[t4b-ticker]

ಭಾನುವಾರ ರಾಶಿ ಭವಿಷ್ಯ -ಪ್ರೆಭ್ರವರಿ-9,2025

1 min read
Share it

 

ಮೇಷ ರಾಶಿ

ವ್ಯವಹಾರದಲ್ಲಿ ಪ್ರಯತ್ನಪೂರ್ವಕವಾಗಿ ಲಾಭ ಸಿಗುತ್ತದೆ.

ಆದಾಯದ ಜೊತೆ ಖರ್ಚು ಹೆಚ್ಚಾಗುತ್ತದೆ.

ಮನೆಗೆ ಅತಿಥಿಗಳ ಆಗಮನ ಅದರಿಂದ ಸಂತಸ

ಕುಟುಂಬದವರ ಸಲಹೆ ಬಹಲ ಮುಖ್ಯ

ಮಕ್ಕಳಿಂದ ಉತ್ತಮ ಭವಿಷ್ಯ

ಸ್ತ್ರೀಯರಿಂದ ಕೆಲಸದ ಸ್ಥಳದಲ್ಲಿ ಸಮಸ್ಯೆಯ ಸೂಚನೆ

ಗಣಪತಿ ಆರಾಧನೆ ಮಾಡಬೇಕು

 

ವೃಷಭ ರಾಶಿ

ಮನೆಯಲ್ಲಿ ವಾತಾವರಣ ಚೆನ್ನಾಗಿರುವುದಿಲ್ಲ

ಮನೆಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಹಿಡಿದು ಬಗೆಹರಿಸಿಕೊಳ್ಳಿ

ಹಣಕಾಸಿನ ವಿಚಾರದಲ್ಲಿ ಸಮಾಧಾನ ಸಿಗಲಿದೆ

ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ

ಸಹೋದ್ಯೋಗಿಗಳನ್ನ ಸಂಪೂರ್ಣವಾಗಿ ನಂಬಬೇಡಿ

ಯಾವುದೇ ದೌರ್ಬಲ್ಯಗಳನ್ನ ಜನರ ಮುಂದೆ ತೋರಿಸಬೇಡಿ

ಮನೆಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ

ಹಣಕಾಸಿನ ವಿಚಾರದಲ್ಲಿ ಸಮಾಧಾನವಾಗುತ್ತದೆ

ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಬೇಕು

 

ಮಿಥುನ ರಾಶಿ

ಅವ್ಯವಸ್ಥೆಗಳನ್ನು ಸರಿಪಡಿಸಲು ಪ್ರಯತ್ನ ಮಾಡಿ

ಸಾಮಾಜಿಕ ಸಂಸ್ಥೆಗಳಲ್ಲಿ ಜವಾಬ್ದಾರಿ ಸಿಗಬಹುದು

ಕೆಲಸದ ಬದಲಾವಣೆಯಿಂದ ಲಾಭ ಸಿಗುತ್ತದೆ

ಸರಕಾರಿ ಕೆಲಸಗಳಲ್ಲಿ ಸ್ವಲ್ಪ ಮಟ್ಟಿನ ಅನುಕೂಲಗಳು ಹೆಚ್ಚಾಗಬಹುದು

ನಿಮ್ಮ ಜವಾಬ್ದಾರಿ ನಿಮಗೆ ಗೌರವ ತರುತ್ತದೆ

ಶರಭೇಶ್ವರನನ್ನು ಪ್ರಾರ್ಥನೆ ಮಾಡಬೇಕು

 

ಕಟಕ ರಾಶಿ

ತಂದೆ ಮಕ್ಕಳ ಜಗಳಕ್ಕೆ ಅಥವಾ ಮುನಿಸಿಗೆ ಅವಕಾಶವಿದೆ

ದಿನಚರಿಯನ್ನ ಸಮತೋಲನದಲ್ಲಿಡಿ

ಕಷ್ಟದ ಕೆಲಸಗಳು ಸುಲಭವಾಗಿ ನೆರವೇರುತ್ತವೆ

ಜನರು ನಿಮ್ಮೊಂದಿಗೆ ಚರ್ಚೆ ನಡೆಸಬಹುದು

ನಿಮ್ಮನ್ನು ಪ್ರಶಂಸಿಸಲಾಗುತ್ತದೆ

ಕೌಟುಂಬಿಕ ಜವಾಬ್ದಾರಿ ಬಗ್ಗೆ ಚಿಂತಿಸುತ್ತೀರಿ

ದುರ್ಗಾದೇವಿ ಪ್ರಾರ್ಥನೆ ಮಾಡಬೇಕು

 

