ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಪೋಕ್ಸೋ ಪ್ರಕರಣ ದಾಖಲು.
1 min read
ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಪೋಕ್ಸೋ ಪ್ರಕರಣ ದಾಖಲು.
ಬೆಂ, ಆನೇಕಲ್,ಮಾ,05: ಎರೆಡು ದಿನದ ಹಿಂದೆ ಶಾಲೆಯಿಂದ ಮದ್ಯಾಹ್ನ ಊಟಕ್ಕೆ ಬಿಟ್ಟ ಸಂದರ್ಭದಲ್ಲಿ ಹೊರಟ 4ನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ರಾತ್ರಿ ಪತ್ತೆಯಾದ ಘಟನೆ ಆನೇಕಲ್ ಪೊಲೀಸ್ ಠಾಣಾ ಪರಿಧಿಯ ಬಿದರಗೆರೆಯಲ್ಲಿ ನಡೆದಿದೆ.
ಶಾಲೆಯಿಂದ ರಸ್ತೆಗಿಳಿದಿದ್ದ ಮಗು ನಾಪತ್ತೆಯಾಗಿದ್ದು ಮರಳಿ ಶಾಲೆಗೆ ಮದ್ಯಾಹ್ನದ ನಂತರ ಬಾರದಿದ್ದನ್ನು ಕಂಡ ಶಾಲಾ ಶಿಕ್ಷಕಿ ಊರೆಲ್ಲಾ ಹುಡುಕಿದರೂ ಸಿಕ್ಕಿರಲಿಲ್ಲ.
ಪೋಷಕರಾಧಿಯಾಗಿ ಇಡೀ ಮದ್ಯಾಹ್ನವೂ ಸಿಕ್ಕಿರಲಿಲ್ಲ.
ರಾತ್ರಿ ಮರಳಿ 7.30ಕ್ಕೆ ಮನೆಗೆ ಸುಟ್ಟ ಬಟ್ಟೆಯಲ್ಲಿ ಬಂದ ಮಗುವನ್ನು ವಿಚಾರಿಸಿದಾಗ ವಿಚಲಿತಳಾಗಿದ್ದಳು.
ಅನಂತರ ಬೆಳಗ್ಗೆ ಮಗಳೊಂದಿಗೆ ಶಾಲೆಗೆ ತಾಯಿ ಕರೆತಂದಿದ್ದಾಳೆ. ಆಗ ಬಾಲಕಿಯನ್ನು ಕೂಲಂಕುಷವಾಗಿ ವಿಚಾರಿಸಿದಾಗ ಶಾಲೆಯಿಂದ ಹೊರ ಬಂದಾಗ ರಸ್ತೆಯಲ್ಲಿ ಪ್ರಜ್ಞೆ ತಪ್ಪಿತ್ತು, ಅನಂತರ ಗ್ರಾಮದ ಸ್ನೇಹಿತೆ ಮನೆಯಲ್ಲಿ ಬಾಲಕಿ ಇದ್ದು ಇಬ್ಬರು ಬಾಲಕರು ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಬಾಲಕಿ ಬಾಯಿ ಬಿಟ್ಟಿದ್ದಾಳೆ. ತಕ್ಷಣ ಶಿಕ್ಷಕಿ ಆನೇಕಲ್ ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿಗಳ ಕಚೇರಿಗೆ ಬಂದು ವಿಷಯ ಮುಟ್ಟಿಸಿದ್ದಾರೆ. ಅನಂತರ ಜಿಲ್ಲಾ ಸಂರಕ್ಷಣಾಧಿಕಾರಿ ಉಮಾ ನೀಡಿದ ದೂರಿನನ್ವಯ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯಿದೆಯಂತೆ ನಿನ್ನೆ ದೂರು ದಾಖಲಾಗಿದೆ.
ದೂರು ದಾಖಲಾದ ನಂತರ ಪಿಐ ತಿಪ್ಪೇಸ್ವಾಮಿ ಬಿಎಂ ಸ್ಥಳಕ್ಕೆ ಧಾವಿಸಿ ತನಿಖೆ ಮುಂದುವರೆಸಿದ್ದಾರೆ.
