[t4b-ticker]

ಬಜೆಟ್​ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿರುವ ಸಿಲಿಕಾನ್ ಸಿಟಿ ಜನರು..ಗ್ಯಾರಂಟಿ ಯೋಜನೆಗಳ ಹೊರೆಯ ನಡುವೆಯೂ ಸಿದ್ದು ಮೇಲೆ ಬೆಟ್ಟದಷ್ಟು ನಿರೀಕ್ಷೆ

1 min read
Share it

 

ಬೆಂಗಳೂರು: 2025-26ನೇ ಸಾಲಿನ ಕರ್ನಾಟಕ ಆಯವ್ಯಯವನ್ನು ಸಿಎಂ ಸಿದ್ದರಾಮಯ್ಯ ಅವರು ಮಂಡಿಸುತ್ತಿದ್ದು ಇದು ಅವರ 16ನೇ ಬಜೆಟ್ ಆಗಿದೆ. ಕರ್ನಾಟಕದ ಮುಖ್ಯಮಂತ್ರಿಗಳಲ್ಲಿ ಹೆಚ್ಚು ಬಜೆಟ್​ ಮಂಡನೆ ಮಾಡಿದವರಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಮೊದಲ ಸ್ಥಾನದಲ್ಲಿದ್ದಾರೆ. ಕಳೆದ ಬಾರಿ 3.71 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡನೆ ಮಾಡಿದ್ದರು. ಆದರೆ ಈ ಬಾರಿ ಇನ್ನು ಹೆಚ್ಚಿನ ಮೊತ್ತ ಹೊಂದಿದ ಬಜೆಟ್ ಮಂಡಿಸುತ್ತಿದ್ದಾರೆ. ಜೊತೆಗೆ ಸಿಎಂ ಸಿದ್ದರಾಮಯ್ಯರ ಬಜೆಟ್​ ಕುರಿತು ಜನರು ಕೂಡ ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ.

 

ಮುಂಗಡ ಪತ್ರದ ಗಾತ್ರವು 4.09 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸುತ್ತಿದ್ದಾರೆ. ಹೊಸ ಹೊಸ ಯೋಜನೆಗಳನ್ನು, ಅಭಿವೃದ್ಧಿ ಪೂರಕ ಕಾರ್ಯಕ್ರಮಗಳನ್ನು, ಕಾಮಗಾರಿ ಘೋಷಣೆ ಮಾಡಲಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು 2025ರ ಬಜೆಟ್​ ಅನ್ನು, ಬಜೆಟ್ ಎಂಬುದು ಬರಿ ಹಾಳೆಗಳ ಮೇಲಿನ ಲೆಕ್ಕವಲ್ಲ, ಕರ್ನಾಟಕ ರಾಜ್ಯದ 7 ಕೋಟಿ ಕನ್ನಡಿಗರ ಭವಿಷ್ಯ ರೂಪಿಸುವ ಕೈಪಿಡಿ ಎನ್ನುವುದು ನನ್ನ ನಂಬಿಕೆ ಎನ್ನುವಂತ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ.

 

ಸಿಎಂ ಸಿದ್ದರಾಮಯ್ಯ ಭಾಷಣದ ಹೈಲೈಟ್ಸ್

ಬಜೆಟ್ ಮಂಡನೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ

2025-26ನೇ ಸಾಲಿನ ಬಜೆಟ್ ಗಾತ್ರ- ₹4,09,549 ಲಕ್ಷ ಕೋಟಿ

2025-26ನೇ ಸಾಲಿನ ಬಜೆಟ್ ಮಂಡಿಸುತ್ತಿರುವ ಸಿಎಂ

4.09 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸುತ್ತಿರುವ ಸಿಎಂ

7 ಕೋಟಿ ಜನರ ಬದುಕಿನ ಭರವಸೆಯ ಉಸಿರು ಬಜೆಟ್

ಕುವೆಂಪು ಬರೆದ ಪದ್ಯ ಹೇಳಿದ ಸಿಎಂ ಸಿದ್ದರಾಮಯ್ಯ

ರಾಜ್ಯದ ಪ್ರತಿ ಪ್ರಜೆಯ ಕನಸು ಸಾಕಾರಗೊಳಿಸೋ, ನಾಳೆಯ ಭರವಸೆ

ಬ್ರ್ಯಾಂಡ್​ ಬೆಂಗಳೂರು ಹೆಸರಲ್ಲಿ ಮಹತ್ವದ ಯೋಜನೆಗಳು ಜಾರಿ

1 ಲಕ್ಷ ಕೋಟಿಗೂ ಅಧಿಕ ಮೊತ್ತದ ಹಣ ಸರ್ಕಾರದ ಫಲಾನುಭವಿಗಳಿಗೆ ನೀಡಲಾಗಿದೆ

ಕಲ್ಯಾಣ ಇಲಾಖೆಗಳ ಮೂಲಕ ಅಸಹಾಕರ ಅಭಿವೃದ್ಧಿಗೆ ಹೊತ್ತು ನೀಡಲಾಗಿದೆ

ಇಂಧನ ಇಲಾಖೆಗೆ 26,896 ಕೋಟಿ ರೂಪಾಯಿ ಅನುದಾನ

ಪಶುಸಂಗೋಪನೆ ಹಾಗೂ ಮೀನುಗಾರಿಕೆಗೆ 3,977 ಕೋಟಿ ರೂಪಾಯಿ

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್​ ಇಲಾಖೆಗೆ 26,735 ಕೋಟಿ ರೂ. ಅನುದಾನ

ಬಿಸಿಯೂಟ ಕಾರ್ಯಕರ್ತೆಯರ ಗೌರವಧನವು 1000 ರೂಪಾಯಿ ಹೆಚ್ಚಳ

ನೀರಾವರಿ ಇಲಾಖೆಗೆ 22,181 ಕೋಟಿ ರೂಪಾಯಿ ನೀಡಲಾಗಿದೆ

ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ 6 ದಿನಗಳಿಗೆ ವಿಸ್ತರಣೆ

ವಾರದಲ್ಲಿ 6 ದಿನ ಮೊಟ್ಟೆ, ಬಾಳೆಹಣ್ಣ ವಿತರಣೆ ಮಾಡಲು 1,500 ಕೋಟಿ ರೂಪಾಯಿ

ಗ್ಯಾರಂಟಿ ಕೊಡುಗೆಗಳು ಅಲ್ಲ, ಅವುಗಳೆಲ್ಲಾ ಸಾಮಾಜಿಕ ತತ್ವದ ಹೂಡಿಕೆ

ಕೃಷಿ ಯಾಂತ್ರಿಕರಣ ಕಾರ್ಯಕ್ರಮದಡಿ 50 ಸಾವಿರ ರೈತರಿಗೆ ನೆರವು

ಬೆಂಗಳೂರಿನ ಅನುಧಾನ 7 ಸಾವಿರ ಕೋಟಿ ರೂಪಾಯಿಗೆ ಏರಿಕೆ

ಸಿಲಿಕಾನ್ ಸಿಟಿಯಲ್ಲಿ ವಿಶೇಷ ಪರ್ಪಲ್ ವಾಹನಗಳ ಸ್ಥಾಪನೆ

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?