ಗಂಡ ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯ.. ಕುಡಿದ ಮತ್ತಿನಲ್ಲಿ ಪತ್ನಿಯನ್ನು ಕೊಲೆಗೈದ ಪತಿ
ಬೆಂಗಳೂರು : ಓಡಿಸ್ಸಾದಿಂದ ಹೊಟ್ಟೆಪಾಡಿಗಾಗಿ ಕೂಲಿ ಕೆಲಸ ಮಾಡುತ್ತಿದ್ದ ದಂಪತಿ… ಗಂಡನ ಕುಡಿತದ ಚಟಕ್ಕೆ ಹೆಂಡತಿ ಬೇಸತ್ತು ಪ್ರತಿದಿನ ಜಗಳ ಆಡುತ್ತಿದ್ದಳು ಆದರೆ ಇದೇ ಜಗಳ ವಿಕೋಪಕ್ಕೆ ತಿರುಗಿ ಗಂಡನೆ ಹೆಂಡತಿಯನ್ನು ರಾಡ್ ನಿಂದ ಹಲ್ಲೆ ಮಾಡಿ ನೇಣು ಬಿಗಿದಿದ್ದಾನೆ ಇಷ್ಟಕ್ಕೂ ಇಂತಹ ಘಟನೆ ನಡೆದಿರುವುದು ಎಲ್ಲಿ ಸ್ಟೋರಿ ನೋಡಿ… ಮೃತ ದೇಹವಾಗಿ ಬಿದ್ದಿರುವ ಮಹಿಳೆಯ ಹೆಸರು ನೂಕಲಮ್ಮ ದೂರದ ಓಡಿಸ್ಸಾ ಮೂಲದವಳು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಗುಟ್ನಹಳ್ಳಿ ಗ್ರಾಮದ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಳು ಗಂಡ ಗೌರಿಶ್ ಪ್ರತಿದಿನ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ರಾತ್ರಿಯೂ ಸಹ ಇದೇ ರೀತಿ ಕುಡಿದು ಬಂದ ಗಂಡ ಹೆಂಡತಿಯೊಂದಿಗೆ ಗಲಾಟೆ ಶುರು ಮಾಡಿದ್ದ ಆದರೆ ಗಲಾಟೆ ವಿಕೋಪಕ್ಕೆ ತಿರುಗಿ ಇದೀಗ ಕಬ್ಬಿಣದ ರಾಡ್ ನಿಂದ ಹೊಡೆದು ನುಕಾಲಮ್ಮ ನನ್ನು ನೇಣು ಬಿಗಿದು ಕೊಲೆ ಮಾಡಿದ್ದಾನೆ….
ಇಂದು ಬೆಳಗ್ಗೆ ಗೌರೀಶ್ ನೂಕಲಮ್ಮ ನೀನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೈಡ್ರಾಮ ಸಹ ಮಾಡಿದ್ದಾನೆ ಆದರೆ ಅದನ್ನು ನಂಬದ ನೂಕಲಮ್ಮ ಮಗಳು ಹಾಗೂ ಸ್ಥಳೀಯರು ಗೌರಿಶನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಆಗ ಗೌರೀಶ್ ಕುಡಿದ ಮತ್ತಿನಲ್ಲಿ ಸಾಯಿಸಿರುವುದಾಗಿ ಒಪ್ಪಿಕೊಂಡಿದ್ದು ಸದ್ಯ ಆನೇಕಲ್ ಪೊಲೀಸರು ಗೌರೀಶನನ್ನು ದಸ್ತಗಿರಿ ಮಾಡಿದ್ದಾರೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ….ಒಟ್ನಲ್ಲಿ ಕುಡಿತದ ಚಟಕ್ಕೆ ದಾಸರಾಗಿ ಎಷ್ಟೋ ಮಂದಿ ತಮ್ಮ ಜೀವನವನ್ನೇ ಕಳೆದುಕೊಳ್ಳುತ್ತಿದ್ದಾರೆ ಇದಕ್ಕೆ ಈ ಘಟನೆ ತಾಜಾ ಉದಾಹರಣೆ ಎಂದೇ ಹೇಳಬಹುದು ಇನ್ನಾದರೂ ಇಂತಹ ಘಟನೆಗಳು ಮರುಕಳಿಸಿದರಲಿ ಎಂಬುದು ನಮ್ಮ ಆಶಯವಾಗಿದೆ.
![]()