ದಾಖಲೆಯ ಬಜೆಟ್ ಮಂಡನೆಗೆ ಸಿಎಂ ಸಿದ್ದರಾಮಯ್ಯ ರೆಡಿ
1 min read
ಬೆಂಗಳೂರು: ಇಂದು ಕರ್ನಾಟಕದ ಪಾಲಿಗೆ ಅತ್ಯಂತ ಮಹತ್ವದ ದಿನ. ಸಿಎಂ ಸಿದ್ದರಾಮಯ್ಯ ಇಂದು ತಮ್ಮ ದಾಖಲೆಯ 16ನೇ ಬಜೆಟ್ ಮಂಡನೆ ಮಾಡುತ್ತದ್ದಾರೆ. ಗ್ಯಾರಂಟಿ ಹೊರೆ, ಅನುದಾನದ ಕೊರತೆ ನಡುವೆಯೂ ಸಮತೋಲಿತ, ವಾಸ್ತವದ ಬಜೆಟ್ ಮಂಡನೆ ಮಾಡುವ ಲೆಕ್ಕಾಚಾರದಲ್ಲಿ ಸಿಎಂ ಸಿದ್ದರಾಮಯ್ಯ ಇದ್ದಾರೆ. ಹೀಗಾಗಿ ಇಡೀ ರಾಜ್ಯದ ಜನರು ನಿರೀಕ್ಷೆಗಣ್ಣಿನಿಂದ ಸಿದ್ದರಾಮಯ್ಯರ ಸೂಟ್ಕೇಸ್ನಲ್ಲಿ ಏನೆಲ್ಲ ಲೆಕ್ಕ ಅಡಗಿದೆ ಎಂದು ತುದಿಗಾಲಲ್ಲಿ ನಿಂತು ಕಾಯ್ತಿದ್ದಾರೆ.
ಒಂದು ಕಡೆ ಗ್ಯಾರಂಟಿಗಳ ಹೊರೆ. ಮತ್ತೊಂದು ಕಡೆ ಬೃಹತ್ ಯೋಜನೆಗಳಿಗೆ ಅನುದಾನದ ಕೊರತೆ. ಮತ್ತೊಂದು ಕಡೆ ರಾಜಸ್ವ ಕೊರತೆಯ ನಡುವೆ ಸಾಲ ಪಡೆದು, ಆರ್ಥಿಕ ಶಿಸ್ತು ಕಾಪಾಡಬೇಕಾದ ಅನಿವಾರ್ಯತೆ. ಈ ಎಲ್ಲ ಸವಾಲುಗಳ ನಡುವೆ ಇಂದು ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಲು ಸಿದ್ಧರಾಗಿದ್ದಾರೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ 16ನೇ ಬಜೆಟ್ ಮಂಡನೆ ಮಾಡಲಿದ್ದಾರೆ.
ಮುಖ್ಯಮಂತ್ರಿಯಾಗಿ ಅವರು 9ನೇ ಬಜೆಟ್ ಮಂಡಿಸಲಿದ್ದಾರೆ. ಹೀಗಾಗಿ ಸಿದ್ದು ಬಜೆಟ್ ಲೆಕ್ಕ ಹೇಗಿರಲಿದೆ ಎಂದು ಇಡೀ ರಾಜ್ಯವೇ ಕುತೂಹಲ ಮತ್ತು ನಿರೀಕ್ಷೆ ಗಣ್ಣಿನಿಂದ ಎದುರು ನೋಡ್ತಿದೆ. ಈ ಬಾರಿ ಸಮತೋಲಿತ, ವಾಸ್ತವದ ಬಜೆಟ್ ಮಂಡನೆಯ ಪ್ಲಾನ್ ಮಾಡಿರುವ ಸಿಎಂ, ಹೊಸ ಯೋಜನೆ ಜೊತೆಗೆ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ.
