲಾ ರಾಶಿ
ಮಿತ್ರರ ಭೇಟಿಯಿಂದ ಧನ ಸಹಾಯ ಆಗಲಿದೆ
ಸಕಾಲದಲ್ಲಿ ಭೋಜನ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ
ಜೀವನ ಅಭಿವೃದ್ಧಿಗಾಗಿ ಹಲವಾರು ವಿಷಯಗಳನ್ನು ಆಶ್ರಯಿಸಬಹುದು
ಪ್ರಾಮಾಣಿಕ ಕಾರ್ಯದಲ್ಲಿ ಯಶಸ್ವಿದೆ
ಋಣ ಪರಿಹಾರಕ್ಕೆ ಅವಕಾಶವಿದೆ
ಸಾಲದಿಂದ ಆದಷ್ಟು ದೂರವಿರಿ
ಗಣಪತಿಯನ್ನು ಪ್ರಾರ್ಥನೆ ಮಾಡಬೇಕು
ವೃಶ್ಚಿಕ ರಾಶಿ
ಮಹಿಳೆಯರು ವಾಹನ ಚಾಲನೆ ಮಾಡುವಾಗ ಎಚ್ಚರಿಕೆವಹಿಸಬೇಕು
ವಿನಾಕಾರಣ ವಾದ ವಿವಾದದಲ್ಲಿ ಸಿಲುಕಬೇಡಿ
ಆದಾಯ ಮೀರಿ ಖರ್ಚಿಗೆ ಮುಂದಾಗಬಹುದು
ಬೇಡವೆಂದರೂ ಪ್ರಯಾಣ ಮಾಡಿ ತೊಂದರೆ ಮಾಡಿಕೊಳ್ಳುತ್ತೀರಿ
ಮಕ್ಕಳು ಆಡುವಾಗ ಅತಿಯಾದ ಜಾಗ್ರತೆವಹಿಸಿ
ಮನೋರೋಗಕ್ಕೆ ಮದ್ದಿಲ್ಲ ನೀವೇ ಸರಿಪಡಿಸಿಕೊಳ್ಳಬೇಕು
ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ ನೆಮ್ಮದಿ ಪಡೆಯಿರಿ
ಧನಸ್ಸು ರಾಶಿ
ವ್ಯಾಪಾರಕ್ಕಾಗಿ ಹೊಸ ಹೂಡಿಕೆ ಮಾಡದಿರಿ
ನಿಮ್ಮ ಮಿತಿಯಲ್ಲಿ ಬರುವ ನಷ್ಟವನ್ನು ತಪ್ಪಿಸಲು ಯತ್ನಿಸಿ
ವಿದ್ಯಾರ್ಥಿಗಳು ಸ್ವಯಂಕೃತ ತಪ್ಪುಗಳಿಂದ ಪರಿತಪಿಸುತ್ತೀರಿ
ಕೈಯಲ್ಲಿ ಹಣವಿದ್ದರೂ ಸರಿಯಾದ ಯೋಜನೆ ಇಲ್ಲದೆ ನಷ್ಟ ಅನುಭವಿಸುತ್ತೀರಿ
ಮನೆಯಲ್ಲಿ ವಾದದಿಂದಲೇ ಕೆಲಸ ಹಾಳಾಗುತ್ತೆ
ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಬೇಕು
ಮಕರ ರಾಶಿ
ಸ್ನೇಹಿತರು ಬಂಧುಗಳು ದೂರವಾಗಬಹುದು
ವಾಹನ ಖರೀದಿಯಿಂದ ನಷ್ಟವಾಗುತ್ತದೆ
ಮನಸ್ಸಿನಲ್ಲಿ ಚಿಂತೆ ಭಯ ಕಾಡುತ್ತದೆ
ಬೇರೆಯವರ ವಿಚಾರ ಬೇಡ
ಮನೆಯಲ್ಲಿಯಲ್ಲಿನ ವ್ಯವಹಾರ ಸರಿಪಡಿಸಿಕೊಳ್ಳಿರಿ
ಶ್ರೀರಾಮನನ್ನು ಪ್ರಾರ್ಥನೆ ಮಾಡಬೇಕು
ಕುಂಭ ರಾಶಿ
ವೃತ್ತಿಯಲ್ಲಿ ಅಸಮಾಧಾನ ಕಲಹ ಸಾಧ್ಯತೆ ಇದೆ
ಅನಗತ್ಯ ಮಾತಿನಿಂದ ಸಮಯ ವ್ಯರ್ಥವಾಗಲಿದೆ
ವಿನಾಕಾರಣ ಅಶಾಂತಿ ಇರಲಿದೆ
ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಂಡು ಹಿನ್ನಡೆ ಅನುಭವಿಸುತ್ತೀರಾ
ನಿಮ್ಮ ದಾಖಲೆ ಪತ್ರದ ಬಗ್ಗೆ ಎಚ್ಚರಿಕೆ ವಹಿಸಿ
ಅಧಿಕಾರಿಗಳ ಒತ್ತಡದಿಂದ ಬೇಸರ, ಕೆಲಸಗಳು ನಿಲ್ಲಬಹುದು
ಲಕ್ಷ್ಮಿ ದೇವಿಯ ಪ್ರಾರ್ಥನೆ ಮಾಡಬೇಕು
ಮೀನ ರಾಶಿ
ನಿಮ್ಮ ವಿಚಿತ್ರವಾದ ತೀರ್ಮಾನ ನಿಮಗೆ ಭಯ ಹುಟ್ಟಿಸುತ್ತೆ
ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವವರು ಹಲವು ಸವಾಲುಗಳನ್ನು ಎದುರಿಸಬೇಕು
ಮನೆಯಲ್ಲಿ ಯಾವ ವಾತಾವರಣ ನಿಮಗೆ ಸಮಾಧಾನ ಕೊಡಬಹುದು
ಯಾವುದೇ ವಿಷಯವನ್ನು ಮುಚ್ಚಿಡಬೇಡಿರಿ
ನಿಮ್ಮ ಸಹಾಯಕ್ಕೆ ಯಾರು ಬರುವುದಿಲ್ಲ ಎಂಬ ಚಿಂತೆ ಕಾಡುತ್ತದೆ
ಭಗವತಿಯನ್ನು ಪ್ರಾರ್ಥನೆ ಮಾಡಬೇಕು