ಸಿಂಹ ರಾಶಿ

ನಿಮ್ಮ ಯೋಜನೆಗಳ ಬಗ್ಗೆ ಸಂದೇಹ ಬೇಡ

ಭಾವುಕರಾಗಬೇಡಿ ದೃಢ ನಿರ್ಧಾರ ಮಾಡಬೇಕು

ಅಪಾಯಕಾರಿ ಹೂಡಿಕೆಯಿಂದ ದೂರವಿರಿ

ಪ್ರೇಮಿಗಳಿಗೆ ಅತ್ಯಂತ ಶುಭದಿನ

ಹಣದ ಅಥವಾ ಲೆಕ್ಕಪತ್ರದ ವಿಚಾರಕ್ಕೆ ಗೊಂದಲವಿದೆ

ಮಾನಸಿಕ ಧೈರ್ಯದಿಂದ ಎಲ್ಲವನ್ನು ಗೆಲ್ಲುತ್ತೀರಿ

ಶಿವರಾಧನೆ ಮಾಡಬೇಕು

 

ಕನ್ಯಾ ರಾಶಿ

ನಿಮ್ಮ ಕಾರ್ಯವೈಖರಿಯನ್ನ ಜನ ವಿರೋಧಿಸುತ್ತಾರೆ

ಸಾಮಾಜಿಕ ನಿಯಮಗಳನ್ನು ಪಾಲಿಸಿ

ದಿನಚರಿಯಲ್ಲಿ ತುಂಬಾ ಸಮಸ್ಯೆ ಆಗಬಹುದು

ನಿಮ್ಮ ಅಭಿಪ್ರಾಯವನ್ನು ಬೇರೆಯವರ ಮೇಲೆ ಹಾಕಬೇಡಿ

ವೈಯಕ್ತಿಕ ವಿಚಾರಕ್ಕಾಗಿ ಜಗಳವಾಗುತ್ತೆ

ಸ್ವಾರ್ಥ ದೂರ ಮಾಡಿ ಶುಭ ಇದೆ

ನವಗ್ರಹರ ಪ್ರಾರ್ಥನೆ ಮಾಡಬೇಕು

 

ತುಲಾ ರಾಶಿ 

ಗುರಿ ಸಾಧನೆಗೆ ಶ್ರಮಿಸುತ್ತೀರಿ

ವ್ಯಾಪಾರ ಚಟುವಟಿಕೆಗಳು ವೇಗ ಪಡೆಯುತ್ತವೆ

ಪಾಠ ಪ್ರವಚನಗಳಲ್ಲಿ ಹೆಚ್ಚಿನ ಆಸಕ್ತಿ

ಹಿರಿಯರ ಆಶೀರ್ವಾದ ಪಡೆಯುತ್ತೀರಿ

ಅಧಿಕಾರಗಳು ನಿಮ್ಮನ್ನು ಮೆಚ್ಚುತ್ತಾರೆ

ತುಂಬಾ ಜಾಣ್ಮೆಯಿಂದ ಕೆಲಸ ನಿರ್ವಹಿಸಬೇಕು

ಮೃತ್ಯುಂಜಯನ ಪ್ರಾರ್ಥನೆ ಮಾಡಬೇಕು

 

ವೃಶ್ಚಿಕ ರಾಶಿ 

ಹೊಸ ಜನರನ್ನು ಬೇಗ ನಂಬಬಾರದು

ಕಷ್ಟಕರವಾದ ಜವಾಬ್ದಾರಿ ನಿಮ್ಮ ಹೆಗಲೇರಬಹುದು

ಕಠಿಣ ಪರಿಶ್ರಮಕ್ಕೆ ಪ್ರತಿಫಲ ಇದೆ

ನಿಂತುಹೋದ ಕೆಲಸಗಳಿದ್ದರೆ ಪುನರಾರಂಭಿಸಿ

ಕಾರಣಾಂತರಗಳಿಂದ ಕುಟುಂಬದವರು ನಿಮ್ಮ ಮಾತನ್ನು ಒಪ್ಪುವುದಿಲ್ಲ

ಹಣದ ವಿಚಾರಕ್ಕಾಗಿ ವಾದವಾಗಬಹುದು

ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಬೇಕು

 

