2021ರಲ್ಲಿ ಜನಿಸಿದ ಕೋಣ.. ವಿಶ್ವದಲ್ಲಿಯೇ ಅತಿ ದೊಡ್ಡ ಕಿಂಗ್ ಕಾಂಗ್ ಕೋಣ…!
1 min read
ವಿಶ್ವದಲ್ಲಿಯೇ ಅತಿದೊಡ್ಡ ಕೋಣ ಎಂದು ಹೆಸರು ಪಡೆದಿರುವ ಹಾಗೂ ಗಿನ್ನಿಸ್ ರೆಕಾರ್ಡ್ನಲ್ಲಿ ತನ್ನ ಹೆಸರು ಉಲ್ಲೇಖಿಸುವಂತೆ ದೈತ್ಯವಾಗಿ ಬೆಳೆದ ಕೋಣ ಕಿಂಗ್ ಕಾಂಗ್ ಹೆಸರಿಗೆ ತಕ್ಕಂತೆ ಈ ಕೋಣನ ದೈತ್ಯ ದೇಹವನ್ನು ಹೊಂದಿದೆ. ಈ ಕೋಣನ ವಯಸ್ಸು ಕೇವಲ 4 ವರ್ಷ ಮಾತ್ರ. ಇದರ ಎತ್ತರ 6 ಅಡಿ 8 ಇಂಚು ಎತ್ತರ. ಸಾಮಾನ್ಯ ಕೋಣದ ಉದ್ದಕ್ಕಿಂತ ಸುಮಾರು 20 ಇಂಚು ಉದ್ದವಿದೆ . ಕಿಂಗ್ ಕಾಂಗ್ ಕೋಣ ಥೈಲ್ಯಾಂಡ್ ನಖೋನ್ ರಾಟ್ಚಸಿಮಾ ಎಂಬ ನಗರದ ನಿನ್ಲನೀ ಫಾರ್ಮ್ನಲ್ಲಿದೆ. ಇದು ಏಫ್ರಿಲ್ 1, 2021ರಲ್ಲಿ ಜನಿಸಿದೆ. ಅದರ ಆಕಾರವನ್ನು ನೋಡಿದವರು ಯಾವುದೋ ಕಾಡೆಮ್ಮೆ ಇರಬಹುದು ಇದು ಎಂದುಕೊಳ್ಳಬೇಕು ಅಂತಹ ದೈತ್ಯದೇಹಿ ಇದು. ಇತರ ಕೋಣಗಳಿಗೆ ಹೋಲಿಸಿ ನೋಡಿದರೆ ಈ ಕೋಣದ ದೇಹದ ಗಾತ್ರ ತುಂಬಾ ದೊಡ್ಡದು ಇದರ ಬಗ್ಗೆ ಇನ್ನುಷ್ಟು ಮಾಹಿತಿಗಳು ಇಲ್ಲಿವೆ.
ಇಷ್ಟು ದೈತ್ಯ ದೇಹವನ್ನು ಹೊಂದಿದ್ದರು ಕೂಡ ಕಿಂಗ್ ಕಾಂಗ್ನದ್ದು ಸೌಮ್ಯ ಸ್ವಭಾವ. ಉಳಿದ ಕೋಣಗಳಿಗೆ ಹೋಲಿಸಿದರೆ ಇದು ತುಂಬಾ ಸಮಾಧನದಿಂದಿರುವ ಕೋಣ, ಎಂದಿಕೂ ಕೂಡ ಕೋಪಕ್ಕೆ ಒಳಗಾಗಿ ತನ್ನ ಜೊತೆಗಾರರೊಂದಿಗೆ ಜಗಳಕ್ಕೆ ಇಳಿದಿಲ್ಲ. ವುಟ್ಟಿ ಹೇಳುವ ಪ್ರಕಾರ ಈ ಕಿಂಗ್ ಕಾಂಗ್ ತುಂಬಾ ಪ್ರಮಾಣಿಕ ಹಾಗೂ ಅಷ್ಟೇ ಸ್ನೆಹಮಯಿಯಾಗಿರುವ ಕೋಣ. ಅದರೊಂದಿಗೆ ಸಮಯ ಕಳೆಯುವುದೇ ಒಂದು ವಿಶೇಷ ಕ್ಷಣ ಎಂದು ಹೇಳುತ್ತಾರೆ.
