ಬಡಾವಣೆಗಳ ನಾಗರೀಕ ವೇದಿಕೆಯಿಂದ ರಾಮಸಾಗರದಲ್ಲಿನ ಉದ್ದೇಶಿತ ಎಸ್ಟೀಪಿ ವಿರೋಧಿಸಿ ಪ್ರತಿಭಟನೆ.
1 min read
https://youtu.be/CQ2vc6ai3EE?si=VOcTgpuYYIjkxo_A
ಕಸ ವಿಲೇವಾರಿ ಘಟಕಕ್ಕೆ ಭೂಸ್ವಾಧೀನ ವಿರೋಧಿಸಿ ನಾಗರೀಕ ವೇದಿಕೆ ಧರಣಿ, ಎಚ್ಚರಿಕೆ.
ಬೆಂ,ಆನೇಕಲ್,ಮಾ,೧೨: ಇತ್ತೀಚೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ತಾಲೂಕಿನ ರಾಮಸಾಗರ ಸರ್ವೆ ನಂ ೧೧೧ರ ಸುಮಾರು ೦೭ ಎಕರೆಯ ಸರ್ಕಾರಿ ಜಮೀನನ್ನು ಚಂದಾಪುರ, ಬೊಮ್ಮಸಂದ್ರ ಪುರಸಭೆಗಳು ಹಾಗು ಹೆಬ್ಬಗೋಡಿ ನಗರಸಭೆಯ ಕಸ ವಿಲೇವಾರಿ ಘಟಕಕ್ಕೆ ಜಾಗ ಹಸ್ತಾಂತರಿಸಲು ಬಂದಿದ್ದ ಸಂದರ್ಭದಲ್ಲಿ ಎದ್ದ ರೈತರ ಆಕ್ರೋಶದ ಮುಂದುವರೆದ ಭಾಗವಾಗಿ ಇಂದು ಬೆಳಗ್ಗೆ ಚಂದಾಪುರ ಪುರಸಭೆ ಮುಂಭಾಗ ಬಡಾವಣೆಗಳ ನಾಗರೀಕ ಸಮಿತಿ ಧರಣಿ ನಡೆಸಿ ಭೂಸ್ವಾಧೀನ ಕೈಬಿಡವಂತೆ ಒತ್ತಾಯಿಸಿದ್ದಾರೆ.
ಭೂಸ್ವಾಧೀನ ವಿರೋಧಿ ನಾಗರೀಕ ಸಮಿತಿಯ ಗೌರವಾಧ್ಯಕ್ಷ ಹಿರಿಯ ಹೋರಾಟಗಾರ ಶಿವರಾಮರೆಡ್ಡಿ ಮಾತನಾಡಿ ಈಗಾಗಲೇ ಬರ‍್ಹುಕುಂ ಸಾಗುವಳಿದಾರರ ಅರ್ಜಿಗಳು ಇತ್ಯರ್ಥವಾಗದೆ ವಜಾಗೊಳಿಸಿರುವುದು ಗಮನಕ್ಕೆ ಬಾರುವ ಮುನ್ನವೇ ಜಿಲ್ಲಾಡಳಿತ ಬಡ ರೈತರ ಮೇಲೆ ಕಸ ಸುರಿಯುವ ಕಾಮಗಾರಿಯನ್ನು ಆರಂಭಿಸಿರುವುದು ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರೀ ನಡೆಯಾಗಿದೆ. ಏಕಾಏಕಿ ಅಧಿಕಾರಿಗಳೊಡನೆ ಬಂದಿಳಿದ ಜಿಲ್ಲಾಧೀಕಾರಿ ಜಗದೀಶ್ ಉಳ್ಳವರು ಒತ್ತುವರಿ ಮಾಡಿಕೊಂಡಿರುವ ಜಾಗಗಳನ್ನು ಹಾಗೆಯೇ ಬಿಟ್ಟು ಅವರ ಕಾವಲುಗಾರರಂತೆ ವರ್ತಿಸುತ್ತಿದ್ದು ಅರ್ಜಿ ನಮೂನೆ ೫೩ರ ಬಡ ರೈತರಿಗೆ ಅನ್ಯಾ ಎಸಗಿದ್ದಾರೆ. ಅವರು ಬಂದಾಗಲೇ ಮುಖತಃ ಈ ಹೋರಾಟದ ಎಚ್ಚರಿಕೆಯನ್ನು ನೀಡಿದ್ದೇವೆ. ಸದ್ಯಕ್ಕೆ ಹಾರಿಕೆ ಸಿದ್ದ ಉತ್ತರವನ್ನು ನೀಡಿ ಹೊರಟ ಜಿಲಲಾಧಿಕಾರಿಗಳು ಈ ನಾಗರೀಕ ಬಡ ರೈತರ ಅಹವಾಲನ್ನ ಆಲಿಸದಿದ್ದರೆ ಉಗ್ರ ಸ್ವರೂಪದ ಹೋರಾಟವನ್ನು ತೀವ್ರತೆಯನ್ನು ನೋಡಬೇಕಾಗುತತದೆ ಎಂದು ಎಚ್ಚರಿಸಿದರು. ರಾಮಸಾಗರ ಸರ್ಕಾರಿ ಜಾಗವನ್ನು ಕಸವಿಲೇವಾರಿ ಘಟಕಕ್ಕೆ ಸೂಚಿಸಿರುವ ತಾಲೂಕು ದಂಡಾಧಿಕಾರಿಗಳು ರೈತರೊಂದಿಗೆ ಒಮ್ಮೆಯಾದರೂ ಮಾತನಾಡಿದ್ದಾರಾ ಎಂದರೆ ಅದೂ ಇಲ್ಲ. ಹೀಗಾಗಿ ಇಡೀ ಅಧಿಕಾರಿಗಳ ನಡೆಗೆ ಪ್ರತಿರೋಧವೇ ಇಲ್ಲದಂತೆ ಏಕಮುಖವಾಗಿ ಬಂಡವಾಳದಾರರ ಪರವಾಗಿದ್ದಾರೆ ಎನ್ನಲು ಇವಿಷ್ಟು ಸಾಕಾಗಿದೆ. ಕಸ ವಿಲೇವಾರಿ ಘಟಕಕ್ಕೆ ೭ ಎಕರೆ ಏಕೆ ಬೇಕಾಗಿದೆ ಅದೂ ಜನವಾಸವಿರುವ ಜಾಗದಲ್ಲಿ ಕಸ ಸುರಿದರೆ ಸುತ್ತಲ ಜನರಿಗೆ ಆರೋಗ್ಯ ಸಮಸ್ಯೆ ಎದುರಾಗುತ್ತದೆ ಎನ್ನುವ ಕಿಂಚಿತ್ತೂ ಮುಂದಾಲೋಚನೆಯಿಲ್ಲದೆ ಕಾಮಗಾರಿಗೆ ಚಾಲನೆ ನೀಡಿರುವುದು ಖಂಡನೀಯ ಎಂದರು.
ಸಿಪಿಐ(ಎA)ನ ಡಿ ಮಹದೇಶ್ ಮಾತನಾಡಿ ಎಸ್ಟೀಪಿ ಘಟಕವನ್ನು ಜನವಸತಿ ಪ್ರದೇಶದಲ್ಲಿ ಕಾಮಗಾರಿ ನಡೆಸಿರುವುದು ಖಂಡನೀಯ, ಸರ್ಕಾರ ಈಗಲೇ ಎಸ್ಟೀಪಿ ಘಟಕ ಬೇರೆಡೆ ವರ್ಗಾಯಿಸಬೇಕು, ಇರುವ ನಾಗರೀಕ ಸೌಲಭ್ಯಗಳನ್ನು ನೀಡುವುದು ಬಿಟ್ಟು ಅವೈಜ್ಞಾನಿಕ ಜನವಿರೋಧಿ ಕೆಲಸಗಳತ್ತ ಸರ್ವಾಧಿಕಾರಿ ಧೋರಣೆಯನ್ನ ಕೈಬಿಡಬೇಕು, ತರಾತುರಿ ಟೆಂಡರ್ ಗಳ ಕರೆದು ಲೂಟಿ ಮಾಡುವುದ ಬಿಟ್ಟು ಜನರ ಆರೋಗ್ಯದ ಕಡೆ ಕಾಳಜಿವಹಿಸಬೇಕು ಎಂದು ಎಚ್ಚರಿಸಿದರು. ಹೀಗೆ ಅಧಿಕಾರಿಗಳ ಜಾಣಕಿವುಡು ತೋರಿದರೆ ಹೆದ್ದಾರಿ ತಡೆಯಂತಹ ಪ್ರತಿರೋಧ ಒಡ್ಡಿ ಜನರಿಗೆ ನ್ಯಾ ಕೊಡಿಸುವ ನಿಟ್ಟಿನಲ್ಲಿ ಹೋರಾಟಗಳನ್ನು ಹಮ್ಮಿಕೊಳ್ಳುವ ಎಚ್ಚರಿಕೆಯನ್ನು ನೀಡಿದರು.
ಅಧ್ಯಕ್ಷ ಪ್ರಮೋದ್ ಮಾಳದಕರ, ಪ್ರ ಕಾರ್ಯದರ್ಶಿ ವಿಜಯ್, ಕಾರ್ಯಧ್ಯಕ್ಷರಾದ ಎ ನಾರಾಯಣರೆಡ್ಡಿ, ದಿವ್ಯಾ, ಶಿವಕುಮಾರ್ ಮತ್ತು ರೇಖಾ. ಉಪಾದ್ಯಕ್ಷರಾದ ಶ್ರೀನಿವಾಸ ರೆಡ್ಡಿ, ವೇಣು, ರವಿ, ಕಾರ್ಯದರ್ಶಿ ಅರ್ಜುನ್, ವಂದನಾ, ಪೂರ್ಣ, ಐಶ್ವರ್ಯ ಮಾತನಾಡಿದರು.
ಹೋರಾಟದಲ್ಲಿ ಖಜಾಂಚಿ ಅಜಿತ್, ಶ್ರೀವಾಸ್ತವ್ ಮತ್ತು ದಿಲೀಪ್ ಇದ್ದರು. ಕೊನೆಯದಾಗಿ ಚಂದಾಪುರ ಮುಖ್ಯಾಧಿಕಾರಿ ಶಿವರಾಮೇಗೌಡರಿಗೆ ಮನವಿ ನೀಡಿ ಶೀಘ್ರ ಗಮನ ಹರಿಸುವಂತೆ ಒತ್ತಾಯಿಸಿದರು.
