c24kannada

ವಸ್ತುಸ್ಥಿತಿಯತ್ತ

ಅಕ್ರಮ ಚಿನ್ನ ಸಾಗಾಟ ಆರೋಪ: ಮಾಣಿಕ್ಯ ಸಿನಿಮಾ ಖ್ಯಾತಿಯ ನಟಿ ವಶಕ್ಕೆ ಪಡೆದ DRI ತಂಡ

Share it

ಕನ್ನಡದ ‘ಮಾಣಿಕ್ಯ’ ಚಿತ್ರದಲ್ಲಿ ನಟಿಸಿದ್ದ ರನ್ಯಾ ರಾವ್ ಅವರು ಅಕ್ರಮ ಚಿನ್ನ ಸಾಗಾಟ ಆರೋಪದಲ್ಲಿ ಸಿಕ್ಕಿ ಬಿದ್ದಿದ್ದಾರೆ. ಈ ವಿಚಾರ ಸೆನ್ಸೇನ್ ಸೃಷ್ಟಿ ಮಾಡಿತ್ತು. ಈಗ ಈ ವಿಚಾರ ಮತ್ತಷ್ಟು ಸೆನ್ಸೇಷನ್ ಸೃಷ್ಟಿಸುವ ರೀತಿಯಲ್ಲಿ ಇದೆ. ದುಬೈನಿಂದ ಬಂದಿದ್ದ ಅವರ ಬಳಿ ಇದ್ದಿದ್ದು ಒಂದಲ್ಲ, ಎರಡಲ್ಲ ಬರೋಬ್ಬರಿ 14.8 ಕೆಜಿ ಚಿನ್ನ! ಈ ವಿಚಾರ ಕೇಳಿ ಅನೇಕರು ಹೌಹಾರಿದ್ದಾರೆ.

 

ನಟಿ ರನ್ಯಾ ರಾವ್ ಅವರು 2014 ರ ಸುದೀಪ್ ನಾಯಕನಾಗಿ ನಟಿಸಿದ ಸೂಪರ್ ಹಿಟ್ ಸಿನಿಮಾ ಮಾಣಿಕ್ಯ  ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಇದೀಗ ನಟಿ ರನ್ಯಾ ರಾವ್ ರಿಂದ ಅಕ್ರಮ ಚಿನ್ನ ಸಾಗಾಟ ಆರೋಪ ಕೇಳಿ ಬಂದಿದೆ. ವಿದೇಶದಿಂದ ಬಂದ ನಟಿಯನ್ನ DRI  ತಂಡ ವಶಕ್ಕೆ ಪಡೆದಿದೆ. ವಿದೇಶದಿಂದ ಹೆಚ್ಚುವರಿ ಗೋಲ್ಡ್ ತಂದಿರುವ ಆರೋಪದಲ್ಲಿ‌ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

 

ನಟಿ ರನ್ಯಾ ರಾವ್ ಆಗಾಗ ದುಬೈಗೆ ಹೋಗುತ್ತಿದ್ದರು. ಬಿಸ್ನೆಸ್ ಕೆಲಸದ ನಿಮಿತ್ತ ದುಬೈಗೆ ಹೋಗುತ್ತಿದ್ದಾಗಿ ಅವರು ಹೇಳುತ್ತಿದ್ದರು. ಅದೇ ರೀತಿ ಮಾರ್ಚ್ 3ರ ರಾತ್ರಿ ಕೂಡ ಅವರು ದುಬೈನಿಂದ ಬಂದಿದ್ದಾರೆ. ಈ ವೇಳೆ ಅವರನ್ನು ವಶಕ್ಕೆ ಪಡೆದಾಗ ಉಡುಪಿನ ಒಳಗೆ ಬರೋಬ್ಬರಿ 14.8 ಕೆಜಿ ಚಿನ್ನ ಸಿಕ್ಕಿದೆ.

12 ಕೋಟಿ ರೂಪಾಯಿ ಮೌಲ್ಯ

ಅನೇಕ ಬಾರಿ ದುಬೈಗೆ ಹೋಗಿ ಬರುತ್ತಿದ್ದರು ರನ್ಯಾ. ಈ ವಿಚಾರದಿಂದ ಕಸ್ಟಮ್​ನ ಡಿಆರ್​ಐ ಅಧಿಕಾರಿಗಳಿಗೆ ಅನುಮಾನ ಮೂಡಿತ್ತು. ಹೀಗಾಗಿ ದೆಹಲಿಯ DRI ಅಧಿಕಾರಿಗಳು ನಟಿಯ ಹಿಂದೆ ಬಿದ್ದಿದ್ದರು. ಅವರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಎರಡು ಗಂಟೆ ಮೊದಲೇ ಆಗಮಿಸಿದ್ದರು. ಈ ರೀತಿ ವಶಕ್ಕೆ ಪಡೆದ ಚಿನ್ನದ ಮೌಲ್ಯ ಸುಮಾರು 12 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ರನ್ಯಾ ರಾವ್ ಅನೇಕ ಬಾರಿ ಈ ರೀತಿ ಚಿನ್ನಸಾಗಾಣಿಗೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

Loading

Leave a Reply

Your email address will not be published. Required fields are marked *

error: Content is protected !!