ಕಾರಿನ ಟೈರ್ ಬ್ಲಾಸ್ಟ್, ಕಾರು ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ಸಾವು, ಐದು ಜನರಿಗೆ ಗಾಯ
1 min read
ಚಿಕ್ಕಬಳ್ಳಾಪುರ : ಕಾರಿನ ಟೈರ್ ಬ್ಲಾಸ್ಟ್ ಆಗಿ ಕಾರು ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ತಾಪ್ತಿಯ ಬಚ್ಚವಾರಹಳ್ಳಿ ಬಳಿ ನಡೆದಿದೆ. ಇನ್ನು ಅಪಘಾತದಲ್ಲಿ ಮೃತಪಟ್ಟವರನ್ನು ಬೆಂಗಳೂರಿನ ಗುರ್ರಪ್ಪನ ಪಾಳ್ಯದ 60 ವರ್ಷದ ವಹೀದ್, ಹಾಗೂ ಇವರ ಮಗ 26 ವರ್ಷದ ಸಕ್ಲೇನ್ ಎಂಬುವವರಾಗಿದ್ದಾರೆ. ಕಾರಿನಲ್ಲಿದ್ದ ಸರ್ದಾರ್ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ನಗೀನಾ, ಅಮಿರ್ನ್ ಸುಯೇಬ್, ಸೇರಿದಂತೆ ಇಬ್ಬರ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೋಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ.
ಇನ್ನು ಮುರುಗಮಲ್ಲ ದರ್ಗಾಗೆ ಹೋಗಿ ವಾಪಸ್ಸು ಬರುವಾಗ ಚಿಂತಾಮಣಿ ತಾಲೂಕು ಬಚ್ಚವಾರಪಲ್ಲಿ ಬಳಿ ಅಪಘಾತ ನಡೆದಿದೆ. ಅಪಘಾತವಾಗಿ ಒಂದು ಗಂಟೆಯಾದರು ಸ್ಥಳಕ್ಕೆ ಅಂಬ್ಯೂಲೇನ್ಸ್ ಬಾರದೆ ಇದ್ದರಿಂದ ಸ್ಥಳದಲ್ಲಿದ್ದ ಎ.ಎಸ್ಐ ಚಂದ್ರಪ್ಪರವರು ಗಾಯಾಲುಗಳನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರದಿದ್ದಾರೆ.ಇನ್ನೂ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಬಂದು ಪರಿಶೀಲನ ನಡೆಸಿದ್ದಾರೆ.