 

ಧನಸ್ಸು ರಾಶಿ

ಆಸ್ತಿ ವಿಚಾರದಲ್ಲಿ ಲಾಭದ ಸೂಚನೆ ಇದೆ

ಯುವಕರು ಭವಿಷ್ಯ ರೂಪಿಸಿಕೊಳ್ಳುವುದಕ್ಕೆ ಶ್ರಮ ಪಡಬೇಕು

ವಿಚಾರ ವಿನಿಮಯದಿಂದ ಸಮಾಧಾನ

ತಾಳ್ಮೆ ಇರಲಿ ಶುಭ ಇದೆ

ನಿಮ್ಮ ನಿರೀಕ್ಷಿತ ಫಲಿತಾಂಶ ಇಂದು ಸಿಗಲಿದೆ

ಸಮಯದ ಸದುಪಯೋಗವಾಗಲಿ

ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಬೇಕು

 

ಮಕರ ರಾಶಿ 

ಕಾರ್ಯಕ್ಷೇತ್ರದಲ್ಲಿ ಅಧಿಕ ಸಮಸ್ಯೆಗಳು

ಅದೃಷ್ಟ ಒಲವು ತೋರುವುದಿಲ್ಲ

ಬೇರೆಯವರ ಅವಲಂಬನೆ ಬೇಡ

ಪ್ರತಿ ಕೆಲಸಕ್ಕೆ ಸಮಯದ ನಿಗಧಿಯಿರಲಿ

ಮಕ್ಕಳಿಗೆ ಸರಿಯಾದ ತಿಳುವಳಿಕೆ ನೀಡ ಬೇಕು

ಪ್ರಯಾಣದಿಂದ ಶ್ರಮ ಅನುಕೂಲವಿದೆ

ಶಕ್ತಿ ದೇವತಾ ಆರಾಧನೆ ಮಾಡಬೇಕು

 

ಕುಂಭ ರಾಶಿ

ವ್ಯಾಪಾರಸ್ಥರಿಗೆ ಶುಭ ಲಾಭ ಇದೆ

ಕೌಟುಂಬಿಕ ವಿಚಾರದಲ್ಲಿ ತೃಪ್ತಿ  ಸಿಗುತ್ತೆ

ಸಾಂಸಾರಿಕವಾಗಿ ಹಲವು ಶುಭ ಸಂದರ್ಭಗಳು

ಹಿರಿಯರ ಮಾರ್ಗದರ್ಶನದಿಂದ ಲಾಭ ಸಿಗುತ್ತದೆ

ನಿಮ್ಮ ಅನುಭವಕ್ಕೆ ತಕ್ಕ ಬೆಲೆ  ಸಿಗುತ್ತದೆ

ಮಾನಸಿಕ ನೆಮ್ಮದಿಗೆ ಪ್ರಯತ್ನಿಸುತ್ತೀರಿ

ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು

 

ಮೀನ  ರಾಶಿ 

ಆತ್ಮವಿಶ್ವಾಸದಿಂದ ಮುನ್ನುಗ್ಗುವ ಸಮಯವಿದು

ಮನೆಯ ದುರಸ್ತಿಯ ಬಗ್ಗೆ ಚಿಂತನೆ ಇರಬಹುದು

ಎಲ್ಲವೂ ನೀವಂದುಕೊಂಡ ರೀತಿಯಲ್ಲಿ ಆಗುತ್ತದೆ

ವಿಶೇಷವಾದ ಯೋಜನೆಗಳಿಂದ ಸಂತೋಷವಾಗುತ್ತದೆ

ಹಳೆಯ ಸ್ನೇಹಿತರೊಂದಿಗೆ ಮಾತು ಅದರಿಂದ ಸಂತಸವಾಗುತ್ತೆ

ಮಂಗಳ ಕಾರ್ಯಗಳ ವಿಚಾರ ಪ್ರಸ್ತಾಪಿಸಬಹುದು

ಚಂಡಿಕಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಬೇಕು

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?