ಈ ಬಾರಿ ಬಜೆಟ್ ಗಾತ್ರ 4 ಲಕ್ಷ ಕೋಟಿ ದಾಟುವ ಸಾಧ್ಯತೆ
ಕಳೆದ ಬಾರಿ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಿದ್ರು. ಈ ಬಾರಿ ಆರ್ಥಿಕ ಶಿಸ್ತು ಕಾಪಾಡುವ ತುಂಬಾ ಬುದ್ಧಿವಂತಿಕೆಯ. ಆದಷ್ಟೂ ವಾಸ್ತವ ಹಾಗೂ ಸಮತೋಲಿತ ಬಜೆಟ್ ಮಂಡಿಸಲು ಸರ್ವ ತಯಾರಿ ಮಾಡಿದ್ದಾರೆ. ಕಳೆದ ಬಾರಿ 3.71ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಲಾಗಿತ್ತು. ಈ ಬಾರಿ ಅದು 4 ಲಕ್ಷ ಕೋಟಿ ದಾಟುವ ಸಾಧ್ಯತೆ ದಟ್ಟವಾಗಿದೆ. ದಾಖಲೆಯ 16ನೇ ಬಜೆಟ್ ಮಂಡನೆ ಸಿದ್ಧವಾಗಿರುವ ಸಿದ್ದರಾಮಯ್ಯಗೆ ಮಂಡಿ ನೋವು ಬಾಧಿಸುತ್ತಿದೆ. ಹೀಗಾಗಿ ಅವರು ಕುಳಿತುಕೊಂಡೇ ಆಯವ್ಯಯ ಮಂಡಿಸಲಿದ್ದಾರೆ ಎನ್ನಲಾಗ್ತಿದೆ. ಇಂದು ಬೆಳಗ್ಗೆ 9.45ಕ್ಕೆ ಸಿಎಂ ಸಿದ್ದರಾಮಯ್ಯ ವಿಶೇಷ ಸಂಪುಟ ಸಭೆ ನಡೆಸಲಿದ್ದಾರೆ. ಈ ವೇಳೆ ಸಭೆಯಲ್ಲಿ ಬಜೆಟ್ಗೆ ಒಪ್ಪಿಗೆ ಪಡೆದ ಬಳಿಕ ಸದನದಲ್ಲಿ ಮಂಡನೆ ಮಾಡಲಿದ್ದಾರೆ. ಮಂಡಿ ನೋವಿನ ಕಾರಣ ಅವರು ಕುಳಿತುಕೊಂಡೇ ಬಜೆಟ್ ಮಂಡಿಸುವ ಸಾಧ್ಯತೆ ಇದೆ. ಬೆಳಗ್ಗೆ 10.15 ನಿಮಿಷಕ್ಕೆ ಬಜೆಟ್ ಪ್ರತಿ ಓದಲು ಆರಂಭಿಸಲಿರುವ ಸಿಎಂ, ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಬಜೆಟ್ನಲ್ಲಿ ಮಂಡಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಬಜೆಟ್ ನಿರೀಕ್ಷೆಗಳೇನು?
ಈ ಪೈಕಿ ಜನವರಿವರೆಗೆ 2,21,297 ಕೋಟಿ ರೂ. ಅನುದಾನ ಬಿಡುಗಡೆ
2024-25ರ ವರ್ಷದ 10 ತಿಂಗಳಲ್ಲಿ ಇಲಾಖಾವಾರು ಒಟ್ಟು 62% ಪ್ರಗತಿ
ಉಳಿದಿರುವ 1 ತಿಂಗಳಲ್ಲಿ ಸುಮಾರು 38% ಆರ್ಥಿಕ ಪ್ರಗತಿ ಕಾಣಬೇಕಿದೆ
ಎಲ್ಲಾ ಇಲಾಖೆಗಳಿಗೆ 3,22,042 ಕೋಟಿ ರೂ. ಬಜೆಟ್ ಅನುದಾನ ಹಂಚಿಕೆ
ಉಳಿದಿರುವ 1 ತಿಂಗಳಲ್ಲಿ ಸುಮಾರು 38% ರಷ್ಟು ಆರ್ಥಿಕ ಪ್ರಗತಿ ಕಾಣಬೇಕಿದೆ
ಸಂಪನ್ಮೂಲಗಳ ಕ್ರೋಢೀಕರಣದ ಸವಾಲಿನ ಮಧ್ಯೆ ಬಜೆಟ್ ಮಂಡನೆ
ಇದ್ರಲ್ಲಿ ಜನವರಿವರೆಗೆ 1,99,930 ಕೋಟಿ ರೂ. ಖರ್ಚು ಮಾಡಲಾಗಿದೆ
ಇನ್ನು ಜನವರಿವರೆಗೆ 21,367 ಕೋಟಿ ರೂ. ಖರ್ಚು ಆಗದೇ ಉಳಿದಿದೆ
2023-24 ಸಾಲಿನ ಈ ಅವಧಿಗೆ 73.19% ರಷ್ಟು ಆರ್ಥಿಕ ಪ್ರಗತಿ ಆಗಿತ್ತು
ಕಳೆದ ಆರ್ಥಿಕ ವರ್ಷಕ್ಕೆ ಇದೇ ಅವಧಿಗೆ ಹೋಲಿಸಿದ್ರೆ ಆರ್ಥಿಕ ಪ್ರಗತಿ ಕುಂಠಿತ
ಇಲಾಖಾವಾರು ಒಟ್ಟು ಆರ್ಥಿಕ ಪ್ರಗತಿ ಸುಮಾರು 11% ಕುಂಠಿತ ಕಂಡಿದೆ
ಅಂತಿಮ 2 ತಿಂಗಳಲ್ಲಿ 1,00,745 ಕೋಟಿ ರೂ. ಅನುದಾನ ವಿನಿಯೋಗ ಬಾಕಿ
ಹೀಗಾಗಿ ಬಜೆಟ್ ಅನುಷ್ಠಾನದ ಆರ್ಥಿಕ ಪ್ರಗತಿಗೆ ಇನ್ನಷ್ಟು ವೇಗ ನೀಡಬೇಕಾಗಿದೆ
