[t4b-ticker]

ಫೈನಲ್ ಪಂದ್ಯದಲ್ಲಿ ಗೆದ್ದು ಬೀಗಿದ ಟೀಮ್​ ಇಂಡಿಯಾ.. 4 ವಿಕೆಟ್​ಗಳಿಂದ ಗೆದ್ದು ಚಾಂಪಿಯನ್​ ಆಗಿ ಹೊರಹೊಮ್ಮಿದ ಭಾರತ

1 min read
Share it

 

ಐಸಿಸಿ ಚಾಂಪಿಯನ್ಸ್ ಟ್ರೋಫಿ ೨೦೨೫ ರ ಫೈನಲ್ ಪಂದ್ಯದಲ್ಲಿ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಈ ರೋಚಕ ಪಂದ್ಯದಲ್ಲಿ ನ್ಯೂಜಿಲೆಂಡ್​​​ ವಿರುದ್ಧ ೪ ವಿಕೆಟ್​ಗಳಿಂದ ಗೆದ್ದು ಬೀಗುವ ಮೂಲಕ ಟೀಮ್​ ಇಂಡಿಯಾ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ದುಬೈನ ಇಂಟರ್​ ನ್ಯಾಷನಲ್​ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತಕ್ಕೆ ನ್ಯೂಜಿಲೆಂಡ್ ೨೫೨ ರನ್‌ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಟೀಮ್​ ಇಂಡಿಯಾ ೪೯ ಓವರ್​​ನಲ್ಲೇ ೬ ವಿಕೆಟ್​ ಕಳೆದುಕೊಂಡು ಗೆಲುವಿನ ನಗೆ ಬೀರಿದೆ.

 

ಫೈನಲ್ ಪಂದ್ಯದ ಗೆಲುವಿಗೆ ಟೀಮ್ ಇಂಡಿಯಾಗೆ ಆನೇಕ ಆಟಗಾರರು ಕೊಡುಗೆ ನೀಡಿದರು. ಈ ಪೈಕಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಮೂವರು ಆಟಗಾರರ ಬಗ್ಗೆ ಮಾಹಿತಿ ಇಲ್ಲಿದೆ. ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಮೊದಲ ಪ್ಲೇಯರ್​​​ ಕ್ಯಾಪ್ಟನ್​ ರೋಹಿತ್​ ಶರ್ಮಾ. ಇವರು ೮೩ ಎಸೆತಗಳಲ್ಲಿ ೭ ಬೌಂಡರಿ ಮತ್ತು ೩ ಸಿಕ್ಸರ್ ನೆರವಿನಿಂದ ೭೬ ರನ್ ಬಾರಿಸಿದರು.  ರೋಹಿತ್​ ನೀಡಿದ ಉತ್ತಮ ಆರಂಭದಿಂದಲೇ ಭಾರತ ಗೆಲ್ಲಲು ಸಾಧ್ಯವಾಗಿದ್ದು. ಚಾಂಪಿಯನ್ಸ್ ಟ್ರೋಫಿ ೨೦೨ರಲ್ಲಿ ಭಾರತ ತಂಡದ ಪರ ಸ್ಥಿರ ಪ್ರದರ್ಶನ ನೀಡಿದವರು ಶ್ರೇಯಸ್ ಅಯ್ಯರ್. ಫೈನಲ್ ಪಂದ್ಯದಲ್ಲೂ ಅಯ್ಯರ್ ತಮ್ಮ ಅದ್ಭುತ ಆಟದ ಮೂಲಕ ಎಲ್ಲರ ಗಮನ ಸೆಳೆದರು. ಅಯ್ಯರ್ ೬೨ ಎಸೆತಗಳಲ್ಲಿ ೨ ಬೌಂಡಿರಿ ಮತ್ತು ೨ ಸಿಕ್ಸರ್ ನೆರವಿನಿಂದ ೪೮ ರನ್‌ಗಳನ್ನು ಕಲೆ ಹಾಕಿದರು. ಕುಲ್ದೀಪ್​ ಯಾದವ್​ ತನ್ನ ಸ್ಪಿನ್ ಬೌಲಿಂಗ್ ಮೂಲಕ ನ್ಯೂಜಿಲೆಂಡ್ ಬ್ಯಾಟರ್ಸ್​ ಅನ್ನು ಕಟ್ಟಿ ಹಾಕಿದರು. ರಚಿನ್ ರವೀಂದ್ರ ಮತ್ತು ಕೇನ್ಸ್ ವಿಲಿಯಮ್ಸನ್ ವಿಕೆಟ್​ ತೆಗೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇವರು ತಮ್ಮ ೧೦ ಓವರ್‌ಗಳಲ್ಲಿ ನೀಡಿದ್ದು ಕೇವಲ ೪೦ ರನ್​.

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?