Airtel, Vi, Jio ; ಸಿಮ್ ಬಳಕೆದಾರರಿಗೆ ಬಿಗ್ ಶಾಕ್..ರೀಚಾರ್ಜ್ ದರದಲ್ಲಿ ಏರಿಕೆ
1 min read
Airtel, Jio, Vi ಕಂಪನಿಗಳು ತಮ್ಮ ರೀಚಾರ್ಜ್ ಯೋಜನೆಗಳನ್ನು ಪರಿಷ್ಕರಿಸಿವೆ. ಬದಲಾವಣೆಯ ನಂತರ ಯೋಜನೆಗಳು 600 ರೂಪಾಯಿವರೆಗೆ ದುಬಾರಿಯಾಗಿವೆ. ಕಂಪನಿಗಳು ಎಲ್ಲಾ ಯೋಜನೆಗಳನ್ನು ಅಲ್ಪಾವಧಿಯಿಂದ ದೀರ್ಘಾವಧಿಯವರೆಗೆ ಪರಿಷ್ಕರಿಸಿವೆ. ಹೀಗಾಗಿ ನೀವು ಸಿಮ್ ಸಕ್ರಿಯವಾಗಿಡಲು ಹೆಚ್ಚು ಖರ್ಚು ಮಾಡಬೇಕಾಗುತ್ತದೆ.
ರಿಲಯನ್ಸ್ ಜಿಯೋ ತನ್ನ ರೀಚಾರ್ಜ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಿದೆ. ಜಿಯೋ ಸಿಮ್ ಬಳಕೆದಾರರು ಸಕ್ರಿಯವಾಗಿಡಲು 149 ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಈ ಯೋಜನೆಯಲ್ಲಿ 1 ಜಿಬಿ ದೈನಂದಿನ ಡೇಟಾ, ಅನಿಯಮಿತ ಕರೆ ಹಾಗೂ 100 ಎಸ್ಎಂಎಸ್ ಸೌಲಭ್ಯ ಪಡೆಯುತ್ತಾರೆ. ಜೊತೆಗೆ ಗ್ರಾಹಕರು ಜಿಯೋ ಕ್ಲೌಡ್, ಜಿಯೋ ಸಿನಿಮಾ, ಜಿಯೋ ಟಿವಿ ಪ್ರವೇಶವನ್ನು ಪಡೆಯುತ್ತಾರೆ. ರಿಲಯನ್ಸ್ ಜಿಯೋದ ಈ ಯೋಜನೆಯು 14 ದಿನಗಳ ಮಾನ್ಯತೆ ಇದೆ.
Vodafone Idea ಅಂದರೆ Vi ತನ್ನ ಯೋಜನೆಯಲ್ಲಿ ಕನಿಷ್ಠ 99 ರೂಪಾಯಿ ರೀಚಾರ್ಜ್ ಮಾಡಬೇಕಾಗುತ್ತದೆ. 99 ರೂಪಾಯಿ ಟಾಕ್ ಟೈಮ್ ಮತ್ತು 15 ದಿನಗಳ ಮಾನ್ಯತೆಯೊಂದಿಗೆ ದಿನಕ್ಕೆ 200 ಎಂಬಿ ಡೇಟಾ ನೀಡುತ್ತಿದೆ. ಗ್ರಾಹಕರು ಪ್ರತಿ ಸೆಕೆಂಡ್ಗೆ 2.5 ಪೈಸೆ ದರದಲ್ಲಿ ಕರೆಗಳನ್ನು ಮಾಡಬಹುದಾಗಿದೆ. ಇನ್ನು ಏರ್ಟೆಲ್ 199 ರೂಪಾಯಿ ರೀಚಾರ್ಜ್ ಯೋಜನೆಯನ್ನು ಪರಿಚಯಿಸುತ್ತಿದೆ. ಇದು 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಪ್ಲಾನ್ನಡಿ ಅನಿಯಮಿತ ಫೋನ್ ಕರೆ, 100 ಎಸ್ಎಂಎಸ್ ಹಾಗೂ 2 ಜಿಬಿ ಡೇಟಾ ಸಿಗಲಿದೆ.