ಈ ಒಂದು ಕೋಣದ ಎಲ್ಲ ಸೌಲಭ್ಯಗಳನ್ನು ನೋಡಿಕೊಳ್ಳುವುದು ಚೆರ್ಪಟ್ಟ್ ವುಟ್ಟಿ ಎಂಬ ಮಹಿಳೆ. ಅವಳ ಪ್ರಕಾರ ಕಿಂಗ್ ಕಾಂಗ್ ಜನ್ಮ ನೀಡಿದ ಎಮ್ಮೆ ಮತ್ತು ಕೋಣ ಇಂದಿಗೂ ಕೂಡ ನಿನ್ಲನೀ ಫಾರ್ಮ್ನಲ್ಲಿಯೇ ಇವೆಯಂತೆ. ವುಟ್ಟಿ ಹೇಳುವ ಪ್ರಕಾರ ಇದು ಹುಟ್ಟಿದಾಗಲೇ ನಾವು ಅಂದುಕೊಂಡಿದ್ದೇವು. ಇದು ಉಳಿದ ಸಾಮಾನ್ಯ ಕೋಣದ ತರದ್ದಲ್ಲ ಮುಂದೆ ದೈತ್ಯ ದೇಹಿಯಾಗಿ ಬೆಳೆಯುತ್ತದೆ ಎಂದು, ಅದು ಹಾಗೆಯೇ ಆಯಿತು ಎನ್ನುತ್ತಾರೆ. ಅದರ ತಂದೆ ಹಾಗೂ ತಾಯಿ ಈಗಲೂ ಕೂಡ ಇದೇ ಫಾರ್ಮ್ನಲ್ಲಿವೆ. ಅವುಗಲ ಜೊತೆ ಒಂದಿಷ್ಟು ಕುದುರೆಗಳು ಕೂಡ ಇವೆ ಎಂದು ಹೇಳಿದ್ದಾರೆ.
ಕಿಂಗ್ ಕಾಂಗ್ನ ನಿತ್ಯ ಕಾರ್ಯಕ್ರಮಗಳು ಏನೆಂದರೆ ಬರೊಬ್ಬರಿ ಆರು ಗಂಟೆಗೆ ಅದು ಎದ್ದೇಳುತ್ತದೆ. ನಂತರ ಫಾರ್ಮ್ನಲ್ಲಿರುವ ಕೊಳದಲ್ಲಿ ಕೊಂಚಹೊತ್ತು ಆಟವಾಡುತ್ತದೆ. ಅದಕ್ಕೆ ಬೆಳಗಿನ ಆಹಾರ ಕೊಡುವ ಮುನ್ನ ತಪ್ಪದೇ ಸ್ನಾನ ಮಾಡಿಸಲಾಗುತ್ತದೆ. ನಿತ್ಯ ಸುಮಾರು 35 ಕೆಜಿ ಆಹಾರವನ್ನು ಈ ಕಿಂಗ್ ಕಾಂಗ್ ಸೇವಿಸುತ್ತಾನೆ ಎಂದು ವುಟ್ಟಿ ಹೇಳುತ್ತಾರೆ. ಹುಲ್ಲು ಮತ್ತು ಕಾಳು ಕಿಂಗ್ ಕಾಂಗ್ನ ನೆಚ್ಚಿನ ಆಹಾರ. ಅದನ್ನು ಸೇವಿಸಿ ವಿಶ್ರಾಂತಿ ಮಾಡುತ್ತದೆ. ಮತ್ತೆ ಸಾಯಂಕಾಲ 5.30ಕ್ಕೆ ಮತ್ತೊಮ್ಮೆ ಸ್ನಾನ ಮಾಡಿಸಲಾಗುತ್ತದೆ. ನಿತ್ಯವು ಎರಡು ಬಾರಿ ಕಡ್ಡಾಯವಾಗಿ ಸ್ನಾನ ಮಾಡಿಸಲಾಗುತ್ತದೆ. ನಂತರವೇ ಅದಕ್ಕೆ ಊಟವನ್ನು ನೀಡಲಾಗುತ್ತದೆ ಎಂದು ವುಟ್ಟಿ ಹೇಳಿದ್ದಾರೆ.
ಕಿಂಗ್ಕಾಂಗ್ಗೆ ಈಗ ನಾಲ್ಕು ವರ್ಷಗಳು ಮಾತ್ರ. ಸಾಮಾನ್ಯವಾಗಿ ಸಾಕು ಕೋಣಗಳ ಆಯುಸ್ಸು ಸುಮಾರು 25 ವರ್ಷಗಳು. ಕಾಡೆಮ್ಮೆಗಳು 30 ವರ್ಷ ಬಾಳುತ್ತವೆ. ಸದ್ಯ ನಾಲ್ಕು ವರ್ಷಕ್ಕೆ ಈ ದೈತ್ಯ ದೇಹವನ್ನು ಪಡೆದಿರುವ ಈ ಕೋಣ ಮುಂದೆ ಇನ್ನೂ ದೈತ್ಯಗಾತ್ರವನ್ನು ಪಡೆಯಲಿದೆಯಾ ಅನ್ನೋ ಸಂದೇವಹವು ಕೂಡ ಇದೆ
