ಸೈಲೆಂಟ್ ಹೋರೋ ಎಂದು ರೋಹಿತ್ ಶರ್ಮಾ ಯಾರನ್ನು ಕರೆದಿದ್ದಾರೆ?
1 min read
ಹಲವು ವರ್ಷಗಳ ಬಳಿಕ ಭಾರತದ ಆಟಗಾರರು ಚಾಂಪಿಯನ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಐತಿಹಾಸಿಕ ಗೆಲುವು ದಾಖಲಿಸಿದೆ. ದುಬೈನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಭಾರತದ ಆಟಗಾರರು ಟ್ರೋಫಿಯನ್ನ ಎತ್ತಿ ಹಿಡಿದಿದ್ದಾರೆ. ಮ್ಯಾಚ್ ಮುಗಿದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ ಯುವ ಪ್ಲೇಯರ್ ಅನ್ನು ಸೈಲೆಂಟ್ ಹೀರೋ ಎಂದು ಹಾಡಿ ಹೊಗಳಿದ್ದಾರೆ.
ಪಂದ್ಯದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರೋಹಿತ್ ಶರ್ಮಾ ಅವರು, ತಂಡದ ಬಗ್ಗೆ ನನಗೆ ಹೆಚ್ಚಿನ ಗೌರವವಿದೆ. ಫೈನಲ್ನಲ್ಲಿ ಕಠಿಣ ಸವಾಲು ಎದುರಾಗಿತ್ತು. ಇಡೀ ಈ ಟೂರ್ನಿಯಲ್ಲಿ ಸೈಲೆಂಟ್ ಹೀರೋ ಶ್ರೇಯಸ್ ಅಯ್ಯರ ಅವರ ಬ್ಯಾಟಿಂಗ್ ಅದ್ಭುತವಾಗಿತ್ತು. ಮಧ್ಯಮ ಕ್ರಮಾಂಕದಲ್ಲಿ ಅಯ್ಯರ್ ಅವರು ನೀಡಿದ ಪರ್ಫಾಮೆನ್ಸ್ ನಾವು ಮರೆಯಬಾರದು. ಮಿಡಲ್ ಆರ್ಡರ್ನಲ್ಲಿ ತಂಡಕ್ಕೆ ಅತ್ಯಂತ ಮುಖ್ಯವಾದ ಬ್ಯಾಟ್ಸ್ಮನ್ ಸೈಲೆಂಟ್ ಹೀರೋ ಅಯ್ಯರ್ ಎಂದು ಹೇಳಿದರು.
ಸೆಮಿಫೈನಲ್ನಲ್ಲೂ ವಿರಾಟ್ ಜೊತೆ ಸೇರಿ ಶ್ರೇಯಸ್ ಅಯ್ಯರ್ ಉತ್ತಮ ಪಾರ್ಟನರ್ಶಿಪ್ನಲ್ಲಿ ರನ್ ಕಲೆ ಹಾಕಿದ್ದರು. ಆಸಿಸ್ ವಿರುದ್ಧ 45 ರನ್ಗಳನ್ನು ಗಳಿಸಿದ್ದರು. ಅದರಂತೆ ಫೈನಲ್ನಲ್ಲಿಯು ಕಿವೀಸ್ಗೆ ಮಾರಕವಾಗಿ ಕಾಡಿದರು. ಅಕ್ಷರ್ ಪಟೇಲ್ 29 ಹಾಗೂ ಶ್ರೇಯಸ್ ಅಯ್ಯರ್ ಅವರ 48 ರನ್ಗಳ ಕಾಣಿಕೆ ಗೆಲುವಿಗೆ ಮುಖ್ಯವಾಗಿದೆ. ಸೈಲೆಂಟ್ ಹೀರೋ ತಂಡದ ಕಠಿಣ ಸಮಯದಲ್ಲಿ ನೆರವಾಗುವುದು ಪಕ್ಕಾ ಎಂದು ರೋಹಿತ್ ಶರ್ಮಾ ಶ್ರೇಯಸ್ ಅಯ್ಯರ್ ಅವರನ್ನು ಹಾಡಿ ಹೊಗಳಿದರು.
