[t4b-ticker]

ಟೀಂ ಇಂಡಿಯಾಗೆ ಕ್ಯಾಚ್​ ಬಿಟ್ಟಿರೋದ್ರಲ್ಲಿ  ಅಗ್ರಸ್ಥಾನ.. ಈ ಟೂರ್ನಿಯಲ್ಲಿ ಕೈಚೆಲ್ಲಿದ ಕ್ಯಾಚ್​​ಗಳೆಷ್ಟು..?

1 min read
Share it

 

೨೦೧೫ ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ವಿರುದ್ಧ 7 ವಿಕೆಟ್ ಕಳೆದುಕೊಂಡುಚ೨೫೧ ರನ್​​ ಗಳಿಸಿತ್ತು. ದುಬೈ ಮೈದಾನದಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್ಸ್, ಕಿವೀಸ್ ಬ್ಯಾಟ್ಸ್‌ಮನ್‌ಗಳಿಗೆ ಮುಕ್ತವಾಗಿ ಆಡಲು ಅವಕಾಶ ನೀಡಲಿಲ್ಲ. ಅದೇ ಸಮಯದಲ್ಲಿ ಫೀಲ್ಡಿಂಗ್‌ನಲ್ಲೂ ನಿರಾಶೆ ಉಂಟಾಗಿದೆ. ಫೈನಲ್​​ನಲ್ಲಿ ಒಟ್ಟು ೪ ಕ್ಯಾಚ್​ಗಳನ್ನು ಕೈಚೆಲ್ಲಿದ್ದಾರೆ. ಇದರಲ್ಲಿ ೬೩ ರನ್‌ಗಳ ಪ್ರಮುಖ ಇನ್ನಿಂಗ್ಸ್ ಆಡಿದ ಡ್ಯಾರಿಲ್ ಮಿಚೆಲ್ ಕ್ಯಾಚ್ ಕೂಡ ಸೇರಿದೆ. ಈ ಇಡೀ ಟೂರ್ನಿಯಲ್ಲಿ ಕ್ಯಾಚ್‌ಗಳನ್ನು ಬಿಟ್ಟಿರೋದ್ರಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ.

 

ವಿಶ್ವ ಕ್ರಿಕೆಟ್ ತಂಡಗಳಲ್ಲಿ ಟೀಂ ಇಂಡಿಯಾ ಬಲಿಷ್ಠವಾಗಿದೆ. ಫೀಲ್ಡಿಂಗ್​ನಲ್ಲೂ ಅಷ್ಟೇ ಬಲಿಷ್ಠವಾಗಿದ್ದರೂ, ಈ ಟೂರ್ನಿಯಲ್ಲಿ ಬರೋಬ್ಬರಿ ೧೩ ಕ್ಯಾಚ್​ಗಳನ್ನು ಬಿಟ್ಟಿರೋದು ಭಾರೀ ಚರ್ಚೆ ಆಗ್ತಿದೆ. ಐಸಿಸಿ ಚಾಂಪಿಯನ್ಸ್​ ಟ್ರೋಫಿಯಲ್ಲಿ ಭಾರತ ಒಟ್ಟು ೫ ಪಂದ್ಯಗಳನ್ನ ಆಡಿದೆ. ಗ್ರೂಪ್ ಹಂತದಲ್ಲಿ ಬಾಂಗ್ಲಾ ವಿರುದ್ಧ ೨, ಪಾಕ್ ವಿರುದ್ಧ 2 ಎರಡು ಕ್ಯಾಚ್ ಬಿಟ್ಟಿದ್ದಾರೆ. ಅದೇ ರೀತಿ ಗ್ರೂಪ್ ಹಂತದಲ್ಲಿ ನ್ಯೂಜಿಲೆಂಡ್ ವಿರುದ್ಧ ಮೂರು ಕ್ಯಾಚ್​ಗಳನ್ನು ಬಿಟ್ಟಿದ್ದಾರೆ. ಸೆಮೀಸ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಎರಡು ಕ್ಯಾಚ್​​ಗಳನ್ನು ಬಿಟ್ಟಿದ್ದಾರೆ. ಅಂತಿಮ ಪಂದ್ಯದಲ್ಲಿ ಒಟ್ಟು ನಾಲ್ಕು ಕ್ಯಾಚ್​ಗಳನ್ನು ಕೈಚೆಲ್ಲಿದ್ದಾರೆ. ಮೊಹಮ್ಮದ್ ಶಮಿ ಇಡೀ ಟೂರ್ನಿಯಲ್ಲಿ ಒಟ್ಟು ಮೂರು ಕ್ಯಾಚ್​​ಗಳನ್ನು ಬಿಟ್ಟು ಮೊದಲ ಸ್ಥಾನದಲ್ಲಿದ್ದಾರೆ. ಬೌಲಿಂಗ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಅವರು 9 ವಿಕೆಟ್ ಪಡೆದುಕೊಂಡರು. ಚಿನ್ನದ ಬಾಲ್ ಸ್ಪರ್ಧೆಯ ರೇಸ್​ನಲ್ಲಿದ್ದ ಶಮಿ, ಕೇವಲ ಒಂದು ವಿಕೆಟ್​ನಿಂದ ವಂಚಿತರಾದರು.

 

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?