[t4b-ticker]

ಚಾಂಪಿಯನ್ಸ್​ ಟ್ರೋಫಿ ಸೆಮಿಫೈನಲ್​ ಪಂದ್ಯ..ಭಾರತ ತಂಡದ ಮಾನ ಕಾಪಾಡಿದ ಕನ್ನಡಿಗ KL ರಾಹುಲ್​​

1 min read
Share it

 

ಐಸಿಸಿ 2025ರ ಚಾಂಪಿಯನ್ಸ್​ ಟ್ರೋಫಿ ದುಬೈ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಿತು. ಸೆಮಿಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಬಗ್ಗುಬಡಿದಿದೆ. ಟಾಸ್​ ಗೆದ್ದು ಫಸ್ಟ್​ ಬ್ಯಾಟಿಂಗ್​ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಭಾರತಕ್ಕೆ 265 ರನ್​ಗಳ ಸಾಧಾರಣ ಟಾರ್ಗೆಟ್​ ನೀಡಿತ್ತು. ಈ ಗುರಿಯನ್ನು ಟೀಮ್​ ಇಂಡಿಯಾ ಇನ್ನೂ 2 ಓವರ್​ ಬಾಕಿ ಇರುವಂತೆಯೇ ಗೆದ್ದು ಬೀಗಿದ್ದಾರೆ. ಭಾರತ ತಂಡದ ಗೆಲುವಿನಲ್ಲಿ ಕೆ.ಎಲ್​ ರಾಹುಲ್​ ಪ್ರಮುಖ ಪಾತ್ರವಹಿಸಿದ್ರು.

 

ಶುಭ್ಮನ್​ ಗಿಲ್​ ವಿಕೆಟ್​ ಬಿದ್ದ ನಂತರ ಕ್ರೀಸ್​ಗೆ ಬಂದ ವಿರಾಟ್​ ಕೊಹ್ಲಿ ಸ್ಫೋಟಕ ಬ್ಯಾಟಿಂಗ್​ ಮಾಡಿದರು.  ಆಸ್ಟ್ರೇಲಿಯಾ ತಂಡದ ಬೌಲರ್​ಗಳನ್ನು ಕಾಡಿ ಅಮೋಘ ಬ್ಯಾಟಿಂಗ್​ ಪ್ರದರ್ಶಿಸಿದರು.  ತಾನು ಎದುರಿಸಿದ 96 ಬಾಲ್​ನಲ್ಲಿ 84 ರನ್​ ಚಚ್ಚಿದರು.  ಈ ಪೈಕಿ 5 ಬೌಂಡರಿಗಳು ಸೇರಿವೆ. ಕೆ.ಎಲ್​ ರಾಹುಲ್  ಇವರಿಗೆ ಸಾಥ್​ ನೀಡಿ ಅಬ್ಬರಿಸಿದರು.

 

ವಿಕೆಟ್​ ಬೀಳುತ್ತಿದ್ರೂ ಕೊನೆವರೆಗೂ ಕ್ರೀಸ್​ನಲ್ಲೇ ನಿಂತು ಆಡಿದ ಕೆ.ಎಲ್​ ರಾಹುಲ್​ 2 ಭರ್ಜರಿ ಸಿಕ್ಸರ್​, 2 ಫೋರ್​ ಸಮೇತ 42 ರನ್​​ ಬಾರಿಸಿದರು. ಈ ಮೂಲಕ ಭಾರತ ತಂಡವನ್ನು ಗೆಲ್ಲಿಸಿದರು. ಬಿರುಸಿನ ಬ್ಯಾಟಿಂಗ್​ ಮಾಡಿ ಭಾರತ ತಂಡದ ಮಾನವನ್ನು ಕಾಪಾಡಿದರು.

 

ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ವಿಕೆಟ್​ ಕೀಪಿಂಗ್​ನಲ್ಲಿ ಸ್ಥಿರ ಪ್ರದರ್ಶನ ನೀಡಿ ಕೆ.ಎಲ್​​ ರಾಹುಲ್​​​ ಬೆಸ್ಟ್​​ ಫೀಲ್ಡಿಂಗ್​ ಅವಾರ್ಡ್​ಗೆ ಭಾಜನರಾದ್ರು. ಇದಾದ ಬಳಿಕ ನಡೆದ 2​ ಪಂದ್ಯಗಳಲ್ಲೂ ಕನ್ನಡಿಗ ಕೆ.ಎಲ್​ ರಾಹುಲ್​​​ ತಮ್ಮ ಫಾರ್ಮ್​​​ ಕಾಯ್ದುಕೊಳ್ಳುವಲ್ಲಿ ಎಡವಿದರು. ವಿಕೆಟ್​ ಕೀಪಿಂಗ್​​ ಮತ್ತು ಬ್ಯಾಟಿಂಗ್​​ನಲ್ಲಿ ವೈಫಲ್ಯ ಅನುಭವಿಸಿದ್ರು ಎನ್ನುವ ಮಾತುಗಳು ಕೇಳಿ ಬಂದಿದ್ದರುವು. ಹೀಗಾಗಿ ರಾಹುಲ್​​ಗೆ ಕೊಕ್​​ ನೀಡಿ ಪಂತ್​ಗೆ ಅವಕಾಶ ನೀಡಲಾಗುವುದು ಎನ್ನುವ ಮಾಹಿತಿ ಲಭ್ಯವಾಗಿತ್ತು.

ಕೆಎಲ್ ರಾಹುಲ್‌ ನ್ಯೂಜಿಲೆಂಡ್ ವಿರುದ್ಧ ವಿಕೆಟ್‌ ಕೀಪರ್ ಆಗಿ ಹಲವು ತಪ್ಪುಗಳನ್ನು ಮಾಡಿದ್ರು. ಇದು ಭಾರತ ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಆದ್ದರಿಂದ ಸೆಮಿಫೈನಲ್​​ ಪಂದ್ಯಕ್ಕೆ ಕೆ.ಎಲ್​ ರಾಹುಲ್​ಗೆ ರೆಸ್ಟ್​ ನೀಡಿ ಪಂತ್​ ಅವರನ್ನು ಆಡಿಸಲಾಗುವುದು ಎನ್ನಲಾಗಿತ್ತು. ಆದ್ರೂ, ಕೆ.ಎಲ್​ ರಾಹುಲ್​ ಮೇಲೆ ನಂಬಿಕೆ ಇಟ್ಟು ಮತ್ತೊಂದು ಚಾನ್ಸ್​ ನೀಡಲಾಯ್ತು. ಕೆ.ಎಲ್​​ ರಾಹುಲ್​ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡರು.

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